ಧಾರ್ಮಿಕ

ನ. 29ರಂದು ಪುತ್ತೂರು ವಿವೇಕ ಜಾಗೃತ ಬಳಗದಿಂದ ಮನಃಶಾಂತಿ ವೈಭವ

ಈ ಸುದ್ದಿಯನ್ನು ಶೇರ್ ಮಾಡಿ

ಡಿವೈನ್‌ ಪಾರ್ಕ್‌ʼನ ಅಂಗಸಂಸ್ಥೆ ಪುತ್ತೂರು ವಿವೇಕ ಜಾಗೃತ ಬಳಗದ ಆಶ್ರಯದಲ್ಲಿ ಮನಃಶಾಂತಿ ವೈಭವ 3 ಗಂಟೆಗಳ ಅವಧಿಯ ದಿವ್ಯ ಕಾರ್ಯಕ್ರಮ ನ. 29ರಂದು ತೆಂಕಿಲ ಸ್ವಾಮಿ ಕಲಾ ಮಂದಿರ ಹಾಗೂ ದರ್ಶನ್‌ ಕಲಾಮಂದಿರದಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಪ್ರಕಾಶ್‌ ಕುಮಾರ್‌ ಶೆಟ್ಟಿ ಬೆಳ್ಳಾರೆ ಹೇಳಿದರು,

ಕಾರ್ಯಕ್ರಮವನ್ನು ಕೋಟ ಯೋಗಬನ, ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಪ್ರತಿಷ್ಠಾನದ ಸಿಇಓ & ಎಂಡಿ ಡಾ. ವಿವೇಕ ಉಡುಪ ಸಾಲಿಗ್ರಾಮ ಡಿವೈನ್‌ ಪಾರ್ಕ್‌ ಟ್ರಸ್ಟಿನ ಟ್ರಸ್ಟಿ ಸಿಸ್ಟರ್‌ ನಿವೇದಿತಾ ರಾಜ್‌ ಇವರುಗಳ ಉಪಸ್ಥಿತಿಯಲ್ಲಿ ಬೆಳಿಗ್ಗೆ 10.30ರಿಂದ 1.30ರವರೆಗೆ ಹಮ್ಮಿಕೊಳ್ಳಲಾಗಿದೆ. ೮ ವಿವೇಕ ಜಾಗೃತ ಬಳಗಗಳಾದ ಬೆಳ್ತಂಗಡಿ, ಪುತ್ತೂರು, ಸುಳ್ಯ, ಕಡಬ – ಬಿಳಿನೆಲೆ, ಹರಿಹರ ಪಲ್ಲತಡ್ಕ, ಸುಬ್ರಹ್ಮಣ್ಯ, ಎಣ್ಮೂರು, ಚಾರ್ವಾಕ ಮತ್ತು ಏನೇಕಲ್‌ ಸಹಯೋಗದಲ್ಲಿ ಕಾರ್ಯಕ್ರಮ ನೆರವೇರಲಿದೆ ಎಂದರು.

ಕಾರ್ಯಕ್ರಮಕ್ಕೆ ಆಗಮಿಸುವ 8 ವಿವೇಕ ಜಾಗೃತ ಬಳಗಗಳಿಂದ ಬಸ್‌ ವ್ಯವಸ್ಥೆ ಮಾಡಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ತಾರನಾಥ, ದಯಾನಂದ ಪುತ್ತೂರು, ಕೆ.ವಿ. ಮಾಧವ, ಟಿ.ಆರ್.‌ ಕಲ್ಲೂರಾಯ, ಸುಂದರ ಗೌಡ ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಧರ್ಮಸ್ಥಳದ ನೆಲ್ಯಾಡಿ ಬೀಡಿನಲ್ಲಿ ಸಾಂಪ್ರದಾಯಿಕ ದೀಪಾವಳಿ ಆಚರಣೆ | ಧರ್ಮದೇವತೆಗಳಿಗೆ ಪರ್ವ ಸೇವೆ, ಬಲಿಯೇಂದ್ರ ಪೂಜೆ

ಧರ್ಮಸ್ಥಳ: ನಾಡಿನಾದ್ಯಂತ ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸುತ್ತಿರುವಂತೆಯೇ,…

ಕನ್ನಯ ತರವಾಡು ಮನೆಯಲ್ಲಿ ಹೊಸ ಅಕ್ಕಿ ಊಟ: ಸಾಮಾಜಿಕ ಸಮೀಕ್ಷೆಯ ಮಾಹಿತಿ ನೀಡಿದ ಸುಂದರ ಗೌಡ ನಡುಬೈಲು

ಬಡಗನ್ನೂರು ಗ್ರಾಮದ ಕನ್ನಯ ಕುಟುಂಬಸ್ಥರ ತರವಾಡು ಮನೆಯಲ್ಲಿ ಭಾನುವಾರ ಹೊಸಅಕ್ಕಿ ಊಟ ಕಾರ್ಯಕ್ರಮ…

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ವಿರುದ್ಧ ವಿ.ಹಿಂ.ಪ. ಆರೋಪ; ಅಭಿವೃದ್ಧಿ ಸಮಿತಿ ವಿಸರ್ಜನೆಗೆ ಆಗ್ರಹ

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿಯು ಭಕ್ತರ ಧಾರ್ಮಿಕ ಭಾವನೆ…