ಪುತ್ತೂರು: ಪುತ್ತೂರಿನ ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯಕ್ಕೆ ಸುಸಜ್ಜಿತವಾದ ಸಮುದಾಯ ಭವನದ ಅಗತ್ಯವನ್ನು ಮನಗಂಡಿರುವ ಶಾಸಕ ಅಶೋಕ್ ಕುಮಾರ್ ರೈ ಅವರು ಜಾಗ ಮಂಜೂರು ಮಾಡಿಸುವುದರ ಜೊತೆಗೆ ಜಾಗದ ಅಧಿಕೃತ ದಾಖಲೆಗಳನ್ನು ಸಮುದಾಯದ ಪ್ರಮುಖರ ಕೈಗೆ ಹಸ್ತಾಂತರ ಮಾಡಿರುವುದನ್ನು ದಕ್ಷಿಣ ಕನ್ನಡ ಜಿಲ್ಲಾ ವಾಲಿಬಾಲ್ ಅಸೋಸಿಯೇಶನ್ ಅಧ್ಯಕ್ಷ ಇಬ್ರಾಹಿಂ ಗೋಳಿಕಟ್ಟೆ ಅಭಿನಂದಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಉತ್ತಮವಾದ ಸರ್ಕಾರಿ ಜಾಗವನ್ನು ಗುರುತಿಸಿ, ಸಮುದಾಯ ಭವನ ನಿರ್ಮಿಸಲು ಆ ಜಾಗವನ್ನು ಮಂಜೂರು ಮಾಡಿಸುವುದರ ಜೊತೆಗೆ, ಭವನ ನಿರ್ಮಾಣಕ್ಕೆ ಬೇಕಾದ ಅನುದಾನವನ್ನೂ ಸರ್ಕಾರದಿಂದ ತಂದು ಕೊಡುವ ಭರವಸೆಯನ್ನು ಶಾಸಕರು ನೀಡಿದ್ದಾರೆ. ಅವರು ಆಡಿದ ಮಾತಿನಂತೆಯೇ ಇದೀಗ ಜಾಗದ ಅಧಿಕೃತ ದಾಖಲೆಗಳನ್ನು ಸಮುದಾಯದ ಪ್ರಮುಖರ ಕೈಗೆ ಹಸ್ತಾಂತರಿಸುವ ಮೂಲಕ, ತಾವು ನುಡಿದಂತೆ ನಡೆಯುವ ಜನನಾಯಕ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ ಎಂದಿದ್ದಾರೆ.
ಸಮುದಾಯ ಭವನ ನಿರ್ಮಾಣದ ಹಾದಿಯಲ್ಲಿ ಇನ್ನೂ ಹಲವಾರು ತಾಂತ್ರಿಕ ಹಾಗೂ ಆಡಳಿತಾತ್ಮಕ ಕೆಲಸಗಳು ಬಾಕಿ ಇವೆ. ಈ ಕನಸು ಸಂಪೂರ್ಣವಾಗಿ ನನಸಾಗುವವರೆಗೂ, ಮುಂದಿನ ಎಲ್ಲಾ ಕೆಲಸಗಳನ್ನು ನಿರಂತರವಾಗಿ ಅನುಸರಿಸಿಕೊಂಡು ಜವಾಬ್ದಾರಿಯೂ ಸಮುದಾಯದ ಮೇಲಿದೆ ಎಂದು ನೆನಪಿಸಿಕೊಂಡರು.
ಪುತ್ತೂರು ವಿಧಾನಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯ ಕನಸನ್ನು ಹೊತ್ತು, ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾದ ಅಶೋಕ್ ಕುಮಾರ್ ರೈ ಅವರು, ತಮ್ಮ ಶಾಸಕತ್ವದ ಅಲ್ಪಾವಧಿಯಲ್ಲೇ ಕ್ಷೇತ್ರದಲ್ಲಿ ಹಲವಾರು ಜನಪರ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ಜನಮನ ಗೆದ್ದಿದ್ದಾರೆ. ಜಾತಿ, ಮತ, ಭೇದವಿಲ್ಲದೆ ಪುತ್ತೂರಿನ ಪ್ರತಿಯೊಂದು ಸಮುದಾಯಕ್ಕೂ ತಮ್ಮದೇ ಆದ ಒಂದು ಸೂರು, ಒಂದು ಸಮುದಾಯ ಭವನ ಇರಬೇಕು ಎಂಬುದು ಜನರ ಬಹುದಿನಗಳ ಆಗ್ರಹವಾಗಿತ್ತು. ಜನರ ಈ ಬೇಡಿಕೆಗೂ ಮುನ್ನವೇ ಎಲ್ಲಾ ಸಮುದಾಯಗಳ ಏಳಿಗೆಗಾಗಿ ಸಮುದಾಯ ಭವನಗಳನ್ನು ನಿರ್ಮಿಸಿಕೊಡಬೇಕೆಂಬ ಉದಾತ್ತ ಸಂಕಲ್ಪವನ್ನು ಈಡೇರಿಸುತ್ತಾ ಬಂದಿದ್ದಾರೆ. ಸರ್ವಧರ್ಮ ಸಮನ್ವಯದ ಹರಿಕಾರರಾಗಿ, ಅಲ್ಪಸಂಖ್ಯಾತ ಸಮುದಾಯದ ಬಹುದಿನದ ಕನಸಿಗೆ ಜೀವ ತುಂಬಿದ ತಮ್ಮ ಈ ಉದಾರ ಗುಣಕ್ಕೆ ಮತ್ತು ಜನಪರ ಕಾಳಜಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದಿದ್ದಾರೆ.
ಅಲ್ಪಸಂಖ್ಯಾತ ಭವನಕ್ಕೆ ಮಂಜೂರಾದ ಜಾಗದ ಅಧಿಕೃತ ದಾಖಲೆ ಹಸ್ತಾಂತರ: ಶಾಸಕ ಅಶೋಕ್ ಕುಮಾರ್ ರೈಗೆ ಅಭಿನಂದನೆ ಸಲ್ಲಿಸಿದ ಇಬ್ರಾಹಿಂ ಗೋಳಿಕಟ್ಟೆ
What's your reaction?
- 1394c
- 1294cc
- 12ai technology
- 12ajjavara
- 12alwas
- 12apology
- 12artificial intelegence
- 11avg
- 11belthangady-provocative-speech-case-conviction
- 11bihar minister
- 11bjp
- 11bjp leader
- 10bjp national president
- 10bt ranjan
- 10co-operative
- 10coastal
- 10Court convicts accused in provocative speech case
- 10crime
- 9crime news
- 9cyclothon
- 9darmasthala
- 9death news
- 9dust bin
- 8education
- 8fraud
- 8gl
- 8gods own country
- 8gold
- 8google for education
- 7independence
- 7jewel
- 7jewellers
- 7jnana vikasa
- 7karnataka state
- 6Kedila
- 6kerala village
- 6kukke - kollur temple
- 6lokayuktha
- 6lokayuktha raid
- 6Mangalore
- 5manipal
- 5minister krishna bairegowda
- 5mla ashok rai
- 5mohan alwa
- 5mudubidre
- 5nidana news
- 4nirvathu mukku
- 4nitin nabin
- 4police
- 4ptr tahasildar
- 4puttur
- 3puttur news
- 3puttur tahasildar
- 3republic
- 3revenue
- 3revenue department
- 3revenue minister
- 2school
- 2senior citizen
- 2silver
- 2society
- 2sowmya
- 1students
- 1tahasildar
- 1tahasildar absconded
- 1teachers
- 1tour
- 1trending
- 0udupi
- 0wastage
Related Posts
ಡಿಸೆಂಬರ್ 20ರ ಒಕ್ಕಲಿಗ ಗೌಡ ಸಮುದಾಯದ ವಾರ್ಷಿಕ ಸಮಾವೇಶದ ಯಶಸ್ಸಿಗೆ ವೀರಮಂಗಲ ಘಟಕದ ಸಿದ್ಧತೆ
ಪುತ್ತೂರು: ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಹಾಗೂ ಸಹ ಸಂಸ್ಥೆಗಳ ವತಿಯಿಂದ ಡಿಸೆಂಬರ್ 20ರಂದು…
ಇಂದು ಕರೆಂಟಿಲ್ಲ: ಎಲ್ಲೆಲ್ಲಿ, ಎಷ್ಟು ಸಮಯ ವಿದ್ಯುತ್ ವ್ಯತ್ಯಯ?
ಪುತ್ತೂರು: ರಸ್ತೆ ಅಗಲೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ನ.19ರಂದು ಗುರುವಾರ ಬೆಳಗ್ಗೆ 10ರಿಂದ…
ಡಿಸೆಂಬರ್ 20ರ ವಾರ್ಷಿಕ ಸಮಾವೇಶದ ಯಶಸ್ಸಿಗೆ ಒಕ್ಕಲಿಗ ಗೌಡ ಸಮಾಜದ ಸಿದ್ಧತೆ | ಈಶ್ವರಮಂಗಲದಲ್ಲಿ ಸಮುದಾಯದ ಪ್ರಮುಖರಿಂದ ಪೂರ್ವಭಾವಿ ಸಭೆ
ಈಶ್ವರಮಂಗಲ: ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಹಾಗೂ ಸಹ ಸಂಘಟನೆ ಮತ್ತು ಸಹ ಸಂಸ್ಥೆಗಳ…
ಒಕ್ಕಲಿಗ ಗೌಡರ ವಾರ್ಷಿಕ ಸಮಾವೇಶದ ಪೂರ್ವಭಾವಿ ಸಿದ್ಧತೆ: ಆರ್ಯಾಪು ಗ್ರಾಮ ಸಮಿತಿ ಸಭೆ
ಪುತ್ತೂರು: ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಹಾಗೂ ಸಹ ಸಂಘಟನೆ ಮತ್ತು ಸಹ ಸಂಸ್ಥೆಗಳ ವತಿಯಿಂದ…
ಡಿಸೆಂಬರ್ 20ರ ಒಕ್ಕಲಿಗ ಗೌಡ ಸಮುದಾಯದ ವಾರ್ಷಿಕ ಸಮಾವೇಶಕ್ಕೆ ಪುತ್ತೂರು ವಲಯ ಸಜ್ಜು – ಮನೆಮನೆಗೆ ಆಹ್ವಾನ ನೀಡಲು ನಿರ್ಧಾರ
ಪುತ್ತೂರು: ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಹಾಗೂ ಸಹ ಸಂಘಟನೆಗಳ ಸಹಯೋಗದಲ್ಲಿ ಡಿಸೆಂಬರ್…
ಪ್ರಗತಿಬಂಧು ಸ್ವಸಹಾಯ ಸಂಘಗಳ ಕಸಬಾ, ಬೊಳುವಾರು, ಜಿಡೆಕಲ್ಲು, ಪಡೀಲು, ಸಾಲ್ಮರ ಒಕ್ಕೂಟಗಳ ಪದಗ್ರಹಣ
ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ಪುತ್ತೂರು…
ಡಿ. 20ರ ಒಕ್ಕಲಿಗ ಸಮುದಾಯದ ವಾರ್ಷಿಕ ಸಮಾವೇಶದ ಪ್ರಚಾರಕ್ಕೆ ಕುಂಬ್ರ ವಲಯದ ಸಿದ್ಧತೆ – ತಾಲೂಕು ಕ್ರೀಡಾಕೂಟದ ಕುರಿತು ಚರ್ಚೆ
ಪುತ್ತೂರು: ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಹಾಗೂ ಸಹ ಸಂಘಟನೆಗಳ ಸಹಯೋಗದಲ್ಲಿ ಡಿಸೆಂಬರ್…
ಕಡಲತೀರದಲ್ಲಿ ಆಡುತ್ತಿದ್ದ ಮೂರು ಮಕ್ಕಳಿಗೆ ಬಡಿದ ಸಿಡಿಲು!!
ಕಡಲತೀರದಲ್ಲಿ ಸಿಡಿಲು ಬಡಿದು ಮೂವರು ಮಕ್ಕಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಅಮೆರಿಕದ…
ಮಕ್ಕಳ ಮೇಲಾಗುವ ಯಾವುದೇ ದೌರ್ಜನ್ಯವೂ ಶಿಕ್ಷಾರ್ಹ: ನ್ಯಾ. ಅಭಯ್ ಧನಪಾಲ್ ಚೌಗುಲೆ
ಮಕ್ಕಳ ಮೇಲೆ ಆಗುವ ಯಾವುದೇ ರೀತಿಯ ಲೈಂಗಿಕ ದೌರ್ಜನ್ಯವು ಶಿಕ್ಷಾರ್ಹವಾಗಿದೆ. ಅಂತಹ ತಪ್ಪುಗಳು…
ನಾಳೆ ವಿದ್ಯುತ್ ಕಡಿತ: ಪುತ್ತೂರು, ಕಡಬ, ಉಪ್ಪಿನಂಗಡಿ ವಿದ್ಯುತ್ ಬಳಕೆದಾರರಿಗೆ ಮೆಸ್ಕಾಂ ಪ್ರಕಟಣೆ!!
ಪುತ್ತೂರು: ವಿದ್ಯುತ್ ಮಾರ್ಗದ ನಿರ್ವಹಣೆ ಹಾಗೂ ವಿದ್ಯುತ್ ಉಪಕೇಂದ್ರದ ದುರಸ್ತಿ ಕಾಮಗಾರಿ…




















