tamanvi
ಧಾರ್ಮಿಕ

ಜುಲೈ 29: ಕುದ್ರೋಳಿಯಲ್ಲಿ ಗುರು ಪೂರ್ಣಿಮೆ ಅಂಗವಾಗಿ ಲಕ್ಷ ತುಳಸಿ ಅರ್ಚನೆ

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಮಂಗಳೂರು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಗುರು ಪೂರ್ಣಿಮೆ ಅಂಗವಾಗಿ ಲಕ್ಷ ತುಳಸಿ ಅರ್ಚನೆ ಜುಲೈ 29ರಂದು ನಡೆಯಲಿದೆ.

maithri

ಲೋಕಕಲ್ಯಾಣಾರ್ಥವಾಗಿ ಗುರು ಪೂರ್ಣಿಮೆಯಂದು ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಬೆಳಿಗ್ಗೆ 9 ಗಂಟೆಗೆ ಗುರು ಪ್ರಾರ್ಥನೆ ನೆರವೇರಲಿದೆ. 9.15ಕ್ಕೆ ವಿಶ್ವಶಾಂತಿ ಹೋಮ ಆರಂಭವಾಗಲಿದ್ದು, 10 ಗಂಟೆಗೆ ಲಕ್ಷ ತುಳಸಿ ಅರ್ಚನೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ ನಡೆಯಲಿದೆ. ದೇವಸ್ಥಾನದಲ್ಲಿ ಭಕ್ತಾದಿಗಳು ಸ್ವತಃ ತುಳಸಿ ಅರ್ಚನೆ ನೆರವೇರಿಸಲು ಅವಕಾಶ ಕಲ್ಪಿಸಲಾಗಿದೆ. ಅರ್ಚನೆಗೆ ತುಳಸಿಯನ್ನು ಭಕ್ತರೇ ತರಬೇಕಾಗಿದ್ದು, ಸಾಂಪ್ರದಾಯಿಕ ಉಡುಗೆಯಲ್ಲಿ ಪಾಲ್ಗೊಳ್ಳುವಂತೆ ಕ್ಷೇತ್ರದ ಪ್ರಕಟಣೆ ತಿಳಿಸಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts