tamanvi
ಸ್ಥಳೀಯ

ದೇವಸ್ಥಾನ ಜಾಗ ಒತ್ತುವರಿದಾರರಿಂದಲೇ ದೇವಸ್ಥಾನ ಪರ ಪ್ರತಿಭಟನೆ: ‘ಎಂಥಾ ಕಾಲ ಬಂತು’ – ಅಶೋಕ್ ರೈ

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾಗವನ್ನು ಒತ್ತುವರಿ ಮಾಡಿಕೊಂಡವರು ಹಾಗೂ ದೇವಸ್ಥಾನಕ್ಕೆ ಯಾವುದೇ ದೇಣಿಗೆ ನೀಡದವರು ಇದೀಗ ದೇವಸ್ಥಾನದಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಟೀಕಿಸಿದ್ದಾರೆ.

ಮಂಗಳವಾರ ಪುತ್ತೂರಿನಲ್ಲಿ ಬಿಜೆಪಿ ವತಿಯಿಂದ ದೇವಸ್ಥಾನ ವಿಚಾರವಾಗಿ ನಡೆದ ಪ್ರತಿಭಟನೆಗೆ ಪ್ರತಿಕ್ರಿಯಿಸಿದ ಅವರು, “ದೇವಸ್ಥಾನದ ಜಾಗವನ್ನು ಒತ್ತುವರಿ ಮಾಡಿಕೊಂಡವರು, ದೇವಸ್ಥಾನಕ್ಕಾಗಿ ಒಂದು ರೂಪಾಯಿ ಕೊಡದವರು ಸೇರಿಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ. ಎಂಥಾ ಕಾಲ ಬಂತು” ಎಂದು ಪ್ರಶ್ನಿಸಿದರು.

“ಸುಮಾರು ₹60 ಕೋಟಿ ವೆಚ್ಚದಲ್ಲಿ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುತ್ತಿದೆ. ನನ್ನ ಶಾಸಕ ನಿಧಿಯಿಂದ ₹10 ಕೋಟಿ ನೀಡಿದ್ದೇನೆ. ಮುಖ್ಯಮಂತ್ರಿಗಳು ಮಂಗಳೂರಿನಲ್ಲಿ ನಡೆಸಿದ ಸಚಿವ ಸಂಪುಟ ಸಭೆಯಲ್ಲಿ ಪುತ್ತೂರು ದೇವಳಕ್ಕೆ ಮತ್ತಷ್ಟು ₹5 ಕೋಟಿ ಮಂಜೂರು ಮಾಡಿಸಿದ್ದೇನೆ. ವೈಯಕ್ತಿಕವಾಗಿ ನನ್ನ ದುಡಿಮೆಯ ಹಣದಿಂದ ₹1 ಕೋಟಿ ದೇಣಿಗೆ ನೀಡುತ್ತಿದ್ದೇನೆ. 50 ಗ್ರಾಂ ಚಿನ್ನ ನೀಡುವುದಾಗಿ ಹೇಳಿ ಬಳಿಕ 100 ಗ್ರಾಂ ಚಿನ್ನವನ್ನು ದೇವಳಕ್ಕೆ ನೀಡಿದ್ದೇನೆ. ಅಕ್ರಮ ಮಾಡುವ ಉದ್ದೇಶವಿದ್ದರೆ ನನ್ನ ಕಿಸೆಯಿಂದ ಇಷ್ಟೊಂದು ಹಣ ನೀಡಬೇಕಿತ್ತೇ?” ಎಂದು ಅಶೋಕ್ ರೈ ಹೇಳಿದರು.

18 ಎಕರೆ ದೇವಸ್ಥಾನ ಜಾಗ ಬಿಡಿಸಲಾಗಿದೆ

ಪುತ್ತೂರು ದೇವಸ್ಥಾನಕ್ಕೆ ಸೇರಿದ 18 ಎಕರೆ ಜಾಗವನ್ನು ಬಿಡಿಸಿಕೊಡಲಾಗಿದೆ. ಈ ಹಿಂದೆ ಇದ್ದವರಿಗೆ ಇದೆಲ್ಲ ಮಾಡಲು ಸಾಧ್ಯವಾಗಲಿಲ್ಲವೇ? ಇದಕ್ಕೆ ಅಶೋಕ್ ರೈ ಬರಬೇಕಾಯಿತೇ ಎಂದು ಅವರು ಪ್ರಶ್ನಿಸಿದರು.

“ನಾನು ಕೆರಳುವುದಿಲ್ಲ ಎಂದುಕೊಂಡಿದ್ದೆ. ಆದರೆ ನಾನು ಕೆರಳಿದರೆ ಎಲ್ಲವನ್ನೂ ಹೊರಗೆ ತರುತ್ತೇನೆ. ಇನ್ನು ಮುಂದೆ ದೇವಸ್ಥಾನಗಳ ಜಾಗವನ್ನು ಯಾರೆಲ್ಲ, ಎಲ್ಲೆಲ್ಲಿ ಒತ್ತುವರಿ ಮಾಡಿಕೊಂಡಿದ್ದಾರೋ ಅದನ್ನು ಬಿಡಿಸಿಕೊಳ್ಳುತ್ತೇವೆ” ಎಂದು ಶಾಸಕರು ಎಚ್ಚರಿಸಿದರು.

ದೇವಸ್ಥಾನದ ಜಾಗವನ್ನು ಒತ್ತುವರಿ ಮಾಡಿಕೊಂಡು ಹಲವು ವರ್ಷಗಳ ಕಾಲ ಮನೆ ನಿರ್ಮಿಸಿಕೊಂಡು, ಬಾಡಿಗೆಗೆ ನೀಡಿ ಹಣವನ್ನು ಸ್ವಂತಕ್ಕೆ ಬಳಸಿಕೊಂಡವರು ಇದೀಗ ದೇವಸ್ಥಾನ ಉಳಿಸಿ ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಇಂತಹ ಪ್ರತಿಭಟನೆಗಳಲ್ಲಿ ನೈಜ ಮಹಾಲಿಂಗೇಶ್ವರ ಭಕ್ತರು ಭಾಗವಹಿಸಬಾರದು. ಪ್ರತಿಭಟನೆಯಲ್ಲಿ ಭಾಗವಹಿಸುವವರಿಗೆ ಈ ಬಗ್ಗೆ ಬುದ್ಧಿವಾದ ಹೇಳಬೇಕಿದೆ ಎಂದ ಅವರು, “ಪ್ರತಿಭಟನೆ ಮಾಡಿದರೆ ನಾವು ಹೆದರುವ ಪ್ರಶ್ನೆಯೇ ಇಲ್ಲ. ದೇವರ ಜಾಗ ಒತ್ತುವರಿ ಮಾಡಿಕೊಂಡವರನ್ನು ಬಿಡುವ ಪ್ರಶ್ನೆಯೇ ಇಲ್ಲ” ಎಂದು ಸ್ಪಷ್ಟಪಡಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಗೂಂಡಾ ಕಾಯ್ದೆ ಜಾರಿ ಖಂಡಿಸಿ ಕಿಶೋರ್ ಕುಮಾರ್ ಪುತ್ತೂರು ಆಕ್ರೋಶ: ಸೆ.28ರ ಬಿ.ಸಿ. ರೋಡ್ ಚಲೋಗೆ ಬೆಂಬಲ

ಮಂಗಳೂರು: ಬಂಟ್ವಾಳದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮೈಸೂರಿನ ಕೋಕಾ ವಿಶೇಷ ನ್ಯಾಯಾಲಯವು ಭರತ್…

1 of 137