ಸ್ಥಳೀಯ

ಕಾವು: ಅನಾರೋಗ್ಯದಿಂದ ಬಳಲುತ್ತಿರುವ ಈಶ್ವರ ಆಚಾರ್ಯರಿಗೆ ಪುತ್ತಿಲ ಪರಿವಾರದಿಂದ ವೈದ್ಯಕೀಯ ನೆರವು

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಮಾಡ್ನೂರು ಗ್ರಾಮದ ಅಶ್ವತ್ತಡಿ ನಿವಾಸಿ, ವಿದ್ಯುತ್ ಗುತ್ತಿಗೆದಾರರಾಗಿದ್ದ ಈಶ್ವರ ಆಚಾರ್ಯ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಅವರ ಆಸ್ಪತ್ರೆ ಚಿಕಿತ್ಸೆಯ ಖರ್ಚು-ವೆಚ್ಚಗಳಿಗೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ಆರ್ಥಿಕ ನೆರವು ನೀಡಲಾಯಿತು.

ಪುತ್ತಿಲ ಪರಿವಾರದ ಸದಸ್ಯರು ‘ಸಹಾಯಹಸ್ತ’ದ ಮೂಲಕ ಸಂಗ್ರಹಿಸಿದ ₹20,000 ಮೊತ್ತದ ಚೆಕ್ ಅನ್ನು ಅರುಣ್ ಕುಮಾರ್ ಪುತ್ತಿಲ ಅವರು ಪರಿವಾರದ ಸದಸ್ಯರೊಂದಿಗೆ ಈಶ್ವರ ಆಚಾರ್ಯ ಅವರ ಪತ್ನಿ ಹರಿಣಾಕ್ಷಿ ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಪುತ್ತಿಲ ಪರಿವಾರದ ಸದಸ್ಯರು ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

1 of 138