tamanvi
ಧಾರ್ಮಿಕ

ಆರೋಪಗಳ ಹಿಂದೆ ಭೂ ಮಾಫಿಯಾ ವಾಸನೆ: ಪಂಜಿಗುಡ್ಡೆ ಈಶ್ವರ ಭಟ್ ಅನುಮಾನ | ದೇವಳದ ಬದಿಯಿಂದ ನಿರ್ಮಾಣವಗುವ ಹೊಸರಸ್ತೆಗೆ ಅನಗತ್ಯ ವಿರೋಧ!!

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ದೇವಸ್ಥಾನದ ಅಭಿವೃದ್ಧಿ ಕುರಿತು ಅನಗತ್ಯ ಆರೋಪಗಳು ಕೇಳಿಬರುತ್ತಿದ್ದು, ಇದರ ಹಿಂದೆ ಭೂ ಮಾಫಿಯಾ ಕೆಲಸ ಮಾಡುತ್ತಿರುವ ಅನುಮಾನ ಮೂಡುತ್ತಿದೆ ಎಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಹೇಳಿದರು.

maithri

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರು ಹಾಗೂ ವ್ಯವಸ್ಥಾಪನಾ ಸಮಿತಿಯು ದೇವಸ್ಥಾನದ ಸುಮಾರು 70 ಕೋ.ರೂ.ಮೌಲ್ಯದ 11 ಎಕರೆ ಜಾಗವನ್ನು ದೇವಸ್ಥಾನಕ್ಕೆ ಪಡೆದುಕೊಂಡಿದ್ದೇವೆ. ಇದೇ ವಿಚಾರಕ್ಕೆ ನಮ್ಮ ಮೇಲೆ 7 ಪ್ರಕರಣಗಳು ದಾಖಲಾಗಿವೆ. ಜತೆಗೆ 4 ಕೋ.ರೂ. ವೆಚ್ಚದಲ್ಲಿ ತೋಡಿಗೆ ತಡೆಗೋಡೆ ನಿರ್ಮಿಸಿರುವುದರಿಂದ ಅಲ್ಲಿಯೂ ಜಾಗ ಉಳಿತಾಯವಾಗಿದೆ ಎಂದರು.

ಸಭೆಯಲ್ಲಿ ಚರ್ಚಿಸಿ ರಥಬೀದಿಯ ತೀರ್ಮಾನ

ಪುತ್ತೂರು ದೇವಸ್ಥಾನದ ರಥಬೀದಿ ಮುಕ್ತವಾಗಿದೆ. ಇಲ್ಲಿ ಸಾರ್ವಜನಿಕರಿಗೆ ಓಡಾಡಲು ಯಾವುದೇ ನಿರ್ಬಂಧಗಳಿಲ್ಲ. ಇದರಿಂದಾಗಿ ಗೋ ಕಳವು, ಕಸ ಹಾಕುವುದು, ವಾಹನ ಪಾರ್ಕಿಂಗ್, ಮೃತದೇಹ ಸಾಗಾಟ ಮೊದಲಾದ ಘಟನೆ ನಡೆಯುತ್ತಿವೆ. ಇದಕ್ಕೆ ಕಡಿವಾಣ ಹಾಕುವಂತೆ ಸಂರಕ್ಷಣಾ ಸಮಿತಿ ಮನವಿ ನೀಡಿದೆ. ಇದರ ಬಗ್ಗೆ ಸಭೆ ಕರೆದು ಚರ್ಚಿಸಿ, ಭಕ್ತರ ಗಮನಕ್ಕೆ ತಂದು ತೀರ್ಮಾನ ಕೈಗೊಳ್ಳಲಾಗುವುದು. ಅಗತ್ಯ ಆವರಣ ಗೋಡೆ, ಗೇಟ್ ಅಳವಡಿಕೆ ಬಗ್ಗೆಯೂ ಯೋಜನೆ ಇದೆ ಎಂದರು.

ರಸ್ತೆಗೆ ಅನಗತ್ಯ ವಿರೋಧ

ದೇವಸ್ಥಾನದ ಬದಿಯಿಂದ ರಸ್ತೆ ನಿರ್ಮಾಣ ಮಾಡುವ ಯೋಜನೆಯ ಬಗ್ಗೆ ಈ ಮೊದಲೇ ತಿಳಿಸಲಾಗಿತ್ತು. ಭಕ್ತರ ಸಭೆ ಕರೆದು, ಎಲ್.ಇ.ಡಿ. ಪರದೆಯ ಮೂಲಕ ಮಾಸ್ಟರ್ ಪ್ಲ್ಯಾನ್ ಅನ್ನು ವಿವರಿಸಿ ಹೊಸ ರಸ್ತೆಯನ್ನು ನಿರ್ಮಿಸುವ ತೀರ್ಮಾನಕ್ಕೆ ಬರಲಾಗಿತ್ತು. ಇದು ರಥಬೀದಿಯ ಪಾವಿತ್ರ್ಯತೆಯನ್ನು ಉಳಿಸಲು ಅನುಕೂಲ. ಆದರೆ ಇದೀಗ ಅನಗತ್ಯ ವಿರೋಧ ವ್ಯಕ್ತಪಡಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಸ್ವರ್ಣ ಕವಚಕ್ಕೆ 300 ಗ್ರಾಂ ಚಿನ್ನ

ಸ್ವರ್ಣ ಕವಚಕ್ಕೆ ಈಗಾಗಲೇ 300 ಗ್ರಾಂಗಿಂತಲೂ ಅಧಿಕ ಚಿನ್ನ ಸಮರ್ಪಣೆ, ದೇಣಿಗೆ ಸಮರ್ಪಣೆ, ತುಪ್ಪ ಸೇವೆ, ಎಳ್ಳೆಣ್ಣೆ ಅಭಿಷೇಕ, 40 ಲಕ್ಷ ರೂ. ಮೌಲ್ಯದ ಅಕ್ಕಿ ಸಮರ್ಪಣೆ, ಶಿಲಾಮಯ ಕಟ್ಟೆಗಳ ನಿರ್ಮಾಣ ಕಾರ್ಯ ನಡೆದಿದೆ. ಅನ್ನಪ್ರಸಾದ ವಿತರಣೆಯೂ ಅಚ್ಚುಕಟ್ಟಾಗಿ ನಡೆಯುತ್ತಿದ್ದು, ಕಟ್ಟಿಗೆ, ಗ್ಯಾಸ್ ವೆಚ್ಚ ಕಡಿತ ಮಾಡಲು ಸ್ಟೀಮ್ ವ್ಯವಸ್ಥೆಯನ್ನೂ ಮಾಡಿದ್ದೇವೆ.

ಸಭಾಭವನಕ್ಕೆ ಶಿಲಾನ್ಯಾಸ

ಎಲ್ಲವೂ ಕೂಡ ನಿಯಮಾವಳಿಯಂತೆ ನಡೆಯುತ್ತಿದ್ದು, ಅನುಮಾನಗಳಿದ್ದರೆ ಮಾಹಿತಿ ಹಕ್ಕಿನಲ್ಲಿ ದಾಖಲೆಗಳನ್ನು ಪಡೆಯಲಿ. ಭಕ್ತರು ಯಾವುದೇ ಅಪಪ್ರಚಾರಗಳಿಗೆ ಕಿವಿಕೊಡಬಾರದು ಎಂದರು. ಮುಂದೆ ಆ. 15ರ ಬಳಿಕ ಟೆಂಡರ್ ಕರೆದು ನೂತನ ಸಭಾಭವನಕ್ಕೆ ಶಿಲಾನ್ಯಾಸ ನಡೆಯಲಿದ್ದು, ಹಂತ ಹಂತವಾಗಿ ಅಭಿವೃದ್ಧಿ ಕಾರ್ಯಗಳು ಅನುಷ್ಠಾನಗೊಂಡು ಬ್ರಹ್ಮಕಲಶ ನಡೆಯಲಿದೆ ಎಂದರು.

ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಿ.ಈಶ್ವರ ಬೆಡೇಕರ್, ನಳಿನಿ ಪಿ.ಶೆಟ್ಟಿ, ಮಹಾಬಲ ರೈ ವಳತ್ತಡ್ಕ, ಸುಭಾಶ್ ರೈ ಬೆಳ್ಳಿಪಾಡಿ ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಪೋಳ್ಯ ಮಠದ ಬ್ರಹ್ಮಕಲಶ: ಪುತ್ತೂರು ಶ್ರೀ ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ಏಕಾದಶ ರುದ್ರ ಪಾರಾಯಣ, ಪ್ರಾರ್ಥನೆ

ಪುತ್ತೂರು: ಪೋಳ್ಯ ಶ್ರೀ ಲಕ್ಷ್ಮೀವೆಂಕಟರಮಣ ಮಠದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ…