tamanvi
ಧಾರ್ಮಿಕ

ಪುತ್ತೂರು ಜಾತ್ರೆ: ಸಮಿತಿಯಿಂದ ದೇವಾಲಯಕ್ಕೆ ಹಣ ವಂಚನೆ!! | ವ್ಯವಸ್ಥೆ ಸರಿಪಡಿಸಲು ಶಾಸಕರಿಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ಸಮಿತಿಯಿಂದ ಮನವಿ

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕೆಲ ಲೋಪ ದೋಷಗಳ ಬಗ್ಗೆ ವ್ಯವಸ್ಥಾಪನಾ ಸಮಿತಿ ಗಮನಕ್ಕೆ ತಂದಿದ್ದು, ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ಸಮಿತಿ ಮನವಿ ನೀಡಿ, ವ್ಯವಸ್ಥೆ ಸರಿಪಡಿಸುವಂತೆ ಒತ್ತಾಯಿಸಿದೆ.

maithri

ಸಮಿತಿ ನೀಡಿರುವ ಮನವಿಯಲ್ಲಿರುವ ಅಂಶಗಳು

  1. ದೇವಾಲಯಕ್ಕೆ ಬರುವ ಭಕ್ತಾಧಿಗಳು ಸಾಂಪ್ರದಾಯಿಕ ಡ್ರೆಸ್ ಹಾಕಿಕೊಳ್ಳುವ ಮೂಲಕ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡುವಂತೆ ಕಡ್ಡಾಯವಾಗಿ ಮಾಧ್ಯಮದ ಮುಖಾಂತರ ಭಕ್ತಾಧಿಗಳಿಗೆ ತಿಳಿಯಪಡಿಸುವುದು.
  2. ರುದ್ರಾಭಿಷೇಕ ಮಾಡುವ ಭಕ್ತರ ಪರವಾಗಿ ದಿನಂಪ್ರತಿ ರುದ್ರಪಠಣ ಮಾಡುವ ಬಗ್ಗೆ ತಿಳಿದು ಬಂದಿರುವುದಿಲ್ಲ. ಈ ಹಿಂದೆ ರುದ್ರಪಠಣ ಮಾಡುವುದು ಇತ್ತು.
  3. ರಥಬೀದಿಯ ಅರ್ಥವೇ ರಥದ ಚಲನೆಗೆ ಇರುವ ರಸ್ತೆಯಾಗಿರುವುದರಿಂದ ಅದರಲ್ಲಿ ಸಾರ್ವಜನಿಕ ವಾಹನಕ್ಕೆ ಅವಕಾಶ ನೀಡಬಾರದಿತ್ತು. ಪ್ರಸ್ತುತ ಜಿಲ್ಲಾಧಿಕಾರಿಯವರ ಆದೇಶದಲ್ಲಿ “ದೇವಾಲಯದ ರಸ್ತೆ ಮೂಲಕ” ಎಂಬ ಬಗ್ಗೆ ಉಲ್ಲೇಖ ಇದ್ದು, ಈಗ ಸಾರ್ವಜನಿಕ ರಸ್ತೆಯಾಗಿ ದೇವಾಲಯದ ಆಡಳಿತ ಸಮಿತಿ ಮತ್ತು ಅಧಿಕಾರಿಗಳು ಅನುವು ಮಾಡಿಕೊಟ್ಟಂತಾಗಿದೆ. ಇದರಿಂದ ದೇವಾಲಯದ ಪಾವಿತ್ರತೆಗೆ ಧಕ್ಕೆಯಾಗಿದ್ದು, ದೇವಾಲಯದ ಹಾವುಗಳು ಆಫಘಾತಕ್ಕೆ ಸಿಲುಕಿರುವ ಪ್ರಸಂಗ ಕೂಡಾ ಈ ಮೊದಲು ನಡೆದಿದೆ. ಅಲ್ಲದೇ ನಮ್ಮ ಗಮನಕ್ಕೆ ಬಂದಂತೆ 4 ರಿಂದ 5 ಬಾರಿ ಹೆಣ ಇರುವ ಅಂಬ್ಯುಲೆನ್ಸ್ ಸಹ ರಥಬೀದಿಯಲ್ಲಿ ಹೋಗಿದೆ.
  4. ಜಾತ್ರಾ ಸಮಯದಲ್ಲಿ ದೇವಾಲಯದ ಸಮಿತಿಯವರು ದೇವಸ್ಥಾನದ ಆಡಳಿತಾಧಿಕಾರಿಯ ಗಮನಕ್ಕೆ ತಾರದೇ ಮೊಹರು ಇಲ್ಲದ ರಶೀದಿ ಮಾಡಿ ಏಲಂ ಮಾಡದ ಅಂಗಡಿಗಳಿಂದ ಹಣ ಪಡೆದು ದೇವಾಲಯಕ್ಕೆ ವಂಚನೆ ಮಾಡಿದ್ದು, ನಮ್ಮ ಗಮನಕ್ಕೆ ತಂದು ಅದನ್ನು ಆಡಳಿತಾಧಿಕಾರಿ ಶ್ರೀನಿವಾಸರ ಗಮನಕ್ಕೆ ತಂದರೂ ಸೂಕ್ತ ಕಾನೂನು ಕ್ರಮ ಜರುಗಿಸಲಿಲ್ಲ. ಮತ್ತು ಅದರ ಲೆಕ್ಕಾಚಾರ ಸಹಿತ ಹಣವನ್ನು ದೇವಾಲಯಕ್ಕೆ ಒಪ್ಪಿಸಲು ಸೂಚನೆ ನೀಡಬೇಕು.
  5. ಈಗಿನ ಆಡಳಿತ ಸಮಿತಿಯ ಅಧಿಕಾರದ ತರುವಾಯ ಮಾಡಿದ ದೇವಾಲಯದ ಕಾಮಗಾರಿಯ ಬಿಲ್‌ನಲ್ಲಿ ಸಾಕಷ್ಟು ಲೋಪವಾಗಿದ್ದು, ಹೆಚ್ಚುವರಿ ಮೊಬಲಗು ದೇವಸ್ಥಾನಕ್ಕೆ ಸಂದಾಯ ಆಗಿಲ್ಲ. ಭಕ್ತರ ಹಣದಲ್ಲಿ ಜೆಸಿಬಿ ಬಿಲ್ ಮತ್ತು ಕೆಲಸದಾಳುಗಳ ಸಂಬಳ ಹಾಗೂ ಪೋರ್ಜರಿ ಸಹಿಯಳ್ಳ ಕಡತ ಇದ್ದು, ಈ ಬಗ್ಗೆ ಕ್ರಮ ಆಗಿಲ್ಲ,
  6. ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ದೇವಾಲಯದ ಅಭಿವೃದ್ಧಿ ಕಾರ್ಯ ಆಗುತ್ತಿದ್ದು, ಒಳ್ಳೆಯ ಬೆಳವಣಿಗೆ. ನಾಗನಕಟ್ಟೆ, ಅಯ್ಯಪ್ಪ ಗುಡಿ ಮತ್ತು ನವಗ್ರಹ ಗುಡಿಗಳ ತೆರವು ಕಾರ್ಯದ ಬಳಿಕ ಅಯ್ಯಪ್ಪ ದೇವರನ್ನು ಬಾಲಾಲಯದಲ್ಲಿ, ನವಗ್ರಹಗುಡಿ ದೇವಾಲಯದ ಒಳಗಡೆ ಮತ್ತು ನಾಗನ ವಿಚಾರಲ್ಲಿ ಗೊಂದಲ ಆಗಿದೆ. ಭಕ್ತರ ಕೋರಿಕೆಯಂತೆ ಈ ಹಿಂದೆ ದೇವಾಲಯದ ಪಶ್ಚಿಮ ಮತ್ತು ದಕ್ಷಿಣ ದಿಕ್ಕಿನ ಮಧ್ಯೆ ಇರುವ ಜಾಗವೇ ದೇವಾಲಯದ ನಾಗನಿಗೆ ಸರಿಯಾದ ಸ್ಥಳ ಎಂದು ಉಲ್ಲೇಖ ಮಾಡಿದ್ದಲ್ಲದೇ ದಿನಂಪ್ರತಿ ಬರುವ ಭಕ್ತರಿಗೆ ನಾಗನ ದರ್ಶನ ಇಲ್ಲದಾಗಿದೆ ಮತ್ತು ದಿನಂಪ್ರತಿ ನಾಗನಿಗೆ ಪೂಜೆ ಇಲ್ಲದಿರುವುದರಿಂದ ಮುಂದಕ್ಕೆ ತೊಂದರೆಯಾದಲ್ಲಿ ಆಡಳಿತ ಸಮಿತಿ ಜವಾಬ್ದಾರರಾಗುತ್ತಾರೆ. ಇದಲ್ಲದೇ ನಾವು ಕೂಡ ಪ್ರಶ್ನಾ ಚಿಂತನೆ ಸಮಯದಲ್ಲಿ ಮತ್ತು ನಿಮ್ಮಲ್ಲಿ ಕೂಡ ಈ ಬಗ್ಗೆ ಮನವರಿಗೆ ಮಾಡಿದ್ದೇವೆ.
  7. ಈಗಾಗಲೇ ದೇವಾಲಯದ ಉತ್ತರ ದಿಕ್ಕಿನಲ್ಲಿ ಹೊಳೆಯ ಬದಿ ರಸ್ತೆ ನಿರ್ಮಾಣ ಮಾಡಿ ಸ್ಮಶಾನದ ಬಳಿ ಸಂಪರ್ಕಕ್ಕೆ ಅನುಮೊದನೆ ನೀಡಿರುವ ಬಗ್ಗೆ ವರದಿಯಾಗಿದ್ದು, ಇದರಿಂದ ದೇವಾಲಯದ ಸುಮಾರು 3 ಎಕ್ರೆಯಷ್ಟು ಜಮೀನು ನಷ್ಟವಾಗುತ್ತದೆ. ಇದಕ್ಕೆ ಪರ್ಯಾಯವಾಗಿ ಹೊಳೆಯ ಮೇಲೆಯೇ ಖರ್ಚು ಮಾಡಿಸಿ ರಸ್ತೆ ನಿರ್ಮಾಣ ಮಾಡಿದಲ್ಲಿ ದೇವಾಲಯದ ಜಮೀನು ಉಳಿಯುತ್ತದೆ. ಅಲ್ಲಿರುವ ಮನೆಯವರು ಖಾಸಗಿ ಜಮೀನನ್ನು ಖರೀದಿ ಮಾಡಿದಾಗ ಅವರು ರಸ್ತೆ ಸಂಪರ್ಕ ಪಡೆದೇ ಮನೆ ನಿರ್ಮಾಣ ಮಾಡಬೇಕಿತ್ತು ದೇವಾಲಯದ ಜಮೀನು ನಂಬಿ ಮನೆ ಕಟ್ಟಿದ್ದು ತಪ್ಪು, ಅಲ್ಲದೇ ಭೂಪರಿವರ್ತನೆ ಸಮಯ ರಸ್ತೆಯ ಅನಿವಾರ್ಯ ಇಲ್ಲ ಎಂದು ಸಹಾಯಕ ಆಯುಕ್ತರಿಗೆ ಪ್ರಮಾಣಪತ್ರವನ್ನು ಖಾಸಗಿ ಜಮೀನಿನ ಮಾಲಿಕರು ಸಲ್ಲಿಸಿರುತ್ತಾರೆ. ರಸ್ತೆ ನಿರ್ಮಾಣದ ಸಮಯ ಖಾಸಗಿ ಮನೆ ಇದ್ದವರು ರಸ್ತೆ ಸಂಪರ್ಕ ಬಳಸುವವರು ದೇವಾಲಯದ ಜಮೀನು ಹೋದಲ್ಲಿ ಅದಕ್ಕೆ ಕನಿಷ್ಟ 5 ಲಕ್ಷ ಮೊಬಲಗನ್ನಾದರೂ ದೇವಾಲಯದ ಅಭಿವೃದ್ಧಿಗೆ ನೀಡಲಿ ಹೇಗೂ ರಸ್ತೆ ದೇವಾಲಯದ ಜಮೀನಿನಲ್ಲಿ ಆಗುತ್ತದೆ. ಇದಲ್ಲದೇ ಪ್ರಸ್ತುತ ಮಾರುಕಟ್ಟೆ ಮೌಲ್ಯ ಸೆಂಟ್ ಒಂದರ ಕನಿಷ್ಟ 5 ಲಕ್ಷ ಇದ್ದರೆ 3 ಎಕ್ರೆಗೆ 15 ಕೋಟಿಯಷ್ಟು ನಷ್ಟವಾಗುತ್ತದೆ.
  8. ಧಾರ್ಮಿಕ ಧತ್ತಿ ಇಲಾಖೆಯಲ್ಲಿ ಪ್ರತ್ಯೇಕ ಬೋಜನದ ವ್ಯವಸ್ಥೆ ಇಲ್ಲ. ಆದರೂ ದೇವಾಲಯದಲ್ಲಿ ಜಾತಿ ತಾರತಮ್ಯದಿಂದ ಪ್ರತ್ಯೇಕ ಬೋಜನದ ವ್ಯವಸ್ಥೆ ಕಲ್ಪಿಸುತ್ತಿದ್ದು, ಅದನ್ನು ರದ್ದುಪಡಿಸುವರೇ ಕೋರಿಕೆ. ತಂತ್ರಿಗಳು, ಅರ್ಚಕರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿ ಮಿಕ್ಕುಳಿದವರಿಗೆ ಸಹಭೋಜನ ಮಾಡಬೇಕು.
  9. ವೆಂಕಟ್ರಮಣ ದೇವಾಲಯದ ಬಳಿ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಜಮೀನಿನಲ್ಲಿರುವ ಆಕ್ರಮ ಶೆಡ್ ತೆರವುಗೊಳಿಸುವ ಬಗ್ಗೆ ಮತ್ತು ವೆಂಕಟ್ರಮಣ ದೇವಾಲಯದ ಬಳಿ ಹಾದು ಹೋಗುವ ರಸ್ತೆಯನ್ನು ಈ ಹಿಂದಿನಂತೆಯೇ ಜಾತ್ರಾ ಸಮಯದಲ್ಲಿ ಮಾತ್ರ ತೆರೆದು ಉಳಿದ ಸಮಯದಲ್ಲಿ ಬಂದ್ ಮಾಡಬೇಕು ಯಾ ದ್ವಿಚಕ್ರ ವಾಹನಕ್ಕೆ ಮಾತ್ರ ಅವಕಾಶ ಕಲ್ಪಿಸಬೇಕು.
  10. ದೇವಾಲಯದ ಗದ್ದೆಯಲ್ಲಿ ಬೇಡುವವರ ಕಾಟ ವಿಪರೀತ ಇದ್ದು, ಈಗಾಗಲೇ ನಿರಾಶ್ರಿತರ ಕೇಂದ್ರಕ್ಕೆ ನಾವು ಭಕ್ತರೇ ಮನವಿ ನೀಡಿ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದೇವೆ. ಆದರೆ ದೇವಾಲಯದ ಅಧಿಕಾರಿಗಳ ಗಮನಕ್ಕೆ ತಂದರೂ ಅವರು ಕ್ಯಾರೇ ಅನ್ನಲಿಲ್ಲ. ನಗರಸಭೆಯವರ ಜವಾಬ್ದಾರಿ ತೆರಿಗೆಯಲ್ಲಿ ಬಿಕ್ಷುಕರ ಕರ ಸಂಗ್ರಹ ವಸೂಲಿ ಮಾಡಿ ಬಿಕ್ಷುಕರನ್ನು ರಕ್ಷಣೆ ಮಾಡುವುದು ಸಮಂಜಸವಲ್ಲ.

ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದು, ಶಾಸಕರು ಸ್ಪಂದಿಸಿದ್ದಾರೆ ಎಂದು ಸಮಿತಿ ತಿಳಿಸಿದೆ.

ಸಮಿತಿಯ ಹರಿಪ್ರಸಾದ್ ಶೆಟ್ಟಿ ನೆಲ್ಲಿಕಟ್ಟೆ, ಬಾಲಚಂದ್ರ ಸೊರಕೆ, ನರೇಶ್ ಕುಮಾರ್ ರೈ, ಬಾಲಕೃಷ್ಣ ರೈ, ಕೃಷ್ಣನಾಯ್ಕ, ಗಣೇಶ್ ಪ್ರಸಾದ್,  ಗೋಪಾಲ್ ಎಂ.ಆರ್ , ರತ್ನ ಕೆ. ಆರ್,  ಶ್ರೀಧರ ಹಿಂದಾರು,  ಶಶಿಕಲಾ, ಹರೀಶ್ ಕುಮಾರ್ ಮಿನಿಪದವು,  ರಾಜೇಶ್ ಸೌಪರ್ಣಿಕಾ, ಪವನ್ ನಾಯಕ್,  ವಾಸುದೇವ ಆಚಾರ್ಯ, ಜನಾರ್ಧನ ಎ,  ಸತೀಶ್ ಕೆ ಮೊಟ್ಟೆತ್ತಡ್ಕ, ಅನಿಲ್ ಕುಮಾರ್ ಕಣ್ಣಾರ್ನುಜಿ, ಟಿ.ಆರ್ ಮೋಹನ್, ಕೆ. ಗಿರೀಶ್, ಪದ್ಮನಾಭ ಜಿ, ಕೆ.ಎಸ್. ಕೃಷ್ಣಪ್ಪ, ಪುರುಷೋತ್ತಮ ಪೂಜಾರಿ, ಮಂಜು, ಹರ್ಷ ವೈ, ಬಿ ಎಂ. ಕರುಣಾಕರ, ಪ್ರತಿನ್ ನಾಯ್ಕ್, ಪ್ರವೀಣ್ ನಾಯ್ಕ್ ಕೆಮ್ಮಾಯಿ, ಅಶೋಕ್ ಕುಮಾರ್ ಪುತ್ತಿಲ ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts