tamanvi
ಟ್ರೆಂಡಿಂಗ್ ನ್ಯೂಸ್ಧಾರ್ಮಿಕ

ಧರ್ಮಸ್ಥಳಕ್ಕೆ ರಾಕಿಂಗ್ ಸ್ಟಾರ್ ಯಶ್ ಭೇಟಿ; ಮಂಜುನಾಥ ಸ್ವಾಮಿಯ ದರ್ಶನ

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಧರ್ಮಸ್ಥಳ: ರಾಕಿಂಗ್ ಸ್ಟಾರ್ ಯಶ್ ಅವರು ಆ.25ರಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು.

ಧರ್ಮಸ್ಥಳಕ್ಕೆ ಆಗಮಿಸಿದ ಯಶ್ ಅವರು ಮೊದಲು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಹರ್ಷೇಂದ್ರ ಕುಮಾರ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಬಳಿಕ ನೇರವಾಗಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು.

15 ನಿಮಿಷಗಳ ಕಾಲ ವಿಶೇಷ ಪ್ರಾರ್ಥನೆ

ಯಶ್ ಅವರು ಗರ್ಭಗುಡಿಯ ಸಮೀಪ ನಿಂತು ಸುಮಾರು 15 ನಿಮಿಷಗಳ ಕಾಲ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ತಮ್ಮ ಮುಂಬರುವ ‘ಟಾಕ್ಸಿಕ್’ ಚಿತ್ರದ ಯಶಸ್ಸಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಮಹಾ ಮಂಗಳಾರತಿಯನ್ನು ಸ್ವೀಕರಿಸಿದರು.

ಯಶ್ ಅವರ ಧರ್ಮಸ್ಥಳ ಭೇಟಿಯ ಹಿನ್ನೆಲೆಯಲ್ಲಿ ದೇವಸ್ಥಾನದ ಸುತ್ತಮುತ್ತ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ತಮ್ಮ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಜೆಸಿಐ ಪುತ್ತೂರು ನಿಯೋ ಪ್ರೈಮ್ ಅಸ್ತಿತ್ವಕ್ಕೆ | ನಾಳೆ (ಆ. 14) ಸಂಜೆ ಉದ್ಘಾಟನೆ, ಪದಸ್ವೀಕಾರ ಸಮಾರಂಭ

ಪುತ್ತೂರು: ಜೆಸಿಐ ಉಡುಪಿ ಸಿಟಿ ಪ್ರಾಯೋಜಕತ್ವದಲ್ಲಿ ಜೆಸಿಐ ಪುತ್ತೂರು ನಿಯೋ ಪ್ರೈಮ್ ಉದ್ಘಾಟನೆ…