ಕರಾವಳಿ

ನ. 27ರಂದು ದ್ವಾರಕಾ ಕಮರ್ಷಿಯಲ್‌ ಲೋಕಾರ್ಪಣ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ನಿರ್ಮಾಣ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ದ್ವಾರಕಾ ಸಂಸ್ಥೆಯ ಪ್ರಧಾನ ಕಚೇರಿ, ಬಹುಮಹಡಿಯ ಸೌಧ ದ್ವಾರಕಾ ಕಮರ್ಷಿಯಲ್ಸ್ ಲೋಕಾರ್ಪಣಾ ಸಮಾರಂಭ ನ. 27ರಂದು ಬೆಳಿಗ್ಗೆ 10ಕ್ಕೆ ನಡೆಯಲಿದೆ ಎಂದು ಸಂಸ್ಥೆಯ ಮ್ಯಾನೇಜಿಂಗ್‌ ಡೈರೆಕ್ಟರ್ ಗೋಪಾಲಕೃಷ್ಣ ಭಟ್‌‌ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದರ್ಬೆ ಬೈಪಾಸ್‌ ಸರ್ಕಲ್‌ ಬಳಿಯಲ್ಲಿ ನಿರ್ಮಿಸಿರುವ ದ್ವಾರಕಾ ಕಮರ್ಷಿಯಲ್ಸ್‌ ಉದ್ಘಾಟನಾ ಸಮಾರಂಭ ದ್ವಾರಕಾ ಪ್ರತಿಷ್ಠಾನದ ಗೌರವಾಧ್ಯಕ್ಷ ಹರಿಕೃಷ್ಣ ಭಟ್‌ ಅರ್ತ್ಯಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಶಾಸಕ ಅಶೋಕ್‌ ಕುಮಾರ್‌ ರೈ, ವಿಧಾನ ಪರಿಷತ್‌ ಸದಸ್ಯ ಕಿಶೋರ್‌ ಕುಮಾರ್‌ ಬೊಟ್ಯಾಡಿ, ಶಿಕ್ಷಣ ಕರ್ಮಯೋಗಿ ಪದ್ಮಶ್ರೀ ಹರೇಕಳ ಹಾಜಬ್ಬ, ರಾಜ್ಯ ಸಹಕಾರ ಮಹಾಮಂಡಲ ನಿರ್ದೇಶಕ ಶಶಿಕುಮಾರ್‌ ರೈ ಬಾಲ್ಯೊಟ್ಟು, ಸವಣೂರು ವಿದ್ಯಾರಶ್ಮಿ ವಿದ್ಯಾಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈ, ಮಾಸ್ಟರ್‌ ಪ್ಲಾನರಿಯ ಎಸ್.ಕೆ. ಆನಂದ ಕುಮಾರ್‌, ಹಿರಿಯ ಉದ್ಯಮಿ ಮಂಜುನಾಥ ನಾಯಕ್‌, ಐಶ್ವರ್ಯ ಕನ್‌ʼಸ್ಟ್ರಕ್ಷನ್‌ʼನ ರಘುರಾಮ ಭಟ್ಟ ಉಪ್ಪಂಗಳ, ಸಂತ ಫಿಲೋಮಿನಾ ಕಾಲೇಜು ಪ್ರಾಂಶುಪಾಲ ರೆ. ಡಾ. ಆಂಟನಿ ಪ್ರಕಾಶ್‌ ಮೊಂತೇರೋ, ಹಿಂದೂ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ, ಅಕ್ಷಯ ಸಮೂಹ ಸಂಸ್ಥೆಗಳ ಅಧ್ಯಕ್ಷ ಜಯಂತ ನಡುಬೈಲು, ಪುತ್ತೂರು ನಗರ ಅಭಿವೃದ್ಧಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್‌, ನಗರಸಭೆ ಪೌರಾಯುಕ್ತೆ ವಿದ್ಯಾ ಎಂ. ಕಾಳೆ, ಪುತ್ತೂರು ನಗರ ಅಭಿವೃದ್ಧಿ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗುರುಪ್ರಸಾದ್‌ ಎ.ಬಿ., ಹೋಟೆಲ್‌ ಅಶ್ವಿನಿಯ ಕರುಣಾಕರ ರೈ ದೇರ್ಲ ಪ್ರಮುಖ ಅಭ್ಯಾಗತರಾಗಿ ಉಪಸ್ಥಿತರಿರಲಿದ್ದಾರೆ. ಸಭೆಯ ನಂತರ ಕೆ.ಆರ್.‌ ಗೋಪಾಲಕೃಷ್ಣ ಮತ್ತು ಬಳಗ ಸುಳ್ಯ ಅವರಿಂದ ಸಂಗೀತ ಸಾಂಗತ್ಯ ನಡೆಯಲಿದೆ ಎಂದರು.

ಲೋಕಾರ್ಪಣಾ ಸಮಾರಂಭದಲ್ಲಿ ದ್ವಾರಕಾ ಕಮರ್ಷಿಯಲ್ಸ್‌, ಎಸ್ಕಲೇಟರ್‌, ದ್ವಾರಕಾ ಮಂಗಲ್‌ ಸ್ಟೋರ್‌, ದ್ವಾರಕಾ ಪ್ರಧಾನ ಕಚೇರಿ ಉದ್ಘಾಟನೆಗೊಳ್ಳಲಿದೆ ಎಂದರು.

ಸಂಸ್ಥೆಯ ಎಕ್ಸಿಕ್ಯೂಟಿವ್‌ ಡೈರೆಕ್ಟರ್‌ ಅಮೃತಕೃಷ್ಣ ಎನ್.‌ ಮಾತನಾಡಿ, ಈ ಸುಂದರ ಸೌಧದಲ್ಲಿ ವಿಶಾಲ ಪಾರ್ಕಿಂಗ್‌ ವ್ಯವಸ್ಥೆ, ನೆಲಹಂತದಲ್ಲಿ ಹಾಗೂ ಮೊದಲ ಮಹಡಿಯಲ್ಲಿ ದ್ವಾರಕಾ ಮಂಗಲ್‌ ಹೈಪರ್‌ ಮಾರ್ಕೆಟ್‌ ಉದ್ಘಾಟನೆಗೊಳ್ಳಲಿದೆ. ಇಲ್ಲಿ ತರಕಾರಿ, ಹಾಲು, ಹಾಲಿನ ಉತ್ಪನ್ನ, ಹಣ್ಣು, ದಿನಸಿ, ಚಾಟ್ಸ್‌, ಜ್ಯೂಸ್‌, ಕೂಲ್‌ ಝೋನ್‌, ಬೇಕರಿ ತಿನಿಸುಗಳು, ಸ್ಟೇಶನರಿ ಇತ್ಯಾದಿ ಲಭ್ಯವಾಗಲಿದೆ. ನೂರಾರು ಗ್ರಾಹಕ ಬೇಡಿಕೆಯ ವಸ್ತುಗಳು ಮಿತದಲ್ಲಿ ಸಿಗಲಿದೆ ಎಂದರು.

ಎರಡನೇ ಮಹಡಿಯಲ್ಲಿ ಹಾರ್ಡ್ʼವೇರ್‌, ಸ್ಯಾನಿಟರಿ, ಟೈಲ್ಸ್‌, ಪೇಯಿಂಟ್‌, ಸೆಲೂನ್‌, ಕ್ಲಿನಿಕ್‌, ಸಾಫ್ಟ್ವೇರ್‌, ಸಿಎ ಕಚೇರಿ, ಟೆಕ್ಸ್‌ʼಟೈಲ್ಸ್‌ ಇರುತ್ತವೆ. ಮೂರನೇ ಮಹಡಿಯಲ್ಲಿ ದ್ವಾರಕಾ ಸಮೂಹ ಸಂಸ್ಥೆಗಳ ಪ್ರಧಾನ ಕಚೇರಿ ಇರಲಿದೆ. ನಾಲ್ಕನೆಯ ಮಹಡಿಯಲ್ಲಿ ಸುಸಜ್ಜಿತ ಸುಂದರ ಸಭಾಂಗಣವಿದೆ. ವಿವಿಧ ಕಾರ್ಯಕ್ರಮಗಳಿಗೆ ಇದು ಅನುಕೂಲ. ಸೌಧದಲ್ಲಿ ಎರಡು ಲಿಫ್ಟ್‌ ಗಳಿವೆ. ಪ್ರಥಮ ಮಹಗೆ ಏರಿ – ಇಳಿಯಲು ಎಸ್ಕಲೇಟರ್‌ ಇದೆ. ವಿದ್ಯುತ್‌ ಸರಬರಾಜಿನಲ್ಲಿ ಕೊರತೆಯಾಗದಂತೆ ಜನರೇಟರ್‌ ಸೌಲಭ್ಯ ಒದಗಿಸಲಾಗಿದೆ. ಒಂದೇ ಸೂರಿನಡಿ ಗ್ರಾಹಕರ ಜೀವನಾವಶ್ಯಕತೆಗಳನ್ನು ಕೈಗೆಟಕುವ ದರದಲ್ಲಿ ಪೂರೈಸಲು ಪುತ್ತೂರಿನ ದ್ವಾರಕಾ ಕಮರ್ಶಿಯಲ್ಸ್ ಸಜ್ಜಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಡೈರೆಕ್ಟರ್‌ ಅಶ್ವಿನಿ ಗೋಪಾಲಕೃಷ್ಣ, ಪ್ರತಿಷ್ಠಾನದ ಕಾರ್ಯದರ್ಶಿ ಗಣರಾಜ್‌ ಕುಂಬ್ಳೆ, ಆಪರೇಷನ್‌ ಹೆಡ್‌ ದುರ್ಗಾಗಣೇಶ್‌ ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts