tamanvi
ಶಿಕ್ಷಣಸ್ಥಳೀಯ

ವಿದ್ಯಾಮಾತಾ ಅಕಾಡೆಮಿಯಲ್ಲಿ ಅದ್ದೂರಿ ಕೃಷ್ಣ ವೇಷ ಸ್ಪರ್ಧೆ; 83ಕ್ಕೂ ಅಧಿಕ ಮುದ್ದು ಕೃಷ್ಣರ ಸಂಭ್ರಮ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ವಿದ್ಯಾಮಾತಾ ಅಕಾಡೆಮಿ ಹಾಗೂ ನಂದಗೋಕುಲ ಚಿಣ್ಣರ ಅಂಗಳದ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ 3ನೇ ವರ್ಷದ ಕೃಷ್ಣ ವೇಷ ಸ್ಪರ್ಧೆ ‘ಕೃಷ್ಣ ಲೀಲೆ’ ಕಾರ್ಯಕ್ರಮ ವಿದ್ಯಾಮಾತಾ ಅಕಾಡೆಮಿಯಲ್ಲಿ ಅದ್ದೂರಿಯಾಗಿ ನಡೆಯಿತು.

83ಕ್ಕೂ ಅಧಿಕ ಮುದ್ದು ಕೃಷ್ಣರು ಹಾಗೂ ಯಶೋಧಾ-ಕೃಷ್ಣ ಜೋಡಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.

ಕಾರ್ಯಕ್ರಮವನ್ನು ಪುತ್ತೂರು ತಾಲೂಕು ವಕೀಲರ ಸಂಘದ ಕಾರ್ಯದರ್ಶಿ ಸ್ವಾತಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಆಧುನಿಕತೆಯ ಕಾಲಘಟ್ಟದಲ್ಲಿ ಮಕ್ಕಳಲ್ಲಿ ಶ್ರೀಕೃಷ್ಣನ ಆದರ್ಶ ಹಾಗೂ ಜೀವನ ಮೌಲ್ಯಗಳನ್ನು ಬೆಳೆಸುವಲ್ಲಿ ಪೋಷಕರು ಹೆಚ್ಚಿನ ಗಮನ ಹರಿಸಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯ ಜೊತೆಗೆ ಸಮಾಜವನ್ನು ಒಗ್ಗೂಡಿಸುವ ಕಾರ್ಯದಲ್ಲಿ ವಿದ್ಯಾಮಾತಾ ಅಕಾಡೆಮಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದರು.

ಯಶೋಧಾ-ಕೃಷ್ಣ ವಿಭಾಗ ಹೊಸ ಆಕರ್ಷಣೆ

ಪ್ರತಿ ವರ್ಷ ಕೃಷ್ಣ ವೇಷ ಸ್ಪರ್ಧೆಯನ್ನು ಆಯೋಜಿಸುತ್ತಿರುವ ವಿದ್ಯಾಮಾತಾ ಅಕಾಡೆಮಿ, ಈ ಬಾರಿ ಸ್ಪರ್ಧೆಯಲ್ಲಿ ಹೊಸ ವಿಭಾಗವನ್ನು ಪರಿಚಯಿಸಿತು. 1ರಿಂದ 3 ವರ್ಷ, 3ರಿಂದ 6 ವರ್ಷ ಹಾಗೂ ಯಶೋಧಾ-ಕೃಷ್ಣ ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು.

ಓಣಂ ಪೂಕಳಂ ಮೂಲಕ ಓಣಂ ಆಚರಣೆ

ಇದೇ ಸಂದರ್ಭದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಪಡೆಯುತ್ತಿರುವ ವಿದ್ಯಾಮಾತಾ ಅಕಾಡೆಮಿಯ ವಿದ್ಯಾರ್ಥಿಗಳು ಓಣಂ ಪೂಕಳಂ ರಚಿಸಿ ಸರಳವಾಗಿ ಓಣಂ ಹಬ್ಬವನ್ನು ಆಚರಿಸಿದರು.

ಕೃಷ್ಣ ವೇಷ ಸ್ಪರ್ಧೆ: ವಿಜೇತರು

1ರಿಂದ 3 ವರ್ಷದ ವಿಭಾಗ:

ಪ್ರಥಮ: ಮುರುಳ್ಯದ ಕಳತಾಜೆ ನಿವಾಸಿಗಳಾದ ನಿರೀಕ್ಷಾ ಮತ್ತು ಕೀರ್ತನ್ ದಂಪತಿಯ ಪುತ್ರಿ ದಿತ್ಯಾ ಕೆ. ಶೆಟ್ಟಿ.

ದ್ವಿತೀಯ: ಪುತ್ತೂರು ಎಪಿಎಂಸಿ ರಸ್ತೆಯ ಅರುಣ್ ಕಾಂಪ್ಲೆಕ್ಸ್ ನಿವಾಸಿಗಳಾದ ಸ್ವಾತಿ ಮತ್ತು ಬಾಲಕೃಷ್ಣ ದಂಪತಿಯ ಪುತ್ರಿ ಶ್ರೀವಿ ಬಿ.

ತೃತೀಯ: ಕಾರ್ಕಳ ತಾಲೂಕಿನ ಈದು ನಿವಾಸಿಗಳಾದ ರಶ್ಮಿತಾ ಜೈನ್ ಮತ್ತು ಶರ್ಮಿತ್ ಜೈನ್ ದಂಪತಿಯ ಪುತ್ರ ಕೃತರ್ವ್ ಸತ್ಯಾ ಜೈನ್.

3ರಿಂದ 6 ವರ್ಷದ ವಿಭಾಗ:

ಪ್ರಥಮ: ಬಂಟ್ವಾಳ ತಾಲೂಕಿನ ವಿಟ್ಲ-ಮೂಡ್ನೂರು ನಿವಾಸಿಗಳಾದ ಭಾಗ್ಯಲಕ್ಷ್ಮೀ ಮತ್ತು ಶಿವರಾಮ್ ದಂಪತಿಯ ಪುತ್ರಿ ಮಾನ್ಯ ಶ್ರೀಯಾ.

ದ್ವಿತೀಯ: ಪುತ್ತೂರು ತಾಲೂಕಿನ ನಿಡ್ಪಳ್ಳಿ ನಿವಾಸಿಗಳಾದ ಶೋಭಾ ಕೆ. ಮತ್ತು ಜನಾರ್ಧನ ಡಿ. ದಂಪತಿಯ ಪುತ್ರಿ ಚವಿಷ್ಕಾ ದುರ್ಗಾ.

ತೃತೀಯ: ಪುತ್ತೂರು ತಾಲೂಕಿನ ಮಾಡಾವು ನಿವಾಸಿಗಳಾದ ಚೈತನ್ಯ ಸಿ. ರೈ ಮತ್ತು ಚಂದ್ರಶೇಖರ ಎಸ್. ದಂಪತಿಯ ಪುತ್ರಿ ಚಾರಿತ್ರ್ಯ ಸಿ. ರೈ.

ಯಶೋಧಾ-ಕೃಷ್ಣ ವಿಭಾಗದ ವಿಜೇತರು

ಪ್ರಥಮ: ಪುತ್ತೂರು ಕಸಬಾ ನಿವಾಸಿ ಸುಧಾಕರ ಅವರ ಪತ್ನಿ ಭವ್ಯ ಕೆ. ಹಾಗೂ ಪುತ್ರಿ ಅನಿತಾ ಕೆ. ಆಚಾರ್ಯ.

ದ್ವಿತೀಯ: ಬಂಟ್ವಾಳ ತಾಲೂಕಿನ ಕುಲ ನಿವಾಸಿ ಲೋಹಿತ್ ಪಿ. ಅವರ ಪತ್ನಿ ಲಿಖಿತ ಎಂ. ಹಾಗೂ ಪುತ್ರಿ ಚಿರಣ್ವಿ ಎಂ.

ತೃತೀಯ: ಪುತ್ತೂರು ತಾಲೂಕಿನ ಚಿಕ್ಕಮೂಡ್ನೂರು ನಿವಾಸಿ ಪುರುಷೋತ್ತಮ ಕೆ. ಅವರ ಪತ್ನಿ ವಿಮಲತೇಜಾಕ್ಷಿ ಹಾಗೂ ಪುತ್ರಿ ಋತ್ವಿಕಾ ಪಿ.

ವಿಜೇತರಿಗೆ ಆಕರ್ಷಕ ಟ್ರೋಫಿ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮುದ್ದು ಕೃಷ್ಣರು ಹಾಗೂ ಯಶೋಧಾ-ಕೃಷ್ಣರಿಗೆ ಗೌರವದ ಪದಕ ಮತ್ತು ಪ್ರಮಾಣಪತ್ರ ವಿತರಿಸಲಾಯಿತು.

ಸ್ಪರ್ಧೆಯ ತೀರ್ಪುಗಾರರಾಗಿ ಚೇತನಾ ಸತೀಶ್, ಗಾಯತ್ರಿ ಹಾಗೂ ದೀಕ್ಷಿತಾ ಅವರು ಸಹಕರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕ ಭಾಗ್ಯೇಶ್ ರೈ ವಹಿಸಿದ್ದರು. ಅವರು ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ನಂದಗೋಕುಲ ಚಿಣ್ಣರ ಅಂಗಳದ ಮುಖ್ಯಸ್ಥೆ ಪವಿತ್ರ ವಸಂತ್, ವಿದ್ಯಾಮಾತಾ ಅಕಾಡೆಮಿಯ ನಿರ್ದೇಶಕಿ ರಮ್ಯಾ ಭಾಗ್ಯೇಶ್ ರೈ ಹಾಗೂ ದೇವಿದ್ಯಾ ರೈ ಉಪಸ್ಥಿತರಿದ್ದರು.

ಕಾರ್ಯಕ್ರಮದ ಯಶಸ್ಸಿಗೆ ವಿದ್ಯಾಮಾತಾ ಅಕಾಡೆಮಿಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗ ಸಹಕರಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಪುತ್ತೂರು: ಪ್ರೆಸ್ ಕ್ಲಬ್ ಅವರಣದಲ್ಲಿ ಶಾಸಕರ ಬೆಂಬಲಿಗರಿಂದ ಹಕೀಂ ಕೂರ್ನಡ್ಕ ಪ್ರೆಸ್‌ಮೀಟ್‌ ತಡೆ ಯತ್ನ ..!!

ಪುತ್ತೂರು: ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ಪ್ರೆಸ್‌ಮೀಟ್ ನಡೆಸಲು ಆಗಮಿಸಿದ್ದ…

ಸರಿಗಮಪ ಲಿಟಲ್ ಚಾಂಪ್ಸ್ ವಿನ್ನರ್ ಅಶ್ಮಿತ್‌ಗೆ ವಿಟ್ಲದಲ್ಲಿ ಅದ್ಧೂರಿ ಸ್ವಾಗತ: ಹುಟ್ಟೂರಿನ ಗೌರವ, ರೋಡ್ ಶೋ

ವಿಟ್ಲ: ಝೀ ಕನ್ನಡದ ಸರಿಗಮಪ ಲಿಟಲ್ ಚಾಂಪ್ಸ್ ರಿಯಾಲಿಟಿ ಶೋನಲ್ಲಿ ವಿಜೇತರಾಗಿ ಹೊರಹೊಮ್ಮಿದ…

ಬ್ಯಾಂಕ್ ಆಫ್ ಬರೋಡದಲ್ಲಿ ಬ್ಯಾಂಕಿಂಗ್ ಅಸಿಸ್ಟೆಂಟ್ ಆಗಿ ಆಯ್ಕೆಯಾದ ವಿದ್ಯಾಮಾತಾ ಅಕಾಡೆಮಿ ವಿದ್ಯಾರ್ಥಿನಿ ಜಯಪ್ರಭಾ ಕೆ

ಪುತ್ತೂರು: ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯಲ್ಲಿ ನಿರಂತರ ಯಶಸ್ಸು ದಾಖಲಿಸುತ್ತಿರುವ…

ದ್ವೇಷಪೂರಿತ ಹೇಳಿಕೆ ಆರೋಪ: ಜಗದೀಶ್ ಕಾರಂತ್, ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ಪುತ್ತೂರು: ದರ್ಬೆಯಲ್ಲಿ ನಡೆದ ಖಾಸಗಿ ಗಲಾಟೆಯನ್ನು ಮುಂದಿಟ್ಟುಕೊಂಡು ಪುತ್ತೂರಿನ ಶಾಂತಿ ಕದಡಲು…

1 of 159