ಧಾರ್ಮಿಕ

ಜೀರ್ಣೊದ್ಧಾರಕ್ಕೆ ಸಿದ್ಧಗೊಳ್ಳುತ್ತಿದೆ ಮದಗ ಶ್ರೀ ಜನಾರ್ದನ ದೇವಸ್ಥಾನ | ನ. 27ರಂದು ನಡೆಯಲಿದೆ ತೈಲಾಧಿವಾಸ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಮಾಗಣೆಯ ಕುಂಜಾರು ಮದಗ ಶ್ರೀ ಜನಾರ್ದನ ದೇವಸ್ಥಾನ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವಕ್ಕೆ ಸಿದ್ಧಗೊಳ್ಳುತ್ತಿದ್ದು, ನ. 27ರಂದು ಧ್ವಜಮರದ ತೈಲಾಧಿವಾಸ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಹಾರಕೆರೆ ವೆಂಕಟ್ರಮಣ ಭಟ್‌ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2025ರಲ್ಲಿ ದೇವಸ್ಥಾನದಲ್ಲಿ ಅಷ್ಟಮಂಗಲ ಪ್ರಶ್ನೆ ಇಡಲಾಯಿತು. ದೇವಸ್ಥಾನದ ಕೆಲ ನ್ಯೂನ್ಯತೆಗಳು ಅಲ್ಲಿ ಕಂಡುಬಂದಿತು. ಅಲ್ಲದೇ, ಈ ಹಿಂದೆ ಜೀರ್ಣೊದ್ಧಾರ ಕಾರ್ಯ ನಡೆದು 12 ವರ್ಷ ಕಳೆದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಜೀರ್ಣೋದ್ಧಾರ, ಬ್ರಹ್ಮಕಲಶ ನಡೆಸುವುದೆಂದು ತೀರ್ಮಾನಿಸಲಾಗಿದೆ. ಅದರಂತೆ ಸುಮಾರು 2.5 ಕೋಟಿ ರೂ. ವೆಚ್ಚದಲ್ಲಿ ಜೀರ್ಣೋದ್ಧಾರ ಕಾರ್ಯ ನಡೆಸಲಾಗುವುದು. ಇದಕ್ಕೆ ಈಗಾಗಲೇ ಸಮಿತಿ ರಚಿಸಿದ್ದು, ಗೌರವಾಧ್ಯಕ್ಷರುಗಳಾಗಿ ಶಾಸಕ ಅಶೋಕ್‌ ಕುಮಾರ್‌ ರೈ ಹಾಗೂ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್‌ ಪಂಜಿಗುಡ್ಡೆ, ಅಧ್ಯಕ್ಷರಾಗಿ ಮುಂಬಯಿಯಲ್ಲಿರುವ ವಸಂತ ಸಪಲ್ಯ ಕುಂಜಾರು ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.

1944ರ ಮೊದಲು 5 ದಿನದ ಜಾತ್ರೆ ಇಲ್ಲಿ ನಡೆಯುತ್ತಿತ್ತು ಎಂದು ಹೇಳಲಾಗುತ್ತಿದೆ. ಅದೇ ಪ್ರಕಾರ ಇನ್ನು ಮುಂದೆ 5 ದಿನಗಳ ಜಾತ್ರೆ ನಡೆಯಲಿದೆ. ಇದುವರೆಗೆ ೩ ಹೊತ್ತಿನ ಜಾತ್ರೆ ನಡೆಸಲಾಗುತ್ತಿತ್ತು. ಇದೀಗ ಜೀರ್ಣೋದ್ಧಾರ, ಬ್ರಹ್ಮಕಲಶ ನಡೆದು 5 ದಿನಗಳ ಜಾತ್ರೆ ನಡೆಯುವುದರ ಜೊತೆಗೆ ದೇವರ ಅವಭೃತ ಸ್ನಾನಕ್ಕೆ ಕೆರೆಯ ಅಗತ್ಯವೂ ಇದೆ. ಹಾಗಾಗಿ ಕೆರೆಯ ಅಭಿವೃದ್ಧಿ, ರಥದ ಕೊಟ್ಟಿಗೆ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ವಿವರಿಸಿದರು.

ನ. 27ರಂದು ನಡೆಯುವ ತೈಲಾಧಿವಾಸಕ್ಕೆ ಸುಮಾರು 500ರಿಂದ 1000 ಲೀಟರ್‌ ಶುದ್ಧ ಎಳ್ಳೆಣ್ಣೆ ಅಗತ್ಯವಿದೆ. ಇದನ್ನು ಭಕ್ತಾಧಿಗಳಿಂದ ಅಪೇಕ್ಷಿಸಲಾಗಿದೆ. ಧ್ವಜಮರವನ್ನು ೯ ತಿಂಗಳು ಈ ಶುದ್ಧ ಎಳ್ಳೆಣ್ಣೆಯಲ್ಲಿ ಇಡಬೇಕೆಂಬ ನಿಯಮವಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್‌, ಸಮಿತಿಯ ಪ್ರಧಾನಗಳಾದ ಕಾರ್ಯದರ್ಶಿ ಪೂವಪ್ಪ ದೇಂತಡ್ಕ, ಶ್ರೀಧರ್‌ ಕುಂಜಾರು, ಕೋಶಾಧಿಕಾರಿ ಮನೋಹರ್‌ ಆರ್ವಾರಗುತ್ತು ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಕನ್ನಯ ತರವಾಡು ಮನೆಯಲ್ಲಿ ಹೊಸ ಅಕ್ಕಿ ಊಟ: ಸಾಮಾಜಿಕ ಸಮೀಕ್ಷೆಯ ಮಾಹಿತಿ ನೀಡಿದ ಸುಂದರ ಗೌಡ ನಡುಬೈಲು

ಬಡಗನ್ನೂರು ಗ್ರಾಮದ ಕನ್ನಯ ಕುಟುಂಬಸ್ಥರ ತರವಾಡು ಮನೆಯಲ್ಲಿ ಭಾನುವಾರ ಹೊಸಅಕ್ಕಿ ಊಟ ಕಾರ್ಯಕ್ರಮ…

ಧರ್ಮಸ್ಥಳದ ನೆಲ್ಯಾಡಿ ಬೀಡಿನಲ್ಲಿ ಸಾಂಪ್ರದಾಯಿಕ ದೀಪಾವಳಿ ಆಚರಣೆ | ಧರ್ಮದೇವತೆಗಳಿಗೆ ಪರ್ವ ಸೇವೆ, ಬಲಿಯೇಂದ್ರ ಪೂಜೆ

ಧರ್ಮಸ್ಥಳ: ನಾಡಿನಾದ್ಯಂತ ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸುತ್ತಿರುವಂತೆಯೇ,…