tamanvi
ಶಿಕ್ಷಣ

ಅಕ್ಷಯ ಪದವಿ ಕಾಲೇಜಿನ ವಿದ್ಯಾರ್ಥೀ ಒಕ್ಕೂಟ ಪರಿಷತ್ ಪದಗ್ರಹಣ | ನಾಗರಿಕ ಮೌಲ್ಯದೊಂದಿಗೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಿ: ಕೃಷ್ಣಮೋಹನ್ ಪಿ.ಎಸ್.

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರಿನ ಅಕ್ಷಯ ಪದವಿ ಕಾಲೇಜಿನಲ್ಲಿ 2026-27ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಒಕ್ಕೂಟ ಪರಿಷತ್ ಚುನಾವಣೆಯ ವಿಜೇತ ಪ್ರತಿನಿಧಿಗಳ ಪದಗ್ರಹಣ ಸಮಾರಂಭ ಕಾಲೇಜಿನಲ್ಲಿ ನಡೆಯಿತು.

maithri

ಕಾರ‍್ಯಕ್ರಮವನ್ನು ಗೋ ಲಕ್ಷ್ಮಿ ಎಂಟರ್‌ಪ್ರೈಸಸ್‌ ಮಾಲಕರು ಹಾಗೂ ರಾಷ್ಟ್ರೀಯ ಜೆಸಿಐ ತರಬೇತುದಾರರಾದ ಕೃಷ್ಣ ಮೋಹನ್ ಪಿ. ಎಸ್. ಉದ್ಘಾಟಿಸಿ, ವಿದ್ಯಾರ್ಥಿ ನಾಯಕತ್ವದ ಜವಾಬ್ದಾರಿ, ಕರ್ತವ್ಯ ಮತ್ತು ಸಾಮಾಜಿಕ ಹೊಣೆಗಾರಿಕೆಯ ಮಹತ್ವವನ್ನು ತಿಳಿಸಿದರು. ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳನ್ನು ಅರಿತು ಶಿಸ್ತು, ಮಾನವೀಯತೆ, ಕರುಣೆ ಹಾಗೂ ನಾಗರಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಅಧ್ಯಕ್ಷ ಜಯಂತ್ ನಡುಬೈಲು ಮಾತನಾಡಿ, ನಾಯಕತ್ವವು ಕೇವಲ ಹುದ್ದೆಯಲ್ಲ, ಅದು ಜವಾಬ್ದಾರಿ. ದಾರಿ ತಿಳಿದಿರುವವನು ಮಾತ್ರವಲ್ಲ, ಇತರರಿಗೆ ದಾರಿ ತೋರಿಸುವವನೇ ನಿಜವಾದ ನಾಯಕ ಎಂದು ಹೇಳಿದ ಅವರು, ಅಕ್ಷಯ ಕಾಲೇಜಿನ ವಿದ್ಯಾರ್ಥಿ ಪರಿಷತ್ ಹಾಗೂ ವಿವಿಧ ಘಟಕಗಳು ತಮ್ಮ ಜವಾಬ್ದಾರಿಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುತ್ತಿದ್ದು, ಮುಂದೆಯೂ ಇದೇ ರೀತಿಯ ಸಂಘಟಿತ ಕಾರ್ಯಚಟುವಟಿಕೆಗಳು ಮುಂದುವರಿಯಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅರ್ಪಿತ್ ಟಿ. ಎ., ಶೈಕ್ಷಣಿಕ ಸಮನ್ವಯಕಾರ ಅಭಿಲಾಷ್ ಕ್ಷತ್ರಿಯ, ವಿದ್ಯಾರ್ಥಿ ನಾಯಕ ಸೂರ್ಯ (ತೃತೀಯ ಬಿ.ಕಾಂ.) ಹಾಗೂ ಕಾರ್ಯದರ್ಶಿ ದೇವಿಕಾ (ತೃತೀಯ ಫ್ಯಾಷನ್ ಡಿಸೈನ್) ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲ ಸಂಪತ್ ಕೆ. ಪಕ್ಕಳ ನೂತನ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪದಪ್ರದಾನ ನೆರವೇರಿಸಿದರು.

ಗಣಕ ವಿಭಾಗದ ಉಪನ್ಯಾಸಕಿ ಸುಪ್ರಭ ಅತಿಥಿಗಳನ್ನು ಪರಿಚಯಿಸಿದರು. ಕನ್ನಡ ಭಾಷಾ ಉಪನ್ಯಾಸಕಿ ರಶ್ಮಿತಾ ಎಸ್. ವಿಜೇತರ ಹೆಸರುಗಳನ್ನು ಘೋಷಿಸಿದರು. ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥೆ ರಶ್ಮಿ ಸ್ವಾಗತಿಸಿದರು. ಕಲಾ ವಿಭಾಗದ ಮುಖ್ಯಸ್ಥ ಅಶೋಕ್ ವಂದಿಸಿದರು. ಕನ್ನಡ ಭಾಷಾ ಉಪನ್ಯಾಸಕ ಅಮೃತ್ ರಾಜ್ ವೈ.ಆರ್. ಕಾರ್ಯಕ್ರಮ ನಿರೂಪಿಸಿದರು.

2026-2ನೇ ಸಾಲಿನ ವಿದ್ಯಾರ್ಥಿ ಒಕ್ಕೂಟ ಪರಿಷತ್ ವಿಜೇತ ಪ್ರತಿನಿಧಿಗಳ ವಿವರ:

ವಿದ್ಯಾರ್ಥಿ ನಾಯಕ – ಸೂರ್ಯ (ತೃತೀಯ ಬಿ.ಕಾಂ.), ಕಾರ್ಯದರ್ಶಿ ದೇವಿಕಾ (ತೃತೀಯ ಫ್ಯಾಷನ್ ಡಿಸೈನ್), ಉಪನಾಯಕಿ – ರಕ್ಷಾ ಕೆ. ಆರ್. (ತೃತೀಯ ಬಿಸಿಎ), ಕೋಶಾಧಿಕಾರಿ – ಅಕ್ಷಿತ್ ಕೆ. ಆರ್. (ತೃತೀಯ ಬಿ.ಕಾಂ.), ಜೊತೆ ಕಾರ್ಯದರ್ಶಿ – ವೀಕ್ಷಾ (ದ್ವಿತೀಯ ಬಿಸಿಎ), ಕಾರ್ಯದರ್ಶಿ (ಲಲಿತ ಕಲೆ) – ಸೂರ‍್ಯ ಪ್ರಕಾಶ್ (ತೃತೀಯ ಬಿ.ಕಾಂ.), ಜೊತೆ ಕಾರ್ಯದರ್ಶಿ (ಲಲಿತ ಕಲೆ) – ಗ್ರೀಷ್ಮ (ದ್ವಿತೀಯ ಬಿ.ಕಾಂ.), ಕಾರ್ಯದರ್ಶಿ (ಕ್ರೀಡೆ) – ಚೇತನ್ (ತೃತೀಯ ಬಿ.ಎಚ್.ಎಸ್.), ಜೊತೆ ಕಾರ್ಯದರ್ಶಿ (ಕ್ರೀಡೆ) – ದೀಕ್ಷಿತಾ (ದ್ವಿತೀಯ ಫ್ಯಾಷನ್ ಡಿಸೈನ್), ಮೀಡಿಯಾ ಕಾರ್ಯದರ್ಶಿ – ಮೋಕ್ಷಾ ಪಕಳಕುಂಜ (ತೃತೀಯ ಫ್ಯಾಷನ್ ಡಿಸೈನ್), ಜೊತೆ ಮೀಡಿಯಾ ಕಾರ್ಯದರ್ಶಿ – ಚೈತನ್ಯ ಭಟ್ (ದ್ವಿತೀಯ ಇಂಟೀರಿಯರ್ ಡಿಸೈನ್), ವಿರೋಧ ಪಕ್ಷದ ನಾಯಕಿ – ಅಪೇಕ್ಷಾ ಕೆ.ಜೆ. ಶೆಟ್ಟಿ (ತೃತೀಯ ಬಿಸಿಎ)


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಜಿಡೆಕಲ್ಲು ಸರಕಾರಿ ಕಾಲೇಜಿಗೆ ಹೆಚ್ಚುವರಿ ಬಸ್ ಸಂಪರ್ಕ ಕಲ್ಪಿಸುವಂತೆ ಶಾಸಕ ಅಶೋಕ್ ರೈಗೆ ವಿದ್ಯಾರ್ಥಿಗಳಿಂದ ಮನವಿ

ಪುತ್ತೂರು: ಜಿಡೆಕಲ್ಲು ಪ್ರಥಮ ದರ್ಜೆ ಸರಕಾರಿ ಕಾಲೇಜಿಗೆ ತೆರಳಲು ಹೆಚ್ಚುವರಿ ಸರಕಾರಿ ಬಸ್…

ವಿವೇಕಾನಂದ ವಿದ್ಯಾವರ್ಧಕ ಸಂಘಕ್ಕೆ ನೂತನ ಸಾರಥ್ಯ! | ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ ಸಾರಥಿ!

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ, ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ…