ಧಾರ್ಮಿಕ

ಡಿ. 7 – 9: ಅಜ್ಜಿಕಲ್ಲು ಶ್ರೀಶಕ್ತಿ ಜಟಾಧಾರಿ ಭಜನಾ ಮಂದಿರ ಲೋಕಾರ್ಪಣೆ

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ತಾಲೂಕಿನ ಒಳಮೊಗ್ರು ಗ್ರಾಮದ ಕೈಕಾರದಲ್ಲಿ ನಿರ್ಮಿಸಲಾದ ನೂತನ ಅಜ್ಜಿಕಲ್ಲು ಶ್ರೀಶಕ್ತಿ ಜಟಾಧಾರಿ ಭಜನಾ ಮಂದಿರ ಲೋಕಾರ್ಪಣೆ ಕಾರ್ಯಕ್ರಮ ಡಿ. 7ರಿಂದ 9ರ ತನಕ ನಡೆಯಲಿದೆ ಎಂದು ಲೋಕಾರ್ಪಣಾ ಸಮಿತಿ ಅಧ್ಯಕ್ಷ ಸೀತಾರಾಮ ರೈ ಕೈಕಾರ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಸುಮಾರು 26 ವರ್ಷಗಳ ಹಿಂದೆ ಆರಂಭಗೊಂಡ ಈ ಭಜನಾ ಮಂದಿರದ ಲೋಕಾರ್ಪಣೆ ಕಾರ್ಯಕ್ರಮವು ವೇದಮೂರ್ತಿ ದಿನೇಶ್ ಮರಡಿತ್ತಾಯ ಅವರ ನೇತೃತ್ವದಲ್ಲಿ ನಡೆಯಲಿದೆ. ಸುಮಾರು ರೂ. 85 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡು ಉದ್ಘಾಟನೆಗೊಳ್ಳಲಿರುವ ಈ ಜಟಾಧಾರಿ ಭಜನಾ ಮಂದಿರದ ಕಾರ್ಯಕ್ರಮದಲ್ಲಿ ಡಿ. 8ರಂದು ಮಧ್ಯಾಹ್ನ 11 ಗಂಟೆಗೆ ಧಾರ್ಮಿಕ ಸಭೆ ನಡೆಯಲಿದೆ. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಅಧ್ಯಕ್ಷತೆ ವಹಿಸಲಿದ್ದಾರೆ. ಒಡಿಯೂರು ದತ್ತ ಸಂಸ್ಥಾನಂ ಗುರುದೇವಾನಂದ ಸ್ವಾಮೀಜಿ ಹಾಗೂ ಮಾಣಿಲ ಮೋಹನ ದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಕಾರ್ಯಕ್ರಮವನ್ನು ಮಹಾಲಿಂಗೇಶ್ವರ ದೇವಸ್ಥಾನದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ.ಎಂ.ಕೆ.ಪ್ರಸಾದ್ ಉದ್ಘಾಟಿಸಲಿದ್ದಾರೆ. ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ಅಶೋಕ್ ರೈ, ಹರೀಶ್ ಪೂಂಜಾ ಬೆಳ್ತಂಗಡಿ, ಎಂಎಲ್‌ಸಿಗಳಾದ  ಎಸ್.ಎಲ್.ಭೋಜೇ ಗೌಡ ಮತ್ತು ಕಿಶೋರ್ ಕುಮಾರ್ ಬೊಟ್ಯಾಡಿ, ಡಾ.ಸುರೇಶ್ ಪುತ್ತೂರಾಯ, ಕೇಶವ ಪ್ರಸಾದ್ ಮುಳಿಯ, ಮಾಜಿ ಶಾಸಕ ಸಂಜೀವ ಮಠಂದೂರು, ಸೀತಾರಾಮ ರೈ ಕೆದಂಬಾಡಿ ಗುತ್ತು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪುತ್ತೂರು ತಾಲೂಕು ಯೋಜನಾಧಿಕಾರಿ ಶಶಿಧರ್ ಎಂ, ಕುಕ್ಕುಮುಗೇರು ಉಳ್ಳಾಕುಲು ದೈವಸ್ಥಾನದ ಆಡಳಿತ ಮೊಕ್ತೇಸರ ಚಿಕ್ಕಪ್ಪ ನಾಯ್ಕ್, ಮಹಾಬಲ ರೈ ವಳತ್ತಡ್ಕ, ಗೋವಿಂದರಾಜ್ ಸಿಂಗನಾಯಕನಹಳ್ಳಿ, ಉದ್ಯಮಿ ಉಜ್ವಲ್ ಪ್ರಭು, ಗೋಪಾಲಕೃಷ್ಣ ಭಟ್, ಗಣೇಶ್ ಕೋಡಿಬೈಲು ಭಾಗವಹಿಸಲಿದ್ದಾರೆ ಎಂದರು.

ಶೋಭಾಯಾತ್ರೆ:

ಡಿ. 7ರಂದು ಪೂರ್ವಾಹ್ನ ಗಣಹೋಮ, ಬಳಿಕ 9.30ಕ್ಕೆ ಶಿವನಾಮ ಸಂಕೀರ್ತನೆಯೊಂದಿಗೆ ಪುತ್ತೂರು ಮಹಾಲಿಂಗೇಶ್ವರ ದೇವಳದಿಂದ ದೇವರ ಬೆಳ್ಳಿಯ ಉಬ್ಬು ಛಾಯಾ ಬಿಂಬ ಹಾಗೂ  ಹಸಿರು ಹೊರೆಕಾಣಿಕೆ ಮೆರವಣಿಗೆ, 12 ಗಂಟೆಗೆ ಉಗ್ರಾಣ ಮುಹೂರ್ತ, 12.30ಕ್ಕೆ ಹಿಂದೂ ಜಾಗರಣಾ ವೇದಿಕೆ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಯೋಜಕ ಜಗದೀಶ್ ಕಾರಂತರಿಂದ ಧ್ವಜಾರೋಹಣ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.

ಡಿ. 8ರಂದು ಬೆಳಿಗ್ಗೆ 6ರಿಂದ ವೈದಿಕ ಕಾರ್ಯಕ್ರಮ, 8.44 ಗಂಟೆಯ ಧನುರ್ ಲಗ್ನದಲ್ಲಿ ದೇವರ ಬೆಳ್ಳಿಯ ಉಬ್ಬು ಛಾಯಾ ಬಿಂಬದ ಪ್ರತಿಷ್ಠೆ ನಡೆಯಲಿದೆ. ಬಳಿಕ ಸತ್ಯನಾರಾಯಣ ಪೂಜೆ, ಶಿವಪಂಚಾಕ್ಷರಿ ಹವನ ನಡೆಯಲಿದೆ. ಡಿ. 9ರಂದು ಸಂಜೆ 5 ಗಂಟೆಗೆ ಏಕಾಹ ಭಜನಾ ಮಂಗಳೋತ್ಸವ 5.30ಕ್ಕೆ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಲೋಕಾರ್ಪಣೆ ಸಮಿತಿ ಗೌರವಾಧ್ಯಕ್ಷ ಶ್ರೀಧರ್ ರೈ ಹೊಸಮನೆ, ಆಡಳಿತ ಸಮಿತಿ ಅಧ್ಯಕ್ಷ ಅಜಿತ್ ರೈ ಹೊಸಮನೆ, ಲೋಕಾರ್ಪಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಮೋಹನ್ ಕೆ, ಉಪಾಧ್ಯಕ್ಷ ಲಕ್ಷ್ಮಣ್ ನಾಯ್ಕ್ ಇದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಸೂರಿಕುಮೇರು ಬದ್ರಿಯಾ ಜುಮ್ಮಾ ಮಸೀದಿಯ ನೂತನ ಅಧ್ಯಕ್ಷರಾಗಿ ಉದ್ಯಮಿ ಆರ್ ಆರ್ ಸ್ಕ್ರ್ಯಾಪ್ ಮಾಲಕ ಎಸ್.ಎ. ಇಸ್ಮಾಯಿಲ್

ಮಾಣಿ: ಸೂರಿಕುಮೇರು ಬದ್ರಿಯಾ ಜುಮ್ಮಾ ಮಸೀದಿಯ ವಾರ್ಷಿಕ ಮಹಾಸಭೆ ಮದ್ರಸಾ ಹಾಲ್ ನಲ್ಲಿ ನಡೆಯಿತು.…

ತಿರುಪತಿಯಲ್ಲಿ ಭಾರೀ ಕಾಲ್ತುಳಿತ; 6 ಮಂದಿ ಭಕ್ತರು ಸಾವು |ಮೃತರ ಸಂಖ್ಯೆ ಮತ್ತಷ್ಟು ಏರಿಕೆ ಸಾಧ್ಯತೆ..!!

ಏಕಾದಶಿ ಹಿನ್ನೆಲೆಯಲ್ಲಿ ಭಕ್ತರು ಹೆಚ್ಚಿರುವ ಕಾರಣ ತಿರುಪತಿಯಲ್ಲಿ ಭಾರೀಪ್ರಮಾಣದ ಕಾಲ್ತುಳಿತ…