ಬೆಳಾಲು: ಶ್ರೀ ಧ.ಮಂ. ಪ್ರೌಢಶಾಲೆಯಲ್ಲಿ ಸೆ.11ರಂದು ಕುಮಾರವ್ಯಾಸ ಕವಿಯ ಕರ್ಣಾಟ ಭಾರತ ಕಥಾಮಂಜರಿಯ ಉದ್ಯೋಗ ಪರ್ವದಿಂದ ಆಯ್ದ ಪದ್ಯದ ಗಮಕ ವಾಚನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಕಾಂಚನ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ರಮೇಶ್ ಮಯ್ಯ ಅವರು ಗಮಕ ವಾಚನ ನಡೆಸಿದರು. ವಿದ್ಯಾರ್ಥಿನಿಯರಾದ ಸೃಜನ್ಯ ಮತ್ತು ನೇತ್ರಾವತಿ ಪದ್ಯದ ಅರ್ಥ ಹಾಗೂ ವಿಷಯವನ್ನು ವ್ಯಾಖ್ಯಾನಿಸಿದರು.
ಮುಖ್ಯೋಪಾಧ್ಯಾಯರಾದ ಜಯರಾಮ ಮಯ್ಯ ಹಾಗೂ ಶಿಕ್ಷಕ ವೃಂದದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಪ್ರಿತಿಕ್ಷ ಕಾರ್ಯಕ್ರಮವನ್ನು ನಿರೂಪಿಸಿ, ಸ್ವಾಗತಿಸಿದರು. ಶಿಕ್ಷಕ ಸುಮನ್ ಯು.ಎಸ್. ವಂದಿಸಿದರು.






















