tamanvi
ಧಾರ್ಮಿಕ

ಪೋಳ್ಯ ಮಠದ ಬ್ರಹ್ಮಕಲಶ: ಬಲ್ನಾಡು ಶ್ರೀ ಭಟ್ಟಿವಿನಾಯಕ ದೇವರಿಗೆ ಮೊದಲ ಪ್ರಾರ್ಥನೆ

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಪೋಳ್ಯ ಶ್ರೀ ಲಕ್ಷ್ಮೀವೆಂಕಟರಮಣ ಮಠದ ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಬುಧವಾರ ಬಲ್ನಾಡು ಶ್ರೀ ಭಟ್ಟಿವಿನಾಯಕ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.

maithri

ತಾಲೂಕಿನ ಪುರಾತನ ಹಾಗೂ ಕಾರಣಿಕ ಕ್ಷೇತ್ರವಾಗಿ ಗುರುತಿಸಿಕೊಂಡಿರುವ ಬಲ್ನಾಡು ಶ್ರೀ ಭಟ್ಟಿವಿನಾಯಕ ದೇವರಿಗೆ ಮೊದಲಾಗಿ ಪ್ರಾರ್ಥನೆ ಸಲ್ಲಿಸಿ, ಬ್ರಹ್ಮಕಲಶ ಹಾಗೂ ಜೀರ್ಣೋದ್ಧಾರ ಕಾರ್ಯ ಯಶಸ್ವಿಯಾಗಿ ನೆರವೇರುವಂತೆ ಪ್ರಾರ್ಥಿಸಲಾಯಿತು.

ದೇವಸ್ಥಾನದ ಅರ್ಚಕ ವೆಂಕಟರಮಣ ಭಟ್ ಪ್ರಾರ್ಥನೆ ಸಲ್ಲಿಸಿ, ಮಹಾಪೂಜೆ ನೆರವೇರಿಸಿದರು. ಈ ಸಂದರ್ಭ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಉಮಾಶಂಕರ್ ಎದುರ್ಕಳ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ. ಕೃಷ್ಣಪ್ರಸನ್ನ, ಆಡಳಿತ ಸಮಿತಿ ಸದಸ್ಯರಾದ ಕೊಡಿಪ್ಪಾಡಿ ರಾಮಚಂದ್ರ ಭಟ್ ಪೋಳ್ಯ, ನಂದಕಿಶೋರ್ ಪೋಳ್ಯ, ಕೃಷ್ಣ ಗೌಡ ತೇರಖಂಡ, ಪಲ್ಲವಿ ಉದಯ ಕುಮಾರ್ ಹನುಮಜೆ, ಜೀರ್ಣೋದ್ಧಾರ ಸಮಿತಿ ಸದಸ್ಯರಾದ ಗಣೇಶ್ ಗೌಡ ಪೋಳ್ಯ, ಹರೀಶ್ ಗೌಡ ತೇರಖಂಡ, ಪುರುಷೋತ್ತಮ ಗೌಡ ಮೂಲೆಕಾಡು ಮೊದಲಾದವರು ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts