ಬೆಳ್ಳಾರೆ: ಮೈಸೂರಿನ ಪ್ರತಿಷ್ಠಿತ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಹಾಗೂ ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ 2026ರ ಮೇನಲ್ಲಿ ನಡೆಸಿದ ಭರತನಾಟ್ಯ ರಾಜ್ಯಮಟ್ಟದ ಜೂನಿಯರ್ ಪರೀಕ್ಷೆಯಲ್ಲಿ ಬೆಳ್ಳಾರೆಯ ಧಾತ್ರಿ ಗೌಡ ಬಿ.ಕೆ. ಅವರು ಡಿಸ್ಟಿಂಕ್ಷನ್ ಪಡೆದುಕೊಂಡಿದ್ದಾರೆ.
ಧಾತ್ರಿ ಅವರು ವೈಷ್ಣವಿ ನಾಟ್ಯಾಲಯದ ಬೆಳ್ಳಾರೆಯ ಶಾಖೆಯಲ್ಲಿ ವಿದುಷಿ ಯೋಗೀಶ್ವರಿ ಜಯಪ್ರಕಾಶ್ ಅವರ ಮಾರ್ಗದರ್ಶನದಲ್ಲಿ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದಾರೆ. ಪ್ರಸ್ತುತ ಪುತ್ತೂರಿನ ಸಾಂದೀಪನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ. ಅವರು ಬೆಳ್ಳಾರೆಯ ಕಿರಣ್ ಅಟೋ ವರ್ಕ್ಸ್ ಮಾಲಕ ಕಿರಣ್ ಕುಮಾರ್ ಹಾಗೂ ಶೈನಿ ಕಿರಣ್ ದಂಪತಿ ಪುತ್ರಿ.
ಧಾತ್ರಿ ಅವರ ಸಾಧನೆಗೆ ಸಾಂದೀಪನಿ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದ, ನೃತ್ಯ ಗುರುಗಳು ಅಭಿನಂಧಿಸಿದ್ದಾರೆ.






















