ಕರಾವಳಿ

ಎಸ್.ಕೆ.ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರೀಯಲ್ ಕೋ-ಆಪರೇಟಿವ್ ಸೊಸೈಟಿಯ 60ನೇ ವಾರ್ಷಿಕ ಮಹಾಸಭೆಯಲ್ಲಿ ಎಸ್.ಕೆ.ಜಿ.ಐ. ಪಾಲ್ಕೆ ಪ್ರಶಸ್ತಿ ಪ್ರದಾನ

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು: ಎಸ್.ಕೆ.ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರೀಯಲ್ ಕೋ-ಆಪರೇಟಿವ್ ಸೊಸೈಟಿಯ 60ನೇ ವಾರ್ಷಿಕ ಮಹಾಸಭೆಯಲ್ಲಿ ಐದು ಮಂದಿ ಶಿಲ್ಪಿಗಳಿಗೆ ಎಸ್.ಕೆ.ಜಿ.ಐ.ಪಾಲ್ಕೆ – ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮಂಗಳೂರಿನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಪಂಚಕಸುಬುಗಳಲ್ಲಿ ಸಾಧನೆ ಮಾಡಿದ ಶಿಲ್ಪಿಗಳನ್ನು ಗುರುತಿಸಿ, ಗೌರವಿಸಲಾಯಿತು.

ಸ್ವರ್ಣಶಿಲ್ಪದಲ್ಲಿ ಜಯರಾಮ ಪೇಜಾವರ್ –ಅತ್ತಾವರ, ಕಾಷ್ಠ ಶಿಲ್ಪದಲ್ಲಿ ಪ್ರಭಾಕರ ಆಚಾರ್ಯ ಕಂದಾವರ, ಅಯಸ್ ಶಿಲ್ಪದಲ್ಲಿ ಲಿಂಗಪ್ಪ ಆಚಾರ್ಯ ವಾಮಂಜೂರು, ಎರಕ ಶಿಲ್ಪದಲ್ಲಿ ಯಶೋಧರ ಆಚಾರ್ಯ ಪೆರಾಡಿ, ಶಿಲಾ ಶಿಲ್ಪದಲ್ಲಿ ಬಿ. ವಿಜಯ ಆಚಾರ್ಯ ಬಸ್ರೂರು ಅವರಿಗೆ 2025-2026ನೇ ಸಾಲಿನ “ಎಸ್.ಕೆ.ಜಿ.ಐ.ಪಾಲ್ಕೆ – ಪ್ರಶಸ್ತಿ”ಯನ್ನು ಸಂಸ್ಥೆಯ ಅಧ್ಯಕ್ಷ ಪಿ. ಉಪೇಂದ್ರ ಆಚಾರ್ಯ, ಉಪಾಧ್ಯಕ್ಷ ಎ. ಆನಂದ ಆಚಾರ್ಯ, ಪ್ರಧಾನ ವ್ಯವಸ್ಥಾಪಕ ಯಜ್ಞೇಶ್ವರ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರು ಪ್ರದಾನ ಮಾಡಿದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಸುಳ್ಯದ ಇಬ್ಬರ ಸಾವು ಪ್ರಕರಣ: ಅನಧಿಕೃತವಾಗಿ ವಿದ್ಯುತ್ ಅಳವಡಿಸಿದ್ದ ತೋಟದ ಮಾಲಕರ ವಿರುದ್ಧ ಪ್ರಕರಣ ದಾಖಲು!!

ಸುಳ್ಯ: ವಿದ್ಯುತ್ ಪ್ರವಹಿಸಿ ಇಬ್ಬರ ಸಾವಿಗೆ ಕಾರಣವಾಗಿದ್ದ ತೋಟದ ಮಾಲಕರ ವಿರುದ್ಧ ಬೆಳ್ಳಾರೆ…