ಪುತ್ತೂರು: ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಹಾಗೂ ಸಹ ಸಂಸ್ಥೆಗಳ ವತಿಯಿಂದ ಡಿಸೆಂಬರ್ 20ರಂದು ನಡೆಯಲಿರುವ ವಾರ್ಷಿಕ ಸಮಾವೇಶ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಗೌಡರ ಗಮ್ಮತ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮದ ಪೂರ್ವಭಾವಿಯಾಗಿ ಬನ್ನೂರು ವಲಯದ ಕಬಕ ಗ್ರಾಮ ಸಮಿತಿ ಸಭೆಯು ಮುರ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿತು.

ಸಭೆಯಲ್ಲಿ ಮುಂಬರುವ ವಾರ್ಷಿಕ ಸಮಾವೇಶದ ಮಹತ್ವ, ಸಾಮೂಹಿಕ ಸತ್ಯನಾರಾಯಣ ಪೂಜೆಯ ವಿಶೇಷತೆ ಹಾಗೂ ಗೌಡರ ಗಮ್ಮತ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಪ್ರತಿಯೊಂದು ಮನೆಯ ಪಾಲ್ಗೊಳ್ಳುವಿಕೆಯ ಅಗತ್ಯತೆಯ ಕುರಿತು ವಿವರಿಸಲಾಯಿತು. ಜೊತೆಗೆ ಸಂಘದ ಮುಂದಿನ ಯೋಜನೆಗಳು, ಸಮಾಜದ ಸಂಘಟನಾತ್ಮಕ ಬೆಳವಣಿಗೆ ಮತ್ತು ಸಮುದಾಯದ ಸರ್ವತೋಮುಖ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬರ ಸಹಭಾಗಿತ್ವದ ಮಹತ್ವದ ಬಗ್ಗೆಯೂ ಚರ್ಚಿಸಲಾಯಿತು.
ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಗ್ರಾಮ ಸಮಿತಿ ಹಾಗೂ ಸ್ವಸಹಾಯ ಸಂಘಗಳ ಒಕ್ಕೂಟದ ಪದಾಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ, ಸಮುದಾಯದ ಪ್ರತಿಯೊಂದು ಮನೆಗೂ ಆಹ್ವಾನ ತಲುಪಿಸುವ ಮೂಲಕ ಕುಟುಂಬ ಸಮೇತರಾಗಿ ಭಾಗವಹಿಸುವಂತೆ ಪ್ರೇರೇಪಿಸುವ ಅಗತ್ಯವನ್ನು ತಿಳಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷರಾದ ಸುಂದರ ಗೌಡ ನಡುಬೈಲು, ನಿಕಟಪೂರ್ವ ಅಧ್ಯಕ್ಷರಾದ ರವಿ ಮುಂಗ್ಲಿಮನೆ, ಉಪಾಧ್ಯಕ್ಷರಾದ ಪುರುಷೋತ್ತಮ್ ಮುಂಗ್ಲಿಮನೆ, ಪ್ರಧಾನ ಕಾರ್ಯದರ್ಶಿ ಶ್ರೀಧರ ಪಾಣತ್ತಿಲ, ಪ್ರಚಾರ ಸಮಿತಿ ಸಂಚಾಲಕ ಯತೀಶ್ ದೇವ, ಸಾಂಸ್ಕೃತಿಕ ಸಮಿತಿ ಸಂಚಾಲಕ ರಾಧಾಕೃಷ್ಣ ನಂದಿಲ, ಸ್ವಸಹಾಯ ಟ್ರಸ್ಟ್ ತಾಲೂಕು ಅಧ್ಯಕ್ಷ ಬಿ. ವಿಶ್ವನಾಥ ಗೌಡ ಬನ್ನೂರು, ಸಿಸಿಪಿ ಸಂಯೋಜಕ ಪ್ರಸನ್ನ ಕುಮಾರ್ ಡಿ.ಆರ್., ಟ್ರಸ್ಟ್ ಕಾರ್ಯದರ್ಶಿ ಕುದ್ವ ಲೋಕನಾಥ್ ಗೌಡ ಕಾಡಮನೆ, ಮಹಿಳಾ ಸಂಘದ ಗೌರವಾಧ್ಯಕ್ಷೆ ವಾರಿಜಾ ಬೆಳಿಯಪ್ಪ ತೆಂಕಿಲ, ಮಹಿಳಾ ಪ್ರಧಾನ ಕಾರ್ಯದರ್ಶಿ ರೇಖಾ ಗೋವರ್ಧನ್ ಕಲ್ಲೇಗ, ಕಬಕ ಗ್ರಾಮ ಸಮಿತಿ ಅಧ್ಯಕ್ಷ ಅನಿಲ್ ಚೇವುರ್ರೇ ಹಾಗೂ ಒಕ್ಕೂಟ ಅಧ್ಯಕ್ಷ ಗಣೇಶ್ ಗೌಡ ಪೋಳ್ಯ, ಮೇಲ್ವಿಚಾರಕಿ ಸುಮಲತಾ, ಪ್ರೇರಕಿ ನಮಿತಾ ಎ., ನವೀನ್ ಚಂದ್ರ ಎಂ., ಪ್ರಕಾಶ್ ದೇವಸ್ಯ, ಜಯಂತಿ ಕೆ., ಪುಷ್ಪಾವತಿ, ರಮ್ಯ ಕೆ., ಆಶಾ, ವಿಮಲಾ, ಪೂರ್ಣಿಮಾ, ಯಶಸ್ವಿನಿ, ಲಲಿತಾ ಪಿ.ಕೆ., ವೇದಾ ಜನಾರ್ದನ ಕಲ್ಲೇಗ, ಗೀತಾ, ರಾಧಾಕೃಷ್ಣ, ಮೋಹಿನಿ ಪಿ., ಚಂದ್ರವತಿ ಸೇರಿದಂತೆ ಗ್ರಾಮ ಸಮಿತಿ ಮತ್ತು ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಹಾಗೂ ಸಮುದಾಯದ ಹಲವಾರು ಮಂದಿ ಉಪಸ್ಥಿತರಿದ್ದರು.





















