ಪುತ್ತೂರು: ದೇಶಕ್ಕಾಗಿ ಪ್ರಾಣಾರ್ಪಣೆಗೈದ ವೀರಯೋಧರ ಸ್ಮರಣಾರ್ಥ ಪುತ್ತೂರಿನಲ್ಲಿ ಸ್ಥಾಪಿಸಲಾಗಿರುವ ಅಮರ್ ಜವಾನ್ ಜ್ಯೋತಿ ಸ್ಮಾರಕದಲ್ಲಿ ದಿನಪೂರ್ತಿ ಜ್ಯೋತಿ ಉರಿಯುವ ವ್ಯವಸ್ಥೆ ಕಲ್ಪಿಸಲಾಗಿದೆ.
ಜ್ಯೋತಿಯನ್ನು ನಿರಂತರವಾಗಿ ಉರಿಸಲು ಗ್ಯಾಸ್ ವ್ಯವಸ್ಥೆ ಮಾಡಲಾಗಿದ್ದು, ಇದರ ಗ್ಯಾಸ್ ಸಿಲಿಂಡರ್‌ಗಳನ್ನು ಪ್ರಾಯೋಜಿಸಲು ದೇಶಭಕ್ತ ನಾಗರಿಕರಿಗೆ ಅವಕಾಶ ನೀಡಲಾಗಿದೆ.
ಆಸಕ್ತರು ಒಂದು ಗ್ಯಾಸ್ ಸಿಲಿಂಡರ್‌ಗೆ ತಗಲುವ ಮೊತ್ತವನ್ನು ನಿಗದಿತ ಖಾತೆಗೆ ವರ್ಗಾಯಿಸಿ, ಪಾವತಿಯ ಮಾಹಿತಿಯನ್ನು ಪ್ರಕಟಣೆಯಲ್ಲಿ ನೀಡಿರುವ ಸಂಪರ್ಕ ಸಂಖ್ಯೆಗೆ ಕಳುಹಿಸುವಂತೆ ಅಮರ್ ಜವಾನ್ ಜ್ಯೋತಿ ಸಂರಕ್ಷಣಾ ಸಮಿತಿ ತಿಳಿಸಿದೆ.
ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ವೀರಯೋಧರ ಸ್ಮರಣಾರ್ಥ ನಿರಂತರವಾಗಿ ಉರಿಯುವ ಅಮರ್ ಜವಾನ್ ಜ್ಯೋತಿಗೆ ತಮ್ಮಿಂದಾದ ಕೊಡುಗೆ ನೀಡುವ ಮೂಲಕ ದೇಶಭಕ್ತಿಯ ಗೌರವ ಸಲ್ಲಿಸುವಂತೆ ಸಮಿತಿ ಮನವಿ ಮಾಡಿದೆ.






















