ಕರಾವಳಿ

ಅಯೋಧ್ಯೆಯ ರಾಮ ಮಂದಿರ ಟ್ರಸ್ಟ್ ಬರ್ಕಾಸ್ತುಗೊಳಿಸಿ | ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ ಮಾಜಿ ಶಾಸಕ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ | 2 ಸಾವಿರ ಕೋಟಿ ರೂ. ಹಗರಣವಾಗುವಾಗ ಇಡಿ, ಸಿಬಿಐ ಎಲ್ಲಿ ಮಲಗಿದೆ?

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಅಯೋಧ್ಯೆಯ ರಾಮ ಮಂದಿರದಲ್ಲಿ ಆಗಿರುವ 2 ಸಾವಿರ ಕೋಟಿ ರೂ.ನಷ್ಟು ದೊಡ್ಡ ಹಗರಣದ ಹಿನ್ನೆಲೆಯಲ್ಲಿ ಅಲ್ಲಿನ ಟ್ರಸ್ಟನ್ನು ತಕ್ಷಣ ಬರ್ಕಾಸ್ತುಗೊಳಿಸಬೇಕು. ಭಕ್ತರ ನಂಬಿಕೆಗೆ ತೊಂದರೆ ಆಗದಂತೆ ನರೇಂದ್ರ ಮೋದಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಪ್ರಚಾರ ಸಮಿತಿಯ ರಾಜ್ಯಾಧ್ಯಕ್ಷ ವಿನಯ್ ಕುಮಾರ್ ಸೊರಕೆ ಆಗ್ರಹಿಸಿದರು.

maithri

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಯೋಧ್ಯೆಯ ಹೆಸರಿನಲ್ಲಿ ಪ್ರತಿ ಮನೆಮನೆಗೆ ಇಟ್ಟಿಗೆ ಕೊಂಡು ಹೋಗಿ, ಪ್ರಮಾಣ ಮಾಡಿಸಿ, ಹರಕೆ ಹಣ ಕೊಂಡೊಯ್ದರು. ನಾನೂ ಮನೆಯಲ್ಲಿ ಕಾದಿದ್ದೇ. ಆದರೆ ಯಾರೂ ಬರಲೇ ಇಲ್ಲ. ಮರುದಿನ ಹೇಳಿಕೆ ನೀಡಿದರು ಕಬ್ಬಿಣದ ಗೇಟ್ ಹಾಕಿದ್ದಾರೆ. ಆಲ್ಸೇಷನ್ ನಾಯಿ ಬಿಟ್ಟಿದ್ದಾರೆ ಎಂದು. ವಾಸ್ತವದಲ್ಲಿ ನನ್ನ ಮನೆಯಲ್ಲಿ ಕಬ್ಬಿಣದ ಗೇಟ್ ಇಲ್ಲವೇ ಇಲ್ಲ. ಆಲ್ಸೇಷನ್ ನಾಯಿ ಸಾಕಿಯೇ ಇಲ್ಲ. ಸುಳ್ಳು ಹೇಳಿದರು. ಅದಿರಲಿ, ರಾಮ ಮಂದಿರದ ನಿರ್ಮಾಣ ಕಲ್ಲಿನಿಂದಾಯ್ತು. ಇಟ್ಟಿಗೆಯಿಂದಲ್ಲ. ಆದರೆ ನನ್ನ ಪ್ರಶ್ನೆ ಇರುವುದು ಇಟ್ಟಿಗೆ ಎಲ್ಲಿ ಹೋಯ್ತು? ಸಂಗ್ರಹಿಸಿದ ಹಣ ಎಲ್ಲಿಗೆ ಹೋಯ್ತು ಎಂದು ಪ್ರಶ್ನಿಸಿದರು.

ಜಾಗ ಖರೀದಿ ಮಾಡುವಾಗ ರಿಯಲ್ ಎಸ್ಟೇಟ್ ವ್ಯವಹಾರ ಆರಂಭವಾಯಿತು. 2000 ಕೋಟಿಗೂ ಮಿಕ್ಕಿ ದರೋಡೆ ಮಾಡಲಾಯಿತು. ಕೋಟ್ಯಾಂತರ ಜನ ಭಕ್ತಿ, ಶ್ರದ್ಧೆಯಿಂದ ರಾಮ ದೇವರನ್ನು ಪೂಜೆ ಮಾಡ್ತಾರೆ. ಗ್ರಾಮದಲ್ಲೂ ನೂರಾರು ವರ್ಷಗಳಿಂದ ರಾಮ ಭಜನಾ ಮಂದಿರದಲ್ಲಿ ಪೂಜೆ ನಡಿತಾ ಇದೆ. ಹುಂಡಿಯ ಹಣ ಕಳವಾದದ್ದರಿಂದ ಭಕ್ತರ ಮನಸ್ಸಿಗೆ ಘಾಸಿಯಾಗಿದೆ. ಮುಖ್ಯಮಂತ್ರಿ ಯೋಗಿ ಎಸ್ಐಟಿ ತನಿಖೆಗೆ ಆದೇಶ. ಆಶ್ಚರ್ಯ ಏನೆಂದರೆ ಚಂಪತ್ ರಾಯ್ ಸೇರಿದಂತೆ ಪ್ರಮುಖರು ರಾಜೀನಾಮೆ ನೀಡಿದ್ದು ಯಾಕೆ? ಅಲ್ಲಿನ ಬಂಗಾರವನ್ನು ಕರ್ನಾಟಕದಲ್ಲಿ ಬಂದು ಕರಗಿಸಿದ್ದಾರೆ ಎಂಬ ಸುದ್ದಿಯೂ ಇದೆ ಎಂದು ಗಮನ ಸೆಳೆದರು.

ಅಯೋಧ್ಯೆಯಲ್ಲಿ ರಾಮ ಪ್ರತಿಷ್ಠೆಯ ಸಂದರ್ಭ ಸಮಯ ಸರಿಯಾಗಿಲ್ಲ ಎಂದು ಶಂಕಾರಾಚಾರ್ಯ ಪೀಠದ ಮಹಾಸ್ವಾಮೀಜಿ ಹೇಳಿದ್ದರು. ಆದರೆ ಲೋಕಸಭಾ ಚುನಾವಣೆಯ ಲಾಭ ಪಡೆಯಲು ಪ್ರತಿಷ್ಠಾ ಕಾರ್ಯ ನಡೆಸಿದರು. ಸ್ವಾಮೀಜಿಗಳು ಪ್ರತಿಷ್ಠೆ ಮಾಡಬೇಕಿತ್ತು. ರಾಷ್ಟ್ರಪತಿಯನ್ನು ಕರೆಯಬಹುದಿತ್ತು. ಆದರೆ ಅದಾವುದನ್ನು ಮಾಡಿಲ್ಲ. ಆದ್ದರಿಂದ ಟ್ರಸ್ಟನ್ನು ತಕ್ಷಣ ಬರ್ಕಾಸ್ತು ಮಾಡಬೇಕು. ಶಂಕಾರಾಚಾರ್ಯ ಪೀಠದ ಸ್ವಾಮೀಜಿಯನ್ನು ಮುಂದಿಟ್ಟುಕೊಂಡು, ಹೊಸ ಟ್ರಸ್ಟ್ ರಚನೆ ಆಗಬೇಕು ಎಂದು ಆಗ್ರಹಿಸಿದರು.

2000 ಕೋಟಿ ರೂ. ಹಗರಣ ಆಗಿರುವ ಈ ಹೊತ್ತಲ್ಲಿ ಇಡಿ, ಸಿಬಿಐ ಎಲ್ಲಿ ಮಲಗಿದೆ? ಅಗಾಧ ರಾಮ ಭಕ್ತರ ಭಾವನೆಗೆ ತೊಂದರೆ ಆಗಿರುವಾಗ ಮೌನ ಯಾಕೆ? ನಾ ಖಾವೂಂಗಾ ನಾ ಖಾನೆ ದೂಂಗಾ ಎಂದು ಹೇಳಿದ ನರೇಂದ್ರ ಮೋದಿಯ ಮಾತಿಗೆ ಈಗ ಬೆಲೆ ಎಲ್ಲಿದೆ? ಇದರ ಬಗ್ಗೆ ಮನ್ ಕೀ ಬಾತ್ ಯಾಕಿಲ್ಲ? ಚೌಕಿದಾರ್ ಎಂದು ಕರೆಸಿಕೊಂಡರು. ಈಗ ಮರಿ ಚೌಕಿದಾರ್ ಗಳ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು. ಧರ್ಮದಲ್ಲಿ ರಾಜಕೀಯ ಇರಬಾರದು. ಆದರೆ ರಾಜಕೀಯದಲ್ಲಿ ಧರ್ಮ ಬೇಕು ಎಂದು ಕಾಂಗ್ರೆಸ್ ನಂಬಿಕೊಂಡು ಬಂದಿದೆ ಎಂದರು.

ವಿಶ್ವಗುರುವಿಗೆ ಅರ್ಥವೇ ಇಲ್ಲ:
ವಿಶ್ವಗುರು ಪದಕ್ಕೆ ಅರ್ಥವೇ ಇಲ್ಲ ಎಂದು ಪ್ರಸಿದ್ಧ ಗಾಯಕಿ ಅನುರಾಧ ಪುದುವಾಳ್ ತಿಳಿಸುತ್ತಾರೆ. ರೈತರ ಸಾಲ ಮನ್ನಾದ ಬೇಡಿಕೆ ಇದೆ. ಆದರೆ ಕೈಗಾರಿಕೋದ್ಯಮಿಗಳ ಸಾಲ ಮನ್ನಾ ಆಗ್ತಾ ಇದೆ. ರೈತರ ಜೀವ ಉಳಿಸಲು ಹಣ ಇಲ್ಲ.80 ಕೋಟಿ ಜನರಿಗೆ ಫುಡ್ ಸೆಕ್ಯುರಿಟಿ ಆ್ಯಕ್ಟ್ ನಡಿ ಅಕ್ಕಿ ಕೊಡ್ತಾ ಇದ್ದೇವೆ. ಆದರೆ ನಮಗಿಂತ ಪಾಕಿಸ್ತಾನ, ನೇಪಾಳ, ಶ್ರೀಲಂಕಾ ಮುಂದಿದೆ. ಪಶ್ನಾಪತ್ರಿಕೆ ಲೀಕ್ ಆಗುವ ಪರಿಸ್ಥಿತಿ ಆಯ್ತು. 23 ಮಕ್ಕಳು ಆತ್ಮಹತ್ಯೆ ಮಾಡಿದರು. ಹಾಗಾಗಿ ವಿಶ್ವಗುರು ನಾನ್ ಸೆನ್ಸ್ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಹಮ್ಮದಾಲಿ, ಚಂದ್ರಹಾಸ ಶೆಟ್ಟಿ, ಡಾ. ರಾಜಾರಾಮ್, ಶಶಿಕಿರಣ್ ರೈ, ಅಮರನಾಥ್ ಗೌಡ ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts