ಶಿಕ್ಷಣ

ದೇಶಭಕ್ತ ವಿದ್ಯಾರ್ಥಿಗಳ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅಪಾರ | ಅಂಬಿಕಾ ಸಿಬಿಎಸ್ಇ ವಿದ್ಯಾಲಯದಲ್ಲಿ ಶಿಕ್ಷಕರ ಪುನಶ್ಚೇತನ ಕಾರ್ಯಾಗಾರದಲ್ಲಿ ಸುಬ್ರಮಣ್ಯ ನಟ್ಟೋಜ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ದೇಶವನ್ನು ಉತ್ತಮ ಹಾದಿಯತ್ತ ಕೊಂಡೊಯ್ಯುವಲ್ಲಿ ಶಿಕ್ಷಕರ ಪಾತ್ರ ಅಪಾರವಾಗಿದೆ. ಇಂದಿನ ಪಠ್ಯಪುಸ್ತಕದಲ್ಲಿ ಹಿಂದೆ ನಮ್ಮ ದೇಶವನ್ನು ಆಳಿದ ಬ್ರಿಟಿಷ್ ಅಧಿಕಾರಿಗಳನ್ನು ‘ದೇವರು'(ಲಾರ್ಡ್) ಎಂದು ಕರೆಯುತ್ತಿದ್ದೇವೆ. ಹಾಗಾಗಿ ದೇಶವನ್ನು ಕಟ್ಟುವ ಶಿಕ್ಷಕರು ಮಕ್ಕಳಿಗೆ ಕೆಲವು ಸೂಕ್ಷ್ಮ ವಿಚಾರಗಳನ್ನೂ ಸಮರ್ಪಕವಾಗಿ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟಾಗ ಮಕ್ಕಳು ಉತ್ತಮ ರೀತಿಯ ಜ್ಞಾನ ಪಡೆಯಲು ಸಾಧ್ಯ. ಈ ಮೂಲಕ ದೇಶಭಕ್ತ ಹಾಗೂ ರಾಷ್ಟ್ರ ನಿರ್ಮಾಣ ಮಾಡುವ ಬಲಿಷ್ಠ ಯುವ ಜನತೆಯನ್ನು ನಿರ್ಮಿಸಲು ಸಾಧ್ಯ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಹೇಳಿದರು.

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಸಿಬಿಎಸ್‌ಇ ವಿದ್ಯಾಲಯದಲ್ಲಿ ಇತ್ತೀಚಿಗೆ ಹಮ್ಮಿಕೊಂಡಿದ್ದ ಶಿಕ್ಷಕರ ಪುನಶ್ಚೇತನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ದೇಶದ ಬಗೆಗೆ ಸರಿಯಾದ ಜ್ಞಾನವನ್ನು ಮಕ್ಕಳಿಗೆ ಉಣಬಡಿಸುವುದು ಅಗತ್ಯ. ಮಕ್ಕಳಲ್ಲಿ ದೇಶಭಕ್ತಿ ಹೆಚ್ಚಿಸುವ ಕುರಿತು ಮಾಹಿತಿಗಳನ್ನು ನೀಡುವುದು ಶಿಕ್ಷಕರ ಜವಾಬ್ದಾರಿಯಾಗಿದೆ ಎಂದರು.

ಶಿಕ್ಷಕರ ಪುನಶ್ಚೇತನ ತರಬೇತಿಯಲ್ಲಿ ವಿಮರ್ಶಾತ್ಮಕ ಚಿಂತನೆ ಹಾಗೂ ಸೃಜನಾತ್ಮಕ ಚಿಂತನೆಯನ್ನು ತರಗತಿಯಲ್ಲಿ ಅಳವಡಿಸಿಕೊಳ್ಳುವ ಕುರಿತು ಸಿಬಿಎಸ್‌ಇಯಿಂದ ನಿಯೋಜನೆಗೊಂಡ ತರಬೇತುದಾರರಾದ ವಂದನಾ ಎಸ್. ನಾಯಕ್ ಹಾಗೂ ಪ್ರಾಚಿ ಸಿಂಗ್ ತರಬೇತಿ ನೀಡಿದರು. ಸ್ಥಳೀಯ ಸಿಬಿಎಸ್‌ಇ ಶಾಲೆಗಳ ಶಿಕ್ಷಕರು ಕಾರ್ಯಾಗಾರದ ಪ್ರಯೋಜನ ಪಡೆದುಕೊಂಡರು.

ಅಂಬಿಕಾ ಸಿಬಿಎಎಸ್‌ಇ ವಿದ್ಯಾಲಯದ ಪ್ರಾಂಶುಪಾಲೆ ಮಾಲತಿ ಡಿ., ಉಪ ಪ್ರಾಂಶುಪಾಲೆ ಸುಜನಿ ಬೋರ್ಕರ್ ಉಪಸ್ಥಿತರಿದ್ದರು. ವಿದ್ಯಾಲಯದ ಶಿಕ್ಷಕಿಯರಾದ ಶರಣ್ಯ ಹಾಗೂ ರಕ್ಷಾ ಪ್ರಾರ್ಥಿಸಿದರು. ಶಿಕ್ಷಕಿ ಸಹನಾ ಸ್ವಾಗತಿಸಿ, ಶಿಕ್ಷಕಿ ಗೌರಿ ಕಾರ್ಯಕ್ರಮ ನಿರ್ವಹಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯಲ್ಲಿ ಪ್ರತಿಭಾ ತರಂಗಿಣಿ | ಸ್ವಂತ ಸಾಮರ್ಥ್ಯ ಅರಿತುಕೊಳ್ಳಿ: ಡಾ.ಎಂ.ನರಸಿಂಹ ಮೂರ್ತಿ

ಪುತ್ತೂರು: ನಾವಿಂದು ಕೃತಕ ಬುದ್ಧಿಮತ್ತೆಯ ಕಾಲದಲ್ಲಿದ್ದೇವೆ. ಎಐ ಎಂಬುದು ನಾವು ಮಾಹಿತಿಯನ್ನು…

ಯೂತ್ ರೆಡ್’ಕ್ರಾಸ್ ಪ್ರೇರಣಾ ಶಿಬಿರ: ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜು ವಿದ್ಯಾರ್ಥಿ ತಂಡಕ್ಕೆ ಬೆಸ್ಟ್ ಟೀಮ್ ಅವಾರ್ಡ್

ಪುತ್ತೂರು: ಮಂಗಳೂರು ವಿಶ್ವವಿದ್ಯಾಲಯದ ಯುವ ರೆಡ್‌ಕ್ರಾಸ್ ಘಟಕ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ…