ಬಡಗನ್ನೂರು ಗ್ರಾಮದ ಕನ್ನಯ ಕುಟುಂಬಸ್ಥರ ತರವಾಡು ಮನೆಯಲ್ಲಿ ಭಾನುವಾರ ಹೊಸಅಕ್ಕಿ ಊಟ ಕಾರ್ಯಕ್ರಮ ನಡೆಯಿತು.
ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುಂದರ ಗೌಡ ನಡುಬೈಲು ಮಾತನಾಡಿ, ಸಂಘದ ಕಾರ್ಯಚಟುವಟಿಕೆಗಳು, ಸದಸ್ಯತ್ವ ಅಭಿಯಾನ ಹಾಗೂ ಸಾಮಾಜಿಕ ಸಮೀಕ್ಷೆಯ ಕುರಿತು ಮಾಹಿತಿ ನೀಡಿದರು.
ಸಂಘದ ಜೊತೆ ಕಾರ್ಯದರ್ಶಿ ಯತೀಶ್ ಗೌಡ ದೇವ, ಪುತ್ತೂರು ನಗರ ಕಾರ್ಯದರ್ಶಿ ನಾರಾಯಣ ಗೌಡ ಮುಕ್ರಂಪಾಡಿ, ಈಶ್ವರಮಂಗಲ ವಲಯಧ್ಯಕ್ಷ ಜಗನ್ನಾಥ್ ಪಟ್ಟೆ, ಗ್ರಾಮ ಸಮಿತಿ ಅಧ್ಯಕ್ಷ ಶ್ರೀಧರ ಕನ್ನಯ, ಕೆಂಪೇಗೌಡ ಪ್ರತಿಷ್ಠಾನದ ಯತೀಶ್ ಆರ್ವಾರ್ ಹಾಗೂ ಕುಟುಂಬದ ಹಿರಿಯರು ಉಪಸ್ಥಿತರಿದ್ದರು.
ಈ ಸಂದರ್ಭ ಕುಟುಂಬದವರಿಗೆ ಸಂಘದ ವತಿಯಿಂದ ಪುಸ್ತಕ ಹಸ್ತಾಂತರಿಸಲಾಯಿತು.
























