Gl harusha
ಧಾರ್ಮಿಕವಿದೇಶಸ್ಥಳೀಯ

ಹಜ್ ಯಾತ್ರೆ: ಭಾರತದ 90 ಯಾತ್ರಿಕರು ಮೃತ್ಯು: ವರದಿ

ಈ ವರ್ಷದ ಹಜ್ ಯಾತ್ರೆಯ ಸಮಯದಲ್ಲಿ ಬಿಸಿಲಿನ ತಾಪಮಾನಕ್ಕೆ ಸಿಲುಕಿ 640ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು ಇದರಲ್ಲಿ ಕನಿಷ್ಠ 90 ಮಂದಿ ಭಾರತೀಯ ಯಾತ್ರಿಕರು ಸೇರಿರುವುದಾಗಿ ಮಾಧ್ಯಮ ವರದಿ ಮಾಡಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಈ ವರ್ಷದ ಹಜ್ ಯಾತ್ರೆಯ ಸಮಯದಲ್ಲಿ ಬಿಸಿಲಿನ ತಾಪಮಾನಕ್ಕೆ ಸಿಲುಕಿ 640ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು ಇದರಲ್ಲಿ ಕನಿಷ್ಠ 90 ಮಂದಿ ಭಾರತೀಯ ಯಾತ್ರಿಕರು ಸೇರಿರುವುದಾಗಿ ಮಾಧ್ಯಮ ವರದಿ ಮಾಡಿದೆ.
ಸುದ್ದಿ ಸಂಸ್ಥೆ ಎಎಫ್‌ಪಿ ಮಾಹಿತಿ ಪ್ರಕಾರ ಬಿಸಿಲಿನ ತಾಪಮಾನದಿಂದ ಹಜ್ ನಲ್ಲಿ ಒಟ್ಟು 645 ಯಾತ್ರಿಕರು ಮೃತಪಟ್ಟಿದ್ದು ಸಾವಿರಾರು ಮಂದಿ ಅಸ್ವಸ್ಥಗೊಂಡಿರುವುದಾಗಿ ಮಾಹಿತಿ ನೀಡಿದೆ.

srk ladders
Pashupathi
Muliya

ಅತಿಯಾದ ತಾಪಮಾನದ ಪರಿಣಾಮ ಯಾತ್ರಿಕರು ಮೃತಪಟ್ಟಿರುವುದಾಗಿ ಹೇಳಲಾಗಿದ್ದು ಇನ್ನೂ ಹಲವಾರು ಭಾರತೀಯ ಯಾತ್ರಿಕರು ನಾಪತ್ತೆಯಾಗಿರುವುದಾಗಿ ಮೂಲಗಳು ತಿಳಿಸಿವೆ.

ಜೋರ್ಡಾನ್‌, ಈಜಿಪ್ಟ್, ಭಾರತ ದೇಶದ ಯಾತ್ರಿಕರು ಹೆಚ್ಚಿನ ಸಂಖ್ಯೆಯಲ್ಲಿ ಮೃತಪಟ್ಟಿರುವುದಾಗಿ ಹೇಳಲಾಗಿದ್ದು, ಅಂತಾರಾಷ್ಟ್ರೀಯ ಮಾಧ್ಯಮಗಳ ವರದಿ ಪ್ರಕಾರ ನೋಂದಣಿ ಮಾಡದೇ ಬಂದಿರುವ ಯಾತ್ರಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಮೃತಪಟ್ಟಿರುವುದಾಗಿ ತಿಳಿಸಿದೆ ಕಾರಣ ನೋಂದಣಿ ಮಾಡದೇ ಬಂದಿರುವ ಯಾತ್ರಿಕರಿಗೆ ಉಳಿದುಕೊಳ್ಳಲು ವಸತಿ ವ್ಯವಸ್ಥೆ ಇಲ್ಲದೆ ಇರುವ ಕಾರಣ ಅತಿಯಾದ ತಾಪಮಾನಕ್ಕೆ ಸಿಕ್ಕಿ ಮೃತಪಟ್ಟಿರುವುದಾಗಿ ಹೇಳಲಾಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts