ಧಾರ್ಮಿಕ

ನ. 26 – 29: ನೆಲಪ್ಪಾಲಿನಲ್ಲಿ ಶ್ರೀ ಪಂಚಮುಖಿ ಅಂಜನೇಯ ಯಾಗ | ನೆಲಪ್ಪಾಲು ಶ್ರೀ ವೀರಾಂಜನೇಯ ಕ್ಷೇತ್ರದಲ್ಲಿ ಕಾರ್ಯಕ್ರಮದ ವಿವರ ನೀಡಿದ ನಳಿನ್‌ ಕುಮಾರ್‌ ಕಟೀಲ್

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ನೆಹರುನಗರದ ನೆಲಪ್ಪಾಲು ಶ್ರೀ ವೀರಾಂಜನೇಯ ಕ್ಷೇತ್ರದಲ್ಲಿ ನ. 26 ರಿಂದ 29 ರ ತನಕ ಶ್ರೀ ಪಂಚಮುಖಿ ಅಂಜನೇಯ ಯಾಗ’ ನಡೆಯಲಿದೆ ಎಂದು ಯಾಗ ಸಮಿತಿ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವಿಶ್ವ ಹಿಂದೂ ಪರಿಷದ್ ನೇತೃತ್ವದ ಶ್ರೀ ಗುರುಕೃಷ್ಣ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ 8 ವರುಷದ ಹಿಂದೆ ನಿರ್ಮಾಣ ಗೊಂಡಿರುವ ಶ್ರೀ ವೀರಾಂಜನೇಯ ಕ್ಷೇತ್ರದಲ್ಲಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಹಾಗೂ ಬ್ರಹ್ಮಶ್ರೀ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿ ಅವರ ಆಚಾರ್ಯತ್ವದಲ್ಲಿ ಲೋಕಕಲ್ಯಾಣ ಹಾಗೂ ಹಿಂದೂ ಸಮಾಜದ ಏಕತೆಗಾಗಿ ಶ್ರೀ ಪಂಚಮುಖಿ ಅಂಜನೇಯ ಯಾಗ ನಡೆಯಲಿದೆ.

ಸಾನಿಧ್ಯ ವೃದ್ಧಿಯ ಸಂಕಲ್ಪವನ್ನು ಇಟ್ಟುಕೊಂಡು ಎಲ್ಲಾ ಧಾರ್ಮಿಕ ಕ್ಷೇತ್ರಗಳಿಂದ ತೀರ್ಥ ಕಲಶ ಸಂಗಮ ಮುಖಾಂತರ 26ರಂದು ಗುರುವಾರ 4.00 ಗಂಟೆಗೆ ದರ್ಬೆ ವೃತ್ತದಿಂದ ಕಲಶಗಳ ಮೆರವಣಿಗೆ, ಹೊರೆಕಾಣಿಕೆ ಸಮರ್ಪಣೆ ಆಗಲಿದೆ. ಸಂಜೆ 6.30ಕ್ಕೆ ವಜ್ರದೇಹಿ ರಾಜಶೇಖರಾನಂದ ಸ್ವಾಮಿಗಳಿಂದ ಉಗ್ರಾಣದಲ್ಲಿ ದೀಪ ಬೆಳಗಿಸುವ ಮುಖಾಂತರ ಕ್ಷೇತ್ರದಲ್ಲಿ ಕಾರ್ಯಕ್ರಮ ಆರಂಭ ಆಗಲಿದೆ. 26ರ ಗುರುವಾರ ಸಂಜೆ ಪ್ರಮುಖ ವೇದಿಕೆಯಲ್ಲಿ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ,ಪಾವಂಜೆ ಇವರಿಂದ ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿಯವರ ಸಾರಥ್ಯದಲ್ಲಿ “ರಾಮ ರಾಮ ಶ್ರೀರಾಮ” ಎಂಬ ಪೌರಾಣಿಕ ಯಕ್ಷಗಾನ ನಡೆಯಲಿದೆ ಎಂದರು.

27ರ ಶುಕ್ರವಾರದಂದು ಬೆಳಿಗ್ಗೆ 9 ಗಂಟೆಗೆ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಗಳು 3 ದಿನಗಳ ಕಾಲ ನಿರಂತರ ನಡೆಯುವ ಭಜನಾ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮುಖಾಂತರ ಉದ್ಘಾಟಿಸಲಿದ್ದಾರೆ. ಸಂಜೆ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಗಳು ದೀಪ ಬೆಳಗಿಸುವ ಮೂಲಕ ರಾಜ್ಯದ ಪ್ರಸಿದ್ದ ಪ್ರವಚನಕಾರರಾದ “ಪ್ರಕಾಶ್ ಪಾವಗಡ ಇವರ ರಾಮಾಯಣ ಕುರಿತಾದ ಪ್ರವಚನ ಮತ್ತು ಸಂವಾದ” ಆರಂಭವಾಗಲಿದೆ. 27 ರಂದು ಸಂಜೆ ಕ್ಷೇತ್ರಕ್ಕೆ ಋತ್ವಿಜರ ಆಗಮನವಾಗಲಿದೆ. ರಾತ್ರಿ 8.00 ಗಂಟೆಗೆ ಸರಿಯಾಗಿ ವಿಧಾತ್ರಿ ಕಲಾವಿದೆರ್ ಕುಡ್ಲ ಇವರಿಂದ ಭಕ್ತಿಪೂರ್ವಕ ಸಿನಿನಾಟಕ ಜೈಹನುಮಾನ್ ನಡೆಯಲಿದೆ ಎಂದರು.

28ರಂದು ಶನಿವಾರ ಬೆಳಗ್ಗೆ 9.00 ಗಂಟೆಗೆ ಎಲ್ಲಾ ಜಾತಿ ಸಮುದಾಯಗಳ ಭಕ್ತ ಯಾಗ ಸಂಕಲ್ಪ ನಡೆಯಲಿದೆ. ಬೆಳಗ್ಗೆ 10.00 ಗಂಟೆಗೆ ನೂರಾರು ಮಾತಾ ಭಗಿನಿಯರಿಂದ ಶ್ರೀ ರಾಮ ಜಪ ಮತ್ತು ಕೇಸರಿ ಅರ್ಚನೆ ನಡೆಯಲಿದ್ದು. ನಂತರ ಶ್ರೀ ವೀರಾಂಜನೇಯ ಸ್ವಾಮಿಗೆ ವಿಶೇಷ ಪವಿತ್ರಾ ಕಲಾಶಾಭಿಷೇಕ ನಡೆಯಲಿದೆ. ನಂತರ ಮಧ್ಯಾಹ್ನ 3 ಗಂಟೆಗೆ ಸರಿಯಾಗಿ ವಿವೇಕಾನಂದ ಇಂಜನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಪ್ರಮುಖ ವೇದಿಕೆಯಲ್ಲಿ ನಡೆಯಲಿದ್ದು ನಂತರ ಸಂಜೆ 4.30 ಕ್ಕೆ ಸರಿಯಾಗಿ ‘ಧರ್ಮ ಸಭೆ” ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕಾಸರಗೋಡು ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳು ಆಶೀರ್ವಚನ ನೀಡಲಿದ್ದಾರೆ. ವಿಶ್ವ ಹಿಂದೂ ಪರಿಷದ್ ಕೇಂದ್ರೀಯ ಸಹ ಕಾರ್ಯದರ್ಶಿಗಳು ಮತ್ತು ಆಯೋಧ್ಯೆ ಶ್ರೀ ರಾಮ ಮಂದಿರ ಇದರ ನಿರ್ಮಾಣದ ಉಸ್ತುವಾರಿಗಳಾಗಿದ್ದ ಗೋಪಾಲ್ ಜೀ ಮುಖ್ಯ ಭಾಷಣ ಮಾಡಲಿದ್ದಾರೆ. ರಾತ್ರಿ 8 ಗಂಟೆಗೆ ಸರಿಯಾಗಿ ಕಲರ್ಸ್ ಕನ್ನಡ ಖ್ಯಾತಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತುಳುನಾಡ ಗಾನ ಗಂಧರ್ವ ಬಿರುದಾಂಕಿತ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದಿಂದ ಭಕ್ತಿ ಭಾವ ಸಂಗಮ – ಸಂಗೀತ ಗಾನ ಸಂಭ್ರಮ ಕಾರ್ಯಕ್ರಮ ಜರುಗಲಿದೆ ಎಂದರು.

29ನೇ ಭಾನುವಾರದಂದು ಬೆಳಗ್ಗೆ 9.00 ಗಂಟೆಗೆ ಸಾಮೂಹಿಕ ಹನುಮಾನ್ ಚಾಲಿಸ ನಡೆಯಲಿದ್ದು. 9.30 ಕ್ಕೆ ಪ್ರಕಾಶ್ ಪಾವಗಡ ಅವರ ಪ್ರವಚನದ ಕೊನೆಯ ಭಾಗ ಸಂಪನ್ನಗೊಳ್ಳಲಿದೆ. ನಂತರ ಪಂಚಮುಖಿ ಅಂಜನೇಯ ಯಾಗ ಆರಂಭವಾಗಲಿದ್ದು 11.30 ಕ್ಕೆ ಪೂರ್ಣಾಹುತಿ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಈ ಭಾಗದ ಇತಿಹಾಸದಲ್ಲಿ ಮೊದಲ ಬಾರಿಗೆ ಪಂಚಮುಖಿ ಅಂಜನೇಯ ಯಾಗ ಹಮ್ಮಿಕೊಳ್ಳಲಾಗಿದೆ ಎಂದು ಅಭಿಪ್ರಾಯಪಟ್ಟರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಸಂಚಾಲಕ ಜೀವಂಧರ್‌ ಜೈನ್‌, ಉಪಾಧ್ಯಕ್ಷ ಡಾ. ಕೃಷ್ಣಪ್ರಸನ್ನ, ಪ್ರಧಾನ ಕಾರ್ಯದರ್ಶಿ ಮುರಳೀಕೃಷ್ಣ ಹಸಂತಡ್ಕ, ಪ್ರಮುಖರಾದ ದಯಾನಂದ ಉಜಿರೆಮಾರು, ರಾಧಾಕೃಷ್ಣ ಬೋರ್ಕರ್‌, ಜಯಂತ್‌ ಕಂಬಳತ್ತಡ್ಡ, ರವಿಕುಮಾರ್‌ ಕೈಂತಾಜೆ ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಧರ್ಮಸ್ಥಳದ ನೆಲ್ಯಾಡಿ ಬೀಡಿನಲ್ಲಿ ಸಾಂಪ್ರದಾಯಿಕ ದೀಪಾವಳಿ ಆಚರಣೆ | ಧರ್ಮದೇವತೆಗಳಿಗೆ ಪರ್ವ ಸೇವೆ, ಬಲಿಯೇಂದ್ರ ಪೂಜೆ

ಧರ್ಮಸ್ಥಳ: ನಾಡಿನಾದ್ಯಂತ ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸುತ್ತಿರುವಂತೆಯೇ,…

ಕನ್ನಯ ತರವಾಡು ಮನೆಯಲ್ಲಿ ಹೊಸ ಅಕ್ಕಿ ಊಟ: ಸಾಮಾಜಿಕ ಸಮೀಕ್ಷೆಯ ಮಾಹಿತಿ ನೀಡಿದ ಸುಂದರ ಗೌಡ ನಡುಬೈಲು

ಬಡಗನ್ನೂರು ಗ್ರಾಮದ ಕನ್ನಯ ಕುಟುಂಬಸ್ಥರ ತರವಾಡು ಮನೆಯಲ್ಲಿ ಭಾನುವಾರ ಹೊಸಅಕ್ಕಿ ಊಟ ಕಾರ್ಯಕ್ರಮ…

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ವಿರುದ್ಧ ವಿ.ಹಿಂ.ಪ. ಆರೋಪ; ಅಭಿವೃದ್ಧಿ ಸಮಿತಿ ವಿಸರ್ಜನೆಗೆ ಆಗ್ರಹ

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿಯು ಭಕ್ತರ ಧಾರ್ಮಿಕ ಭಾವನೆ…