ಪುತ್ತೂರು: ಕರಾವಳಿಯ ಒಕ್ಕಲಿಗ ಗೌಡ ಸಮುದಾಯದ ಪ್ರಮುಖರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ, ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭ ಪುತ್ತೂರಿನ ಮಾಜಿ ಶಾಸಕರು ಹಾಗೂ ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಸಲಹಾ ಸಮಿತಿ ಅಧ್ಯಕ್ಷ ಸಂಜೀವ ಮಠಂದೂರು, ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುಂದರ ಗೌಡ ನಡುಬೈಲು, ಜೊತೆ ಕಾರ್ಯದರ್ಶಿ ಯತೀಶ್ ದೇವ ಸಂಟ್ಯಾರು , ಜಿಲ್ಲಾ CCP ಸಂಯೋಜಕ ಪ್ರಸನ್ನ ಕುಮಾರ್ ಡಿ.ಆರ್., ಯುವ ಒಕ್ಕಲಿಗ ಸೇವಾ ಸಂಘ ಗೌರವಾಧ್ಯಕ್ಷ ಅಮರನಾಥ್ ಬಪ್ಪಳಿಗೆ, ಪುತ್ತೂರು ವಲಯದ ಮಾಜಿ ಯುವ ಘಟಕ ಅಧ್ಯಕ್ಷ ಧೀರಜ್ ಹಿರ್ಕುಡೇಲು ಹಾಗೂ ಮಂಗಳೂರು ತಾಲೂಕು ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಬೆಳ್ತಂಗಡಿ ತಾಲೂಕು ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಮುದಾಯದ ಒಗ್ಗಟ್ಟು, ಸಂಘಟನೆ ಮತ್ತು ಅಭಿವೃದ್ಧಿಯ ಸಂಕಲ್ಪಕ್ಕೆ ಬಲ ತುಂಬುವ ದೃಷ್ಟಿಯಿಂದ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಚರ್ಚಿಸಲಾಯಿತು.

























