tamanvi
ಧಾರ್ಮಿಕ

ತೆಂಕಿಲದಲ್ಲಿ ಧರ್ಮಾಭ್ಯುದಯ – ಧರ್ಮ ಶಿಕ್ಷಣ ಸಮಿತಿಯ ಸಾಮಾನ್ಯ ಸಭೆ | ಶೀಘ್ರ ಓರ್ವ ಧರ್ಮ ಶಿಕ್ಷಣ ಪ್ರಸಾರಕರ ನೇಮಕಾತಿ: ಸುಬ್ರಮಣ್ಯ ನಟ್ಟೋಜ

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಕಳೆದ ಒಂದು ವರ್ಷಗಳಿಂದ ಪುತ್ತೂರು ಭಾಗದ ಹಲವು ಕಡೆಗಳಲ್ಲಿ ನಿರಂತರವಾಗಿ ಧರ್ಮ ಶಿಕ್ಷಣ ಜಾರಿಯಲ್ಲಿದೆ. ಅಸಂಖ್ಯ ಮಕ್ಕಳು ಇದರ ಪ್ರಯೋಜನಗಳನ್ನು ಪಡೆದುಕೊಳ್ಳುವಂತಾಗಿದೆ. ಆದರೆ ಇದು ಕೇವಲ ಪುತ್ತೂರಿಗೆ ಸೀಮಿತವಾಗಬಾರದು. ಇನ್ನಷ್ಟು ವ್ಯಾಪಕವಾಗಿ ಬೆಳವಣಿಗೆಯನ್ನು ಕಾಣುವಂತಾಗಬೇಕು. ಧರ್ಮ ಶಿಕ್ಷಣವನ್ನು ವೇಗವಾಗಿ ವಿಸ್ತೃತಗೊಳಿಸುವುದಕ್ಕಾಗಿ ಒಬ್ಬರು ಧರ್ಮ ಶಿಕ್ಷಣ ಪ್ರಸಾರಕರನ್ನು ನೇಮಕ ಮಾಡಿಕೊಳ್ಳಬೇಕಾಗಿದೆ. ಸೂಕ್ತ ಸಂಭಾವನೆಗಳೊAದಿಗೆ ಒಬ್ಬರು ವ್ಯಕ್ತಿಯನ್ನು ನೇಮಕ ಮಾಡಿದಾಗ ಧರ್ಮ ಶಿಕ್ಷಣ ಪ್ರಸಾರ ಮತ್ತಷ್ಟು ವೇಗವನ್ನು ಕಾಣಬಹುದು ಎಂದು ಧರ್ಮ ಶಿಕ್ಷಣ ಸಮಿತಿಯ ಸಂಚಾಲಕ ಸುಬ್ರಮಣ್ಯ ನಟ್ಟೋಜ

maithri

ತೆಂಕಿಲದ ಸ್ವಾಮಿ ಕಲಾ ಮಂದಿರದಲ್ಲಿ ಭಾನುವಾರ ನಡೆದ ತಾಲೂಕು ಧರ್ಮ ಶಿಕ್ಷಣ ಸಮಿತಿ – ಧರ್ಮಾಭ್ಯುದಯದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

ಶೃಂಗೇರಿ ಜಗದ್ಗುರುಗಳ ಪ್ರೇರಣೆ ಮಾರ್ಗದರ್ಶನ ಹಾಗೂ ಆಶೀರ್ವಾದಗಳಿಂದಾಗಿ ಧರ್ಮ ಶಿಕ್ಷಣ ವ್ಯವಸ್ಥೆ ಅತ್ಯಂತ ಸದೃಢವಾಗಿ ಮುನ್ನಡೆಯುತ್ತಿದೆ. ಹಿಂದೂ ಸಮಾಜದ ಮಕ್ಕಳಿಗೆ ನಮ್ಮ ಆಚಾರ ವಿಚಾರ ಪರಂಪರರೆಗಳ ವಿಚಾರಗಳು ಲಭ್ಯವಾಗುತ್ತಿವೆ ಎಂದರು.

ಧರ್ಮಾಭ್ಯುದಯದ ಅಧ್ಯಕ್ಷ ದಂಬೆಕಾನ ಸದಾಶಿವ ರೈ ಮಾತನಾಡಿ, ಪುತ್ತೂರನ್ನೂ ಮೀರಿ ನಾನಾ ಭಾಗಗಳ ಭಜನಾ ಮಂದಿರ, ದೇವಸ್ಥಾನವೇ ಮೊದಲಾದ ಹಿಂದೂ ಪರಂಪರೆಯ ತಾಣಗಳಿಗೆ ಭೇಟಿ ಕೊಟ್ಟು ಅಲ್ಲಿ ಧರ್ಮ ಶಿಕ್ಷಣವನ್ನು ಆರಂಭಿಸಬೇಕಾಗಿದೆ. ಶೃಂಗೇರಿ ಜಗದ್ಗುರುಗಳು ನಮಗೆ ತೋರಿದ ಹಾದಿಯಲ್ಲಿ ಪ್ರತಿಯೊಬ್ಬರೂ ಮುಂದುವರಿಯಬೇಕು ಎಂದರು.

ಸಭೆಯಲ್ಲಿ ಧರ್ಮಾಭ್ಯುದಯದ ಉಪಾಧ್ಯಕ್ಷ ಜಯಸೂರ್ಯ ರೈ ಮಾದೋಡಿ, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಬೋರ್ಕರ್, ಕಾರ್ಯದರ್ಶಿ ಶೈಲೇಶ್ ಜಿ. ರಾವ್, ಖಜಾಂಜಿ ಮಾಧವ ಸ್ವಾಮಿ,  ಸದಸ್ಯರಾದ ಶಿವಕುಮಾರ್ ಪಡುಮಲೆ, ಕವಿತಾ ಎಚ್.ರೈ, ರಚನಾ ಕೆ, ಸವಿತಾ ಎಸ್, ಪಾರ್ವತಿ ಸುಮ, ಗಣೇಶ ಪ್ರಸಾದ್ ಎ, ಮಾಧವ ನಾಯಕ್ ಕೆ, ರಾಕೇಶ ಕುಮಾರ್ ಕಮ್ಮಜೆ ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts