ಬೆಳಾಲು: ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಸೆ. 9ರಂದು ತಾಲೂಕು ಮಟ್ಟದ ನೆಟ್‌ಬಾಲ್ ಪಂದ್ಯಾಟ ನಡೆಯಿತು.
ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಪ್ರಮೀಳಾ ದೀಪ ಪ್ರಜ್ವಲಿಸುವ ಮೂಲಕ ಪಂದ್ಯಾಟಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಿಂಧೂರ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷೆ ನಿಶಾ ಬನಂದೂರು ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯ ಜಯರಾಮ ಮಯ್ಯ ಮಾತನಾಡಿ, ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ವಿದ್ಯಾರ್ಥಿಗಳ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು.
ಸಮಾರೋಪ ಸಮಾರಂಭದಲ್ಲಿ ಬೆಳ್ತಂಗಡಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಪ್ರಭಾಕರ್ ಪ್ರಶಸ್ತಿ ವಿತರಿಸಿ, ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ಫಲಿತಾಂಶ
17ರ ವಯೋಮಾನದ ಬಾಲಕಿಯರ ವಿಭಾಗ:
ಪ್ರಥಮ – ಶ್ರೀ ಧ.ಮಂ. ಪ್ರೌಢಶಾಲೆ, ಬೆಳಾಲು
ದ್ವಿತೀಯ – ಸರ್ಕಾರಿ ಪ್ರೌಢಶಾಲೆ, ಗುರುವಾಯನಕೆರೆ
17ರ ವಯೋಮಾನದ ಬಾಲಕರ ವಿಭಾಗ:
ಪ್ರಥಮ – ಎಸ್.ಡಿ.ಎಂ. ಸೆಕೆಂಡರಿ ಶಾಲೆ, ಉಜಿರೆ
ದ್ವಿತೀಯ – ಸರ್ಕಾರಿ ಪ್ರೌಢಶಾಲೆ, ಗುರುವಾಯನಕೆರೆ
14ರ ವಯೋಮಾನದ ಬಾಲಕಿಯರ ವಿಭಾಗ:
ಪ್ರಥಮ – ಎಸ್.ಡಿ.ಎಂ. ಜನಾರ್ದನ ಶಾಲೆ, ಉಜಿರೆ
ದ್ವಿತೀಯ – ಎಸ್.ಡಿ.ಎಂ. ಸೆಕೆಂಡರಿ ಶಾಲೆ, ಉಜಿರೆ
14ರ ವಯೋಮಾನದ ಬಾಲಕರ ವಿಭಾಗ:
ಪ್ರಥಮ – ಎಸ್.ಡಿ.ಎಂ. ಸೆಕೆಂಡರಿ ಶಾಲೆ, ಉಜಿರೆ
ದ್ವಿತೀಯ – ಎಸ್.ಡಿ.ಎಂ. ಜನಾರ್ದನ ಶಾಲೆ, ಉಜಿರೆ
ಶಿಕ್ಷಕ ಕೃಷ್ಣಾನಂದ ರಾವ್ ಸ್ವಾಗತಿಸಿದರು. ಶಿಕ್ಷಕ ಕಿರಣ್ ವಂದಿಸಿದರು. ಸುಮನ್ ಯು.ಎಸ್. ಕಾರ್ಯಕ್ರಮ ನಿರೂಪಿಸಿದರು. ಹಿರಿಯ ದೈಹಿಕ ಶಿಕ್ಷಣ ಶಿಕ್ಷಕರಾದ ವಿಠ್ಠಲ ಬದನಾಜೆ ಹಾಗೂ ವೆಂಕಟೇಶ್ ಗುರುವಾಯನಕೆರೆ ಉಪಸ್ಥಿತರಿದ್ದರು.

























