tamanvi
ರಾಜ್ಯ ವಾರ್ತೆ

ರಾಜ್ಯದ ದೇವಾಲಯಗಳ ಆಸ್ತಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಿ: ಹೈಕೋರ್ಟ್ ಮಹತ್ವದ ನಿರ್ದೇಶನ..!!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು: ರಾಜ್ಯದ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿರುವ ಎಲ್ಲಾ ದೇವಾಲಯಗಳ ಚರ-ಸ್ಥಿರಾಸ್ತಿಗಳು, ಚಿನ್ನ-ಬೆಳ್ಳಿ ಆಭರಣಗಳು ಹಾಗೂ ಪುರಾತನ ಬೆಲೆಬಾಳುವ ವಸ್ತುಗಳ ಸಮಗ್ರ ವಿವರಗಳನ್ನು ಡಿಜಿಟಲೀಕರಣಗೊಳಿಸಿ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸುವ ಕುರಿತು ವಿವರವಾದ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಮಹತ್ವದ ನಿರ್ದೇಶನ ನೀಡಿದೆ.

ಸರ್ಕಾರ ಸಲ್ಲಿಸಬೇಕಾದ ವರದಿಯಲ್ಲಿ ರಾಜ್ಯ, ಜಿಲ್ಲೆ ಹಾಗೂ ತಾಲೂಕುವಾರು ದೇವಾಲಯಗಳ ಆಸ್ತಿಗಳ ಸಂಪೂರ್ಣ ಪಟ್ಟಿ ಇರಬೇಕು ಎಂದು ನ್ಯಾಯಪೀಠ ಸೂಚಿಸಿದೆ.

ಪ್ರತಿಯೊಂದು ದೇವಾಲಯದಲ್ಲಿರುವ ಚಿನ್ನಾಭರಣಗಳು, ನಾಣ್ಯಗಳು, ವಿಗ್ರಹಗಳು ಹಾಗೂ ಇತರ ಪವಿತ್ರ ಮತ್ತು ಬೆಲೆಬಾಳುವ ವಸ್ತುಗಳ ನಿಖರ ತೂಕ, ಮಾರುಕಟ್ಟೆ ಮೌಲ್ಯ ಹಾಗೂ ಸಾಧ್ಯವಾದಲ್ಲಿ ಹೈ-ರೆಸಲ್ಯೂಶನ್ ಛಾಯಾಚಿತ್ರ ಮತ್ತು ವಿಡಿಯೋ ದಾಖಲೆಗಳನ್ನು ಒಳಗೊಂಡಿರಬೇಕು ಎಂದು ನಿರ್ದೇಶಿಸಲಾಗಿದೆ.

ಅಲ್ಲದೆ, ದೇವಾಲಯಗಳಲ್ಲಿರುವ ಆಭರಣಗಳು ಹಾಗೂ ಬೆಲೆಬಾಳುವ ವಸ್ತುಗಳು ದೇಣಿಗೆ, ಉಡುಗೊರೆ ಅಥವಾ ಸರ್ಕಾರಿ ಅನುದಾನದ ಮೂಲಕ ಬಂದಿವೆಯೇ ಎಂಬ ಮೂಲ ವಿವರ, ಅವುಗಳಿಗೆ ಇರುವ ವಿಮಾ ರಕ್ಷಣೆ, ಬ್ಯಾಂಕ್ ಲಾಕರ್ ಅಥವಾ ಸ್ಟ್ರಾಂಗ್ ರೂಮ್‌ಗಳಲ್ಲಿ ಕೈಗೊಂಡಿರುವ ಭದ್ರತಾ ವ್ಯವಸ್ಥೆ ಹಾಗೂ ಕೊನೆಯದಾಗಿ ಭೌತಿಕ ತಪಾಸಣೆ ನಡೆಸಿದ ದಿನಾಂಕದ ಮಾಹಿತಿಯನ್ನೂ ದಾಖಲಿಸುವಂತೆ ಹೈಕೋರ್ಟ್ ಸೂಚಿಸಿದೆ.

ದೇವಾಲಯಗಳ ಆಸ್ತಿಗಳಲ್ಲಿ ಪಾರದರ್ಶಕತೆ ಮತ್ತು ಸಮರ್ಪಕ ದಾಖಲೀಕರಣಕ್ಕೆ ಒತ್ತು ನೀಡಿರುವ ನ್ಯಾಯಾಲಯದ ಈ ನಿರ್ದೇಶನ ಮಹತ್ವ ಪಡೆದಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ವಾಲ್ಮೀಕಿ ನಿಗಮ ಹಗರಣ: ಬಿ. ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಆ.21ರಂದು ಪುತ್ತೂರಿನಲ್ಲಿ ಬಿಜೆಪಿ ಪ್ರತಿಭಟನೆ

ಪುತ್ತೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದ…