ಕರಾವಳಿ

ಸುರತ್ಕಲ್: ಸಮುದ್ರ ಪಾಲಾದ ಮೀನುಗಾರಿಕಾ ದೋಣಿ – 6 ಮೀನುಗಾರರ ರಕ್ಷಣೆ!!

ಈ ಸುದ್ದಿಯನ್ನು ಶೇರ್ ಮಾಡಿ

ಸಮುದ್ರದ ಅಲೆಗಳ ಹೊಡೆತಕ್ಕೆ ಮೀನುಗಾರಿಕಾ ದೋಣಿ ಪಲ್ಟಿಯಾದ ಪರಿಣಾಮ ದೋಣಿಯಲ್ಲಿದ್ದ 6 ಮಂದಿ ಮೀನುಗಾರರನ್ನು ರಕ್ಷಿಸಿರುವ ಘಟನೆ ಮಂಗಳೂರು ಹೊರವಲಯದ ಸುರತ್ಕಲ್ ಬಳಿ ನಡೆದಿದೆ.

ದೋಣಿ ಉಡುಪಿಯ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ಹೊರಟಿತ್ತು. ದೋಣಿಯಲ್ಲಿ ಆಂಧ್ರಪ್ರದೇಶ ಮೂಲದ 6 ಮಂದಿ ಮೀನುಗಾರರಿದ್ದರು. ಮೀನುಗಾರಿಕೆ ವೇಳೆ ಸಮುದ್ರದ ಅಲೆಗಳ ಹೊಡೆತಕ್ಕೆ ದೋಣಿ ಪಲ್ಟಿಯಾಗಿದೆ.

ದೋಣಿ ಪಲ್ಟಿಯಾದ ರಭಸಕ್ಕೆ ಮೀನುಗಾರರು ಸಮುದ್ರಕ್ಕೆ ಬಿದ್ದಿದ್ದಾರೆ. ಈ ವೇಳೆ ಸ್ಥಳೀಯ ಮೀನುಗಾರರು ಅಪಾಯದಲ್ಲಿದ್ದ ಮೀನುಗಾರರನ್ನು ರಕ್ಷಣೆ ಮಾಡಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಸುಳ್ಯದ ಇಬ್ಬರ ಸಾವು ಪ್ರಕರಣ: ಅನಧಿಕೃತವಾಗಿ ವಿದ್ಯುತ್ ಅಳವಡಿಸಿದ್ದ ತೋಟದ ಮಾಲಕರ ವಿರುದ್ಧ ಪ್ರಕರಣ ದಾಖಲು!!

ಸುಳ್ಯ: ವಿದ್ಯುತ್ ಪ್ರವಹಿಸಿ ಇಬ್ಬರ ಸಾವಿಗೆ ಕಾರಣವಾಗಿದ್ದ ತೋಟದ ಮಾಲಕರ ವಿರುದ್ಧ ಬೆಳ್ಳಾರೆ…