tamanvi
ಸ್ಥಳೀಯ

ಸರಿಗಮಪ ಲಿಟಲ್ ಚಾಂಪ್ಸ್ ವಿನ್ನರ್ ಅಶ್ಮಿತ್‌ಗೆ ವಿಟ್ಲದಲ್ಲಿ ಅದ್ಧೂರಿ ಸ್ವಾಗತ: ಹುಟ್ಟೂರಿನ ಗೌರವ, ರೋಡ್ ಶೋ

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ವಿಟ್ಲ: ಝೀ ಕನ್ನಡದ ಸರಿಗಮಪ ಲಿಟಲ್ ಚಾಂಪ್ಸ್ ರಿಯಾಲಿಟಿ ಶೋನಲ್ಲಿ ವಿಜೇತರಾಗಿ ಹೊರಹೊಮ್ಮಿದ ವಿಟ್ಲದ ಅಶ್ಮಿತ್ ಎ.ಜೆ. ಅವರಿಗೆ ಹುಟ್ಟೂರಿನಲ್ಲಿ ಅದ್ಧೂರಿ ಗೌರವ ಸಮಾರಂಭ ಹಾಗೂ ವಿಜಯೋತ್ಸವ ರೋಡ್ ಶೋ ನಡೆಯಿತು.

ವಿಟಿವಿ ವಿಟ್ಲ ಮತ್ತು ಎಸ್‌ಎಲ್‌ವಿ ಬುಕ್ ಹೌಸ್ ಆಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಟ್ಲ ನಿರೀಕ್ಷಣಾ ಕಚೇರಿಯಿಂದ ಆರಂಭವಾದ ವಿಜಯೋತ್ಸವ ಮೆರವಣಿಗೆ ಜೈನ ಬಸದಿಯವರೆಗೆ ತೆರಳಿ, ಬಳಿಕ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದವರೆಗೆ ಪೇಟೆಯ ಪ್ರಮುಖ ರಸ್ತೆಗಳಲ್ಲಿ ಸಾಗಿತು.

ವಿಟ್ಲ ಅರಮನೆಯ ಕೃಷ್ಣಯ್ಯ ಬಲ್ಲಾಳ್, ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್ ಹಾಗೂ ವಿಟಿವಿ ಆಡಳಿತ ನಿರ್ದೇಶಕ ರಾಮ್‌ದಾಸ್ ಶೆಟ್ಟಿ ಅವರು ಅಶ್ಮಿತ್‌ಗೆ ಹಾರ ಹಾಕಿ ರೋಡ್ ಶೋಗೆ ಚಾಲನೆ ನೀಡಿದರು.

ಮೆರವಣಿಗೆಯ ಸಂದರ್ಭದಲ್ಲಿ ಪಂಚಮಿ ಹೋಟೆಲ್ ಮಾಲಕ ರಿತೇಶ್ ಶೆಟ್ಟಿ, ಗಣೇಶ್ ಮೆಡಿಕಲ್ ಮಾಲಕ ಸತೀಶ್ ಆಳ್ವ ಸೇರಿದಂತೆ ಹಲವು ಗಣ್ಯರು ಹಾಗೂ ಅಶ್ಮಿತ್ ಅಭಿಮಾನಿಗಳು ಹಾರಾರ್ಪಣೆ ಮಾಡಿ ಶುಭ ಹಾರೈಸಿದರು.

ಸಪ್ತ ಜ್ಯುವೆಲ್ಸ್ ವತಿಯಿಂದ ವಿಶೇಷ ಗೌರವ

ಸಪ್ತ ಜ್ಯುವೆಲ್ಸ್ ವತಿಯಿಂದ ಅಶ್ಮಿತ್ ಅವರನ್ನು ಶಾಲು, ಹಾರ, ಫಲಪುಷ್ಪ ಹಾಗೂ ದೇವರ ಚಿನ್ನದ ವಿಗ್ರಹ ನೀಡಿ ಸನ್ಮಾನಿಸಲಾಯಿತು. ಈ ವೇಳೆ ಸಪ್ತ ಜ್ಯುವೆಲ್ಸ್‌ನ ಪಾಲುದಾರರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಜೈನ ಬಸದಿಯಲ್ಲಿ ಅಶ್ಮಿತ್ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಜಿತೇಶ್ ಜೈನ್ ಮತ್ತು ದರ್ಶನ್ ಜೈನ್ ಅವರ ಮಾರ್ಗದರ್ಶನದಲ್ಲಿ ಡಾ. ಮಂದಾರ ಜೈನ್, ಶೀನಣ್ಣ ಸೇರಿದಂತೆ ಹಲವರು ಅಶ್ಮಿತ್ ಅವರನ್ನು ಸನ್ಮಾನಿಸಿದರು. ಬಳಿಕ ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ಸಿಹಿ ತಿಂಡಿ ವಿತರಿಸಲಾಯಿತು.

ನಂತರ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ ಅಶ್ಮಿತ್, ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನದ ವತಿಯಿಂದಲೂ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಜಯಕರ್ನಾಟಕ ಜನಪರ ವೇದಿಕೆಯ ಸಂಸ್ಥಾಪಕ ಹಾಗೂ ರಾಜ್ಯ ಕುಸ್ತಿ ಸಂಘದ ಅಧ್ಯಕ್ಷ ಬಿ. ಗುಣರಂಜನ್ ಶೆಟ್ಟಿ ಮತ್ತು ವಿದೇಶ ಪ್ರವಾಸದಲ್ಲಿದ್ದ ಎಸ್‌ಎಲ್‌ವಿ ಬುಕ್ ಹೌಸ್ ಮಾಲಕ, ಉದ್ಯಮಿ ದಿವಾಕರ್ ದಾಸ್ ಅವರು ವಿಡಿಯೋ ಕಾಲ್ ಮೂಲಕ ಅಶ್ಮಿತ್‌ಗೆ ಶುಭ ಹಾರೈಸಿದರು.

ಮೆರವಣಿಗೆ ವೇಳೆ ಭದ್ರತಾ ವ್ಯವಸ್ಥೆ ಕಲ್ಪಿಸಿದ್ದ ವಿಟ್ಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಪ್ರಕಾಶ್ ದೇವಾಡಿಗ ಹಾಗೂ ಪೊಲೀಸ್ ಸಿಬ್ಬಂದಿ ಅಶ್ಮಿತ್‌ಗೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಸುದರ್ಶನ್ ಪಡಿಯಾರ್, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯರಾದ ಅರುಣ್ ವಿಟ್ಲ, ರವಿ ಪ್ರಕಾಶ್ ವಿಟ್ಲ, ಜಯರಾಮ್ ಬಲ್ಲಾಳ್, ರವಿ ವರ್ಮಾ, ತಿಲಕ್ ರಾಜ್ ಶೆಟ್ಟಿ, ಅಶ್ವಿನಿ ಪೆರುವಾಯಿ, ತುಳಸಿ ಶೆಟ್ಟಿ, ವಿಜಿತ್, ವಿನೋದ್ ಕಾಶಿ ಮಠ, ಮೋಹನ್ ಕಟ್ಟೆ, ಪ್ರಭಾಕರ ಅಮೈ, ಕಿಶೋರ್ ಕೋಲ್ಪೆ, ಜನಾರ್ಧನ ಕಾರ್ಯಡಿ, ಶೈಲೇಶ್ ಶೆಟ್ಟಿ, ಯತೀಶ್ ಪೆರುವಾಯಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ದಾರಿಯುದ್ದಕ್ಕೂ ವಿಟ್ಲದ ಜನರು ಅಶ್ಮಿತ್‌ಗೆ ಶೇಕ್‌ಹ್ಯಾಂಡ್ ನೀಡಿ ಶುಭ ಹಾರೈಸಿದರು. ಮಕ್ಕಳು ಅಶ್ಮಿತ್ ಅವರಿಂದ ಆಟೋಗ್ರಾಫ್ ಪಡೆದು ಸಂಭ್ರಮಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಮನೆಗೆ ಬಿಡುವುದಾಗಿ ಬೈಕ್‌ನಲ್ಲಿ ಕರೆತಂದು ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ: ಪೋಕ್ಸೋ ಪ್ರಕರಣ ದಾಖಲು

ಮಂಗಳೂರು: ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅಪ್ರಾಪ್ತ ಬಾಲಕಿಯನ್ನು ಮನೆಗೆ ಬಿಡುವುದಾಗಿ…

1 of 131