ಸ್ಥಳೀಯ

ಡಿಸೆಂಬರ್ 20ರ ಒಕ್ಕಲಿಗ ಗೌಡ ಸಮುದಾಯದ ವಾರ್ಷಿಕ ಸಮಾವೇಶ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಸಾಂಸ್ಕೃತಿಕ ವೈಭವ: ಬನ್ನೂರು ಗ್ರಾಮ ಸಮಿತಿ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

ಬನ್ನೂರು: ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಹಾಗೂ ಸಹ ಸಂಸ್ಥೆಗಳ ವತಿಯಿಂದ ಡಿಸೆಂಬರ್ 20ರಂದು ನಡೆಯಲಿರುವ ವಾರ್ಷಿಕ ಸಮಾವೇಶ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಸಾಂಸ್ಕೃತಿಕ ವೈಭವ ಕಾರ್ಯಕ್ರಮದ ಪೂರ್ವಭಾವಿಯಾಗಿ ಬನ್ನೂರು ವಲಯದ ಬನ್ನೂರು ಗ್ರಾಮ ಸಮಿತಿ ಸಭೆಯು ಎ.ವಿ. ನಾರಾಯಣ ಅವರ ಮನೆಯಲ್ಲಿ ನಡೆಯಿತು.

ಸಭೆಯಲ್ಲಿ ಡಿಸೆಂಬರ್ 20ರ ಕಾರ್ಯಕ್ರಮಕ್ಕೆ ಬನ್ನೂರು ಗ್ರಾಮದಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದ ಸದಸ್ಯರು ಕುಟುಂಬ ಸಮೇತರಾಗಿ ಭಾಗವಹಿಸುವಂತೆ ಮನೆಮನೆಗೆ ಆಮಂತ್ರಣ ನೀಡಲು ನಿರ್ಧರಿಸಲಾಯಿತು.

ಸಾಮೂಹಿಕ ಸತ್ಯನಾರಾಯಣ ಪೂಜೆಯಲ್ಲಿ ಕುಟುಂಬ ಸಮೇತರಾಗಿ ಪಾಲ್ಗೊಳ್ಳುವಂತೆ ಸಮುದಾಯದ ಬಂಧುಗಳಿಗೆ ಮನವಿ ಮಾಡಲು ಹಾಗೂ ಸಾಂಸ್ಕೃತಿಕ ವೈಭವ ಕಾರ್ಯಕ್ರಮದ ಯಶಸ್ಸಿಗೆ ಗ್ರಾಮ ಸಮಿತಿ ಮತ್ತು ಒಕ್ಕೂಟದ ಪದಾಧಿಕಾರಿಗಳು,ಸದಸ್ಯರು ಸಕ್ರಿಯವಾಗಿ ಕೈಜೋಡಿಸಲು ತೀರ್ಮಾನಿಸಲಾಯಿತು.

ಅಲ್ಲದೆ, ಕಾರ್ಯಕ್ರಮದ ಪ್ರಚಾರ ಕಾರ್ಯವನ್ನು ವ್ಯವಸ್ಥಿತವಾಗಿ ನಡೆಸುವುದು, ಯುವಕರು, ಮಹಿಳೆಯರು ಸೇರಿದಂತೆ ಸಮುದಾಯದ ಪ್ರತಿಯೊಬ್ಬರ ಸಹಭಾಗಿತ್ವವನ್ನು ಖಚಿತಪಡಿಸಿಕೊಳ್ಳುವುದು ಹಾಗೂ ಕಾರ್ಯಕ್ರಮಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರ ನೀಡುವ ಕುರಿತು ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಸುಂದರ ಗೌಡ ನಡುಬೈಲು, ಪ್ರಧಾನ ಕಾರ್ಯದರ್ಶಿ ಶ್ರೀಧರ ಗೌಡ ಪಾಣತ್ತಿಲ, ಕೋಶಾಧಿಕಾರಿ ಶ್ರೀಧರ ಕಣಜಾಲು, ಟ್ರಸ್ಟ್ ಸ್ಥಾಪಕ ಅಧ್ಯಕ್ಷರಾದ ಎ.ವಿ. ನಾರಾಯಣ ಗೌಡ ಅಲಂಬುಡ, ಟ್ರಸ್ಟ್ ಅಧ್ಯಕ್ಷರಾದ ವಿಶ್ವನಾಥ್ ಬನ್ನೂರು, ಬನ್ನೂರು ಗ್ರಾಮ ಸಮಿತಿ ಅಧ್ಯಕ್ಷ ಅಮರನಾಥ ಗೌಡ, ಮಹಿಳಾ ಸಂಘದ ಮಾಜಿ ಅಧ್ಯಕ್ಷೆ ಗೌರಿ ಬನ್ನೂರು, ರಮೇಶ್ ನೀರ್ಪದೇ ಹಾಗೂ ಸಾಂಸ್ಕೃತಿಕ ವೈಭವ ಕಾರ್ಯಕ್ರಮದ ಸಹ ಸಂಚಾಲಕಿ ಸುಮಲತಾ,ಲಕ್ಷ್ಮಣ ಗೌಡ ಹಲಂಗ,ವಸಂತ ದೇವಸ್ಯ, ತಿಮ್ಮಯ್ಯ ಗೌಡ, ರಾಧಾಕೃಷ್ಣ ಗೌಡ,ಸುಮಲತಾ ಹಲಂಗ, ಗಂಗಾಧರ ಗೌಡ ಅಲಂಬುಡ, ಶಶಿಕಿರಣ ಹಲಂಗ, ವನಿತಾ ಬನ್ನೂರು ಸೇರಿದಂತೆ ಸಮುದಾಯದ ಹಲವಾರು ಮಂದಿ ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಡಿಸೆಂಬರ್ 20ರ ಒಕ್ಕಲಿಗ ಗೌಡ ಸಮುದಾಯದ ವಾರ್ಷಿಕ ಸಮಾವೇಶಕ್ಕೆ ಪುತ್ತೂರು ವಲಯ ಸಜ್ಜು – ಮನೆಮನೆಗೆ ಆಹ್ವಾನ ನೀಡಲು ನಿರ್ಧಾರ

ಪುತ್ತೂರು: ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಹಾಗೂ ಸಹ ಸಂಘಟನೆಗಳ ಸಹಯೋಗದಲ್ಲಿ ಡಿಸೆಂಬರ್…

ಡಿ. 20ರ ಒಕ್ಕಲಿಗ ಸಮುದಾಯದ ವಾರ್ಷಿಕ ಸಮಾವೇಶದ ಪ್ರಚಾರಕ್ಕೆ ಕುಂಬ್ರ ವಲಯದ ಸಿದ್ಧತೆ – ತಾಲೂಕು ಕ್ರೀಡಾಕೂಟದ ಕುರಿತು ಚರ್ಚೆ

ಪುತ್ತೂರು: ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಹಾಗೂ ಸಹ ಸಂಘಟನೆಗಳ ಸಹಯೋಗದಲ್ಲಿ ಡಿಸೆಂಬರ್…

1 of 140