tamanvi
ಸ್ಥಳೀಯ

ಕಣಿಯೂರು: ಪದ್ಮುಂಜ ಎಂಡೋಸಲ್ಫಾನ್ ಸಂತ್ರಸ್ತರ ಪಾಲನಾ ಕೇಂದ್ರಕ್ಕೆ ಶಿವಶಂಕರ್ ನಾಯಕ್ ಭೇಟಿ

ಈ ಸುದ್ದಿಯನ್ನು ಶೇರ್ ಮಾಡಿ

ಕಣಿಯೂರು, ಆ.28: ಕಣಿಯೂರು ಗ್ರಾಮದ ಪದ್ಮುಂಜದಲ್ಲಿರುವ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಪಾಲನಾ ಕೇಂದ್ರಕ್ಕೆ ಮಾರುತಿಪುರ ರೈತಬಂಧು ಆಹಾರೋದ್ಯಮದ ಮಾಲಕ ಶಿವಶಂಕರ್ ನಾಯಕ್ ಅವರು ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಪಾಲನಾ ಕೇಂದ್ರದಲ್ಲಿರುವ ಮಕ್ಕಳಿಗೆ ಪ್ರತೀ ತಿಂಗಳು ಮಧ್ಯಾಹ್ನದ ಊಟಕ್ಕಾಗಿ ಅಕ್ಕಿ ನೀಡುವ ಭರವಸೆಯನ್ನು ಶಿವಶಂಕರ್ ನಾಯಕ್ ನೀಡಿದರು. ಕೇಂದ್ರದಲ್ಲಿನ ವ್ಯವಸ್ಥೆ ಹಾಗೂ ಸಂತ್ರಸ್ತರ ಕುಂದುಕೊರತೆಗಳನ್ನು ಪರಿಶೀಲಿಸಿ, ಸಂತ್ರಸ್ತರಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಪ್ರಪುಲ್ಲಚಂದ್ರ, ಎಸ್‌ಕೆಡಿಆರ್‌ಡಿಪಿಯ ಕಣಿಯೂರು ವಲಯಾಧ್ಯಕ್ಷ ರಮಾನಂದ ಪೂಜಾರಿ ಮುಗೆರೋಡಿ, ಮೇಲ್ವಿಚಾರಕಿ ಚಂದ್ರಿಕಾ, ಫಿಸಿಯೋಥೆರಪಿಸ್ಟ್ ರಶ್ಮಿತಾ, ಕೌಶಲ್ಯ ತರಬೇತಿ ಅಧ್ಯಾಪಕಿ ವಿನಯ, ಸಿಬ್ಬಂದಿಗಳಾದ ಶಾಲಿನಿ, ಪ್ರಮೀಳಾ, ಉಷಾ, ಶಿಕ್ಷಕಿ ಸುಜಾತ, ರಶ್ಮಿತಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಮನೆಗೆ ಬಿಡುವುದಾಗಿ ಬೈಕ್‌ನಲ್ಲಿ ಕರೆತಂದು ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ: ಪೋಕ್ಸೋ ಪ್ರಕರಣ ದಾಖಲು

ಮಂಗಳೂರು: ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅಪ್ರಾಪ್ತ ಬಾಲಕಿಯನ್ನು ಮನೆಗೆ ಬಿಡುವುದಾಗಿ…

ಸರಿಗಮಪ ಲಿಟಲ್ ಚಾಂಪ್ಸ್ ವಿನ್ನರ್ ಅಶ್ಮಿತ್‌ಗೆ ವಿಟ್ಲದಲ್ಲಿ ಅದ್ಧೂರಿ ಸ್ವಾಗತ: ಹುಟ್ಟೂರಿನ ಗೌರವ, ರೋಡ್ ಶೋ

ವಿಟ್ಲ: ಝೀ ಕನ್ನಡದ ಸರಿಗಮಪ ಲಿಟಲ್ ಚಾಂಪ್ಸ್ ರಿಯಾಲಿಟಿ ಶೋನಲ್ಲಿ ವಿಜೇತರಾಗಿ ಹೊರಹೊಮ್ಮಿದ…

1 of 132