ಕರಾವಳಿ

ಅಶೋಕ ಜನ – ಮನ ದಿನಾಂಕ ಮುಂದಕ್ಕೆ: ಕಾರ್ಯಕ್ರಮದ ಮುಂದಿನ ದಿನ ಪ್ರಕಟಿಸಿದ ಶಾಸಕ ಅಶೊಕ್ ಕುಮಾರ್ ರೈ | ಗೊಂದಲ ಸೃಷ್ಟಿಸುವ ಬಗ್ಗೆ ಗಮನಕ್ಕೆ ಬಂದಿದೆ; ಯಾವುದೇ ಗೊಂದಲ ಬೇಡ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಹವಾಮಾನ, ಮೈದಾನ ಕಾಮಗಾರಿ ಮೊದಲಾದ ಕಾರಣಗಳಿಂದ ನ. 8ಕ್ಕೆ ನಿಗದಿಯಾಗಿದ್ದ ಅಶೋಕ ಜನ – ಮನ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನ. 22ರ ಭಾನುವಾರ ತುಳಸಿ ಪೂಜೆಯ ದಿನ ಅಶೋಕ ಜನ – ಮನ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಪ್ರಕಟಿಸಿದರು.

ಸುಮಾರು 4 ಕೋಟಿ ರೂ. ಖರ್ಚಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ 1 ಲಕ್ಷ ಮಂದಿಗೆ ವಸ್ತ್ರ ವಿತರಣೆ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ. 5 ಪ್ರತ್ಯೇಕ ಕೌಂಟರ್ ಗಳಲ್ಲಿ ಸೀರೆ, ಬೆಡ್ ಶೀಟ್ ಸೇರಿದಂತೆ ಬಟ್ಟಲು, ಗ್ಲಾಸ್, ಟವೆಲ್ ನೀಡಲಾಗುವುದು. ಇದರ ಆಮಂತ್ರಣವನ್ನು ಈಗಾಗಲೇ ರೈ ಚಾರಿಟೇಬಲ್ ಟ್ರಸ್ಟಿನಿಂದ ಸಹಾಯ ಪಡೆದುಕೊಂಡ ಸುಮಾರು 18 ಸಾವಿರ ಮಂದಿಗೆ ಪೋಸ್ಟ್ ಕಾರ್ಡ್ ಮೂಲಕ ಕಳುಹಿಸಲಾಗಿದೆ. ದಿನಾಂಕ ಬದಲಾದ ಕಾರಣ, ಮತ್ತೊಮ್ಮೆ ಆಮಂತ್ರಣ ಕಳುಹಿಸುವುದು ಕಷ್ಟ. ಹಾಗಾಗಿ ಮಾಧ್ಯಮಗಳ ಮೂಲಕ, ಕಾರ್ಯಕ್ರಮಕ್ಕೆ ಆಗಮಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದರು.

ಸಮಾರಂಭದಲ್ಲಿ ನೀಡಲಾಗುವುದು ವಸ್ತ್ರ ಇನ್ನಿತರ ವಸ್ತುಗಳನ್ನು ಪಡೆದುಕೊಳ್ಳಲು ಯಾವುದೇ ಐಡಿ, ಬೌಂಡರಿ ಇಲ್ಲ. ಯಾರೂ ಕೂಡ ಬಂದು ಇದನ್ನು ಪಡೆದುಕೊಳ್ಳಬಹುದು. ಇದರ ಬಗ್ಗೆ ಗೊಂದಲ ಸೃಷ್ಟಿ ಮಾಡುತ್ತಿರುವುದು ಈಗಾಗಲೇ ಗಮನಕ್ಕೆ ಬಂದಿದೆ. ಯಾವುದೇ ಗೊಂದಲಗಳಿಗೆ ಕಿವಿಗೊಡಬೇಡಿ. ಸಭಾ ಕಾರ್ಯಕ್ರಮಕ್ಕೂ ಕಾಯದೇ, ಬೆಳಗ್ಗಿನಿಂದಲೇ ವಸ್ತ್ರ ವಿತರಣೆ ಕಾರ್ಯಕ್ರಮ ನಡೆಯಲಿದೆ. ಐದು ಪ್ರತ್ಯೇಕ ಕೌಂಟರ್ ಗಳಿದ್ದು, ವಯಸ್ಕರಿಗೂ ಪ್ರತ್ಯೇಕ ಕೌಂಟರ್ ಮಾಡಲಾಗುತ್ತದೆ ಎಂದರು.

ದೋಸೆ ಕ್ಯಾಂಪ್:

ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ದೋಸೆ ಕ್ಯಾಂಪ್ ನಡೆಯಲಿದೆ. ಮಧ್ಯಾಹ್ನ 12ರಿಂದ 3ರವರೆಗೆ ಊಟದ ವ್ಯವಸ್ಥೆ ಇದೆ. ಸುಮಾರು 1 ಲಕ್ಷದಷ್ಟು ದೋಸೆ ಮಾಡುವ ಬಗ್ಗೆ ಆಲೋಚಿಸಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟಿನ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ, ಟ್ರಸ್ಟಿನ ಪ್ರಮುಖರಾದ ದುರ್ಗಾ ಪ್ರಸಾದ್ ರೈ, ನಿಹಾಲ್ ಪಿ. ಶೆಟ್ಟಿ, ಜಯಪ್ರಕಾಶ್ ಬದಿನಾರು ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಆಕಸ್ಮಿಕವಾಗಿ ಬಾವಿಗೆ ಬಿದ್ದ ದಂಪತಿ!! ರಕ್ಷಣಾ ಕಾರ್ಯಾಚರಣೆ ನಡೆಸಿದ ಈಶ್ವರ್ ಮಲ್ಪೆ, ಅಗ್ನಿಶಾಮಕ ಸಿಬ್ಬಂದಿ!

ಆಕಸ್ಮಿಕವಾಗಿ ಬಾವಿಗೆ ಬಿದ್ದ ದಂಪತಿಯನ್ನು ರಕ್ಷಿಸಿದ ಘಟನೆ ಇಂದು ಬೆಳಗ್ಗೆ ಉಡುಪಿಯ ಕೆಮ್ಮಣ್ಣು…