ಪುತ್ತೂರು : ಕಳೆದ 46 ವರ್ಷಗಳಿಂದ ಸಮಾಜದ ಎಲ್ಲಾ ವರ್ಗದವರಿಗೂ ಯೋಗ ತರಗತಿಗಳನ್ನು ಉಚಿತವಾಗಿ ನೀಡುತ್ತಿರುವ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ಇದರ ಆಶ್ರಯದಲ್ಲಿ ಪುತ್ತೂರು ತಾಲೂಕಿನ ಮುರ ಒಕ್ಕಲಿಗ ಗೌಡ ಸಮುದಾಯ ಭವನ, ಕೆದಿಲ ಶ್ರೀದೇವಿ ಭಜನಾ ಮಂಡಳಿ, ಗಾಂಧಿನಗರ, ಉಪ್ಪಿನಂಗಡಿ ಶ್ರೀಗುರುರಾಘವೇಂದ್ರ ಮಠ, ರಾಮಕುಂಜ ಶ್ರೀ ರಾಮಕುಂಜೇಶ್ವರ ದೇವಸ್ಥಾನ, ಇರ್ದೆ ಶ್ರೀ ವಿಷ್ಣುಮೂರ್ತಿ ದೇವಾಲಯ, ಇರ್ದೆ ಬೈಲಾಡಿಯಲ್ಲಿ ನವಂಬರ್ 29ನೇ ಆದಿತ್ಯವಾರ 5 ಕಡೆ ಏಕಕಾಲದಲ್ಲಿ ಉಚಿತ ಯೋಗ ಶಿಕ್ಷಣ ತರಗತಿಗಳು ಬೆಳಗ್ಗೆ ಉದ್ಘಾಟನೆಗೊಳ್ಳಲಿದೆ.
ದೈನಂದಿನ ತರಗತಿಗಳು ಬೆಳಗ್ಗೆ ಗಂಟೆ 5.00ರಿಂದ 6.30ರ ತನಕ ನಡೆಯಲಿದ್ದು 10 ವರ್ಷ ಮೇಲ್ಪಟ್ಟ ಎಲ್ಲಾ ವಯಸ್ಸಿನ ಪುರುಷರು, ಮಹಿಳೆಯರು ಭಾಗವಹಿಸಬಹುದಾಗಿದೆ. ಕೇಂದ್ರ ಸಮಿತಿಯಿಂದ ಶಿಕ್ಷಣ ಪಡೆದ ನುರಿತ ಶಿಕ್ಷಕ ವರ್ವದವರಿಂದ ಯೋಗಾಸನ, ಪ್ರಾಣಾಯಾಮ, ಧ್ಯಾನ, ಶರೀರಶುದ್ಧೀಕರಣ ಕ್ರಿಯೆ, ಅಗ್ನಿಹೋತ್ರ, ಸೂರ್ಯನಮಸ್ಕಾರ, ಯೋಗ ಚಿಕಿತ್ಸಾಕ್ರಮ, ಆಯುರ್ವೇದ, ಆಹಾರ ಪದ್ಧತಿ, ಭಾಷಣ ಕಲೆ, ಭಜನೆಗಳನ್ನು ಸಮಿತಿ ವತಿಯಿಂದ ಉಚಿತವಾಗಿ ಹೇಳಿಕೊಡಲಾಗುವುದು. ಯೋಗಾಭ್ಯಾಸದಿಂದ ಉದ್ವೇಗ, ಒತ್ತಡ, ಖಿನ್ನತೆ ಶಮನಕ್ಕಾಗಿ, ಏಕಾಗ್ರತೆಗಾಗಿ, ನೆನಪಿನ ಶಕ್ತಿಯ ಚುರುಕಿಗೆ, ಸಂಧಿವಾತ ದೋಷ, ನಿದ್ರೆಯ ಸಮಸ್ಯೆ, ಅಸಿಡಿಟಿ, ಮೂಲವ್ಯಾಧಿ, ರಕ್ತದೊತ್ತಡ, ಗಂಟುನೋವು, ಮೈಗ್ರೇನ್, ತಲೆನೋವು ಇತ್ಯಾದಿ ಸಮಸ್ಯೆಗಳ ನಿವಾರಣೆಯಾಗುವುದು.
ಹೆಚ್ಚಿನ ಮಾಹಿತಿಗಾಗಿ 9449639889, 9535710073 ಅನ್ನು ಸಂಪರ್ಕಿಸಬೇಕಾಗಿ ಸಂಸ್ಥೆಯ ಪ್ರಕಟಣೆ ತಿಳಿಸಿದೆ.






















