tamanvi
ಶಿಕ್ಷಣ

ಕರಾಟೆಯಲ್ಲಿ ಬಪ್ಪಳಿಗೆ ಅಂಬಿಕಾ ಪ.ಪೂ. ವಿದ್ಯಾರ್ಥಿಗಳು ಚಾಂಪಿಯನ್, ಖೋಖೋದಲ್ಲಿ ದ್ವಿತೀಯ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ವಿದ್ಯಾಭಾರತಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲಾ ಘಟಕ, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಹಾಗೂ ಶ್ರೀದೇವಿ ವಿದ್ಯಾಕೇಂದ್ರ, ದೇವಿನಗರ–ಪಣಚ ಇವರ ಸಂಯುಕ್ತ ಆಶ್ರಯದಲ್ಲಿ ಭಾನುವಾರ ನಡೆದ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ.

ambika

19 ವರ್ಷದೊಳಗಿನ 36 ಕೆ.ಜಿ.ಗಿಂತ ಕಡಿಮೆಯ ವಿಭಾಗದಲ್ಲಿ ರಶ್ಮಿ ಆರ್. ಪ್ರಥಮ ಸ್ಥಾನ ಹಾಗೂ 19 ವರ್ಷದೊಳಗಿನ 56 ಕೆ.ಜಿಗಿಂತ ಕಡಿಮೆಯ ವಿಭಾಗದಲ್ಲಿ ಆಶಿತಾ ಕೆ.ಆರ್. ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಉಳಿದಂತೆ, 19 ವರ್ಷ ಹಾಗೂ 54 ಕೆಜಿ ಒಳಗಿನ ಸ್ಪರ್ಧೆಯಲ್ಲಿ ರಕ್ಷಿತ್ ಎಸ್.ಎಲ್. ದ್ವಿತೀಯ ಸ್ಥಾನ ಹಾಗೂ 19 ವರ್ಷ ಮತ್ತು 60 ಕೆಜಿ ಒಳಗಿನ ವಿಭಾಗದಲ್ಲಿ ದೇವಿಕಾ ಕೆ.ಡಿ. ದ್ವಿತೀಯ ಸ್ಥಾನ ಗಳಿಸಿದ್ದಾರೆ.  ವಿದ್ಯಾರ್ಥಿಗಳ ಉತ್ತಮ ಪ್ರದರ್ಶನದ ಫಲವಾಗಿ ಬಪ್ಪಳಿಗೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯವು ಚಾಂಪಿಯನ್‌ಶಿಪ್ ಅನ್ನು ತನ್ನದಾಗಿಸಿಕೊಂಡಿದೆ.

ಖೋ-ಖೋದಲ್ಲಿ ದ್ವಿತೀಯ ಸ್ಥಾನ : ಶುಕ್ರವಾರ ನಡೆದ ಖೋಖೋ ಪಂದ್ಯಾವಳಿಯಲ್ಲಿ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಹುಡುಗಿಯರ ಖೋ ಖೋ ತಂಡವು ದ್ವಿತೀಯ ಸ್ಥಾನ ಪಡೆದು ಸಾಧನೆ ಮೆರೆದಿದೆ. ತಂಡದಲ್ಲಿ ವಿದ್ಯಾಥಿನಿಯರಾದ ಅನುಷಿಕಾ ಎಸ್., ಶ್ರಾವಣಿ ಎಚ್.ಕೆ., ದಿಯಾ ಬಿ.ಜಿ., ಚಶ್ವಿ ಶೆಟ್ಟಿ, ಧನ್ವಂತರಿ ಎಚ್.ಎಂ., ಪೂರ್ವಿಕಾ ಎಂ., ಬಿ.ಆರ್. ಅಮೂಲ್ಯ, ತಾನ್ಯಾ ಕೆ., ಹಿತೈಷಿಣಿ ಎಸ್., ಮನ್ವಿತಾ ಎಂ. ಹಾಗೂ ಇಶಿಕಾ ಭಾಗವಹಿಸಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಬೆಳಾಲು ಧ.ಮಂ. ಪ್ರೌಢಶಾಲೆಯಲ್ಲಿ ತಾಲೂಕು ಮಟ್ಟದ ನೆಟ್‌ಬಾಲ್ ಪಂದ್ಯಾಟ: ಆತಿಥೇಯ ಶಾಲೆಗೆ ಬಾಲಕಿಯರ ವಿಭಾಗದಲ್ಲಿ ಪ್ರಥಮ

ಬೆಳಾಲು: ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಸೆ. 9ರಂದು ತಾಲೂಕು ಮಟ್ಟದ…

ಪುತ್ತೂರಿನಲ್ಲಿ ಸಂಭ್ರಮದ 28ನೇ ವರ್ಷದ ‘ಶ್ರೀಕೃಷ್ಣಲೋಕ’ ;1,250ಕ್ಕೂ ಅಧಿಕ ಪುಟಾಣಿ ಕೃಷ್ಣ-ರಾಧೆಯರಿಂದ ವೈಭವದ ಶೋಭಾಯಾತ್ರೆ

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನದಲ್ಲಿರುವ ಪರ್ಲಡ್ಕ ಶಿವಪೇಟೆಯ ವಿವೇಕಾನಂದ…

ತಾಲ್ಲೂಕು ಮಟ್ಟದ ಶಟಲ್ ಬ್ಯಾಡ್ಮಿಟನ್ ಪಂದ್ಯಾಟ | ವಿದ್ಯಾರ್ಥಿಗಳು ಸೋಲು ಗೆಲುವನ್ನು ಸಮಾನವಾಗಿ ಕಾಣಬೇಕು : ಸುರೇಶ್ ಶೆಟ್ಟಿ

ಪುತ್ತೂರು: ವಿದ್ಯಾರ್ಥಿಗಳು ಗೆಲುವನ್ನು ಮಾತ್ರ ನಿರೀಕ್ಷಿಸುತ್ತಿರಬಾರದ್ಲು. ಸೋತಾಗಲೂ ಅನುಭವ…