ಧಾರ್ಮಿಕ

ಪಾಲಿಂಜೆ ಅಮ್ಮುಂಜ ದೇವಸ್ಥಾನದ ಜಾತ್ರೋತ್ಸವ: ಆಮಂತ್ರಣ ಪತ್ರ ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಕುರಿಯ ಗ್ರಾಮದ ಪಾಲಿಂಜೆ ಅಮ್ಮುಂಜ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರವನ್ನು ದೇವಸ್ಥಾನದಲ್ಲಿ ಬಿಡುಗಡೆಗೊಳಿಸಲಾಯಿತು.

ಡಿ. 17ರಂದು ಗೊನೆಮುಹೂರ್ತ ನಡೆದು, ಡಿ. 23ರಂದು ಸಂಜೆ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. 24ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದು, ಸಂಜೆ ಶ್ರೀ ದೇವರ ಬಲಿ ಉತ್ಸವ ನಡೆಯಲಿದೆ. ಬಟ್ಟಲು ಕಾಣಿಕೆ ನಡೆದು, ಮೊಟ್ಟೆತ್ತಡ್ಕ ಶ್ರೀ ಚಾಮುಂಡೇಶ್ವರಿ ದೇವಸ್ಥಾನದವರೆಗೆ ದೇವರ ಸವಾರಿ ನಡೆಯಲಿದೆ. ಡಿ. 25ರಂದು ದೈವಗಳ ನೇಮೋತ್ಸವ ಜರುಗಲಿದೆ.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಶ್ವಜಿತ್‌ ಪೂಜಾರಿ ಅಮ್ಮುಂಜ, ಜಿಲ್ಲಾ ಧಾರ್ಮಿಕ ಪರಿಷತ್‌ ಮಾಜಿ ಸದಸ್ಯ ಮುರಳೀಕೃಷ್ಣ ಹಸಂತ್ತಡ್ಕ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಮೇಶ್‌ ಅಂಙಿತ್ತಾಯ ಅಣ್ಣಿಂಜ, ನಿರಂಜನ್‌ ಶೆಟ್ಟಿ ಸಂಪ್ಯ, ನಾರಾಯಣ ಮಣಿಯಾಣಿ ಇಡಬೆಟ್ಟು, ಮಾಜಿ ಸದಸ್ಯರಾದ ರೇಖನಾಥ ರೈ, ಮಾಲಿನಿ ಹೆಗ್ಡೆ, ಸುಜಾತಾ ರೈ, ಕ್ಷೇತ್ರದ ಅರ್ಚಕ ಶ್ರವಣ್‌ ಭಟ್, ಪ್ರಮುಖರಾದ ರಾಮಕೃಷ್ಣ ಭಟ್‌ ನೆಕ್ಕರೆ, ಸದಾಶಿವ ಭಟ್‌ ನೆಕ್ಕರೆ, ಜ್ಯೋತಿ ಅಂಙಿತ್ತಾಯ, ಉದಯ್‌ ಕುಮಾರ್‌ ಅಂಙಿತ್ತಾಯ, ಜಯಶಂಕರ್‌ ರೈ ಸಂಪ್ಯದಮೂಲೆ, ಜಗನ್ನಾಥ್‌ ಶೆಟ್ಟಿ ಸಂಪ್ಯದಮೂಲೆ, ಪೂರ್ಣಿಮಾ ನಾಯ್ಕ ಅಮ್ಮುಂಜ, ವನಿತಾ ರೈ ಸಂಪ್ಯದಮೂಲೆ, ಜಯಲಕ್ಷ್ಮೀ ಶೆಟ್ಟಿ ಸಂಪ್ಯದಮೂಲೆ, ಸುಮಿತ್ರಾ ವಿಶ್ವಜಿತ್‌ ಅಮ್ಮುಂಜ, ಸತ್ಯವಿಜಯ ಅಂಙಿತ್ತಾಯ, ಸದಾಶಿವ ಭಟ್‌ ಮೊದಲಾದವರು ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಡಿ. 20ರ ಕಾರ್ಯಕ್ರಮ: ಧರ್ಮಪಾಲನಾಥ ಸ್ವಾಮೀಜಿಯವರಿಗೆ ಆಮಂತ್ರಣ | ಶ್ರೀಗಳಿಗೆ ಸಂಘದ ನೂತನ ಯೋಜನೆಗಳ ವಿವರಣೆ

ಮಂಗಳೂರು: ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಹಾಗೂ ಸಹ ಸಂಘಟನೆಗಳ ವತಿಯಿಂದ ಡಿಸೆಂಬರ್ 20ರಂದು…

ಕನ್ನಯ ತರವಾಡು ಮನೆಯಲ್ಲಿ ಹೊಸ ಅಕ್ಕಿ ಊಟ: ಸಾಮಾಜಿಕ ಸಮೀಕ್ಷೆಯ ಮಾಹಿತಿ ನೀಡಿದ ಸುಂದರ ಗೌಡ ನಡುಬೈಲು

ಬಡಗನ್ನೂರು ಗ್ರಾಮದ ಕನ್ನಯ ಕುಟುಂಬಸ್ಥರ ತರವಾಡು ಮನೆಯಲ್ಲಿ ಭಾನುವಾರ ಹೊಸಅಕ್ಕಿ ಊಟ ಕಾರ್ಯಕ್ರಮ…

ಧರ್ಮಸ್ಥಳದ ನೆಲ್ಯಾಡಿ ಬೀಡಿನಲ್ಲಿ ಸಾಂಪ್ರದಾಯಿಕ ದೀಪಾವಳಿ ಆಚರಣೆ | ಧರ್ಮದೇವತೆಗಳಿಗೆ ಪರ್ವ ಸೇವೆ, ಬಲಿಯೇಂದ್ರ ಪೂಜೆ

ಧರ್ಮಸ್ಥಳ: ನಾಡಿನಾದ್ಯಂತ ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸುತ್ತಿರುವಂತೆಯೇ,…