ಪುತ್ತೂರು: ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಹಾಗೂ ಸಹ ಸಂಸ್ಥೆಗಳ ವತಿಯಿಂದ ಡಿಸೆಂಬರ್ 20ರಂದು ನಡೆಯಲಿರುವ ವಾರ್ಷಿಕ ಸಮಾವೇಶ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಸಾಂಸ್ಕೃತಿಕ ವೈಭವ ಕಾರ್ಯಕ್ರಮದ ಪೂರ್ವಭಾವಿಯಾಗಿ ಶಾಂತಿಗೋಡು ಗ್ರಾಮದ ವೀರಮಂಗಲ ಘಟಕದ ಸಭೆಯು ನವೆಂಬರ್ 15ರಂದು ಸಂಜೆ 5.30ಕ್ಕೆ ವೀರಮಂಗಲ ಘಟಕ ಸಮಿತಿ ಅಧ್ಯಕ್ಷರಾದ ಮೇದಪ್ಪ ಗೌಡ ಹೊಸಮನೆ ಅವರ ನಿವಾಸದಲ್ಲಿ ನಡೆಯಿತು.

ಸಭೆಯಲ್ಲಿ ಮುಂಬರುವ ವಾರ್ಷಿಕ ಸಮಾವೇಶವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಸಿದ್ಧತೆಗಳು, ಸಮುದಾಯದ ಪ್ರತಿಯೊಂದು ಕುಟುಂಬದ ಸಕ್ರಿಯ ಪಾಲ್ಗೊಳ್ಳುವಿಕೆ ಹಾಗೂ ಕಾರ್ಯಕ್ರಮದ ಮಾಹಿತಿಯನ್ನು ಮನೆಮನೆಗೆ ತಲುಪಿಸುವ ಕುರಿತು ಸಮಗ್ರ ಚರ್ಚೆ ನಡೆಸಲಾಯಿತು.
ಸಮುದಾಯದ ಸಂಘಟನಾತ್ಮಕ ಶಕ್ತಿ, ಒಗ್ಗಟ್ಟು ಮತ್ತು ಪರಸ್ಪರ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಮೂಲಕ ವಾರ್ಷಿಕ ಸಮಾವೇಶವನ್ನು ಅರ್ಥಪೂರ್ಣವಾಗಿ ಹಾಗೂ ಅದ್ದೂರಿಯಾಗಿ ಆಯೋಜಿಸುವ ಸಂಕಲ್ಪವನ್ನು ಸಭೆಯಲ್ಲಿ ವ್ಯಕ್ತಪಡಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಸಮಿತಿ ಗೌರವಾಧ್ಯಕ್ಷರಾದ ವಿಶ್ವನಾಥ ಗೌಡ ಕೆಯ್ಯೂರು, ಅಧ್ಯಕ್ಷರಾದ ಸುಂದರ ಗೌಡ ನಡುಬೈಲು, ಪ್ರಧಾನ ಕಾರ್ಯದರ್ಶಿ ಶ್ರೀಧರ ಗೌಡ ಪಾಣತ್ತಿಲ, ಪ್ರಚಾರ ಸಮಿತಿ ಸಂಚಾಲಕರಾದ ಯತೀಶ್ ದೇವ, ಸ್ವಸಹಾಯ ಟ್ರಸ್ಟ್ ಕೋಶಾಧಿಕಾರಿ ಲೋಕನಾಥ ಕಾಡಮನೆ, ಮುಂಡೂರು ವಲಯ ಉಸ್ತುವಾರಿ ಭಾರತಿ ಕಾಡಮನೆ, ವೀರಮಂಗಲ ಒಕ್ಕೂಟ ಅಧ್ಯಕ್ಷರಾದ ಬೆಳಿಯಪ್ಪ ಗೌಡ, ಪವಿತ್ರ ಕೆ.ಪಿ. ಹೊಸಮನೆ, ಹರ್ಷ ಗುತ್ತು, ಗೀತಾ ಪಿ., ಮೋಹಿನಿ, ಸವಿತಾ, ಜಿನೀತ್, ಭವಿಷ್ ಪಿ., ವರ್ಷ ವಿ.ಎ. ಸೇರಿದಂತೆ ಸಮುದಾಯದ ಹಲವಾರು ಸದಸ್ಯರು ಉಪಸ್ಥಿತರಿದ್ದರು.
















