ಕರ್ನಾಟಕ ಮುಸ್ಲಿಂ ಅಡ್ವಕೇಟ್ಸ್ ಫೋರಂ ನೂತನ ಅಧ್ಯಕ್ಷ ಮುಜಫರ್ ಅಹ್ಮದ್‌ಗೆ ಮಂಗಳೂರಿನಲ್ಲಿ ಅದ್ಧೂರಿ ಸನ್ಮಾನ
ಮಂಗಳೂರು, ಆ.9: ಕರ್ನಾಟಕ ಮುಸ್ಲಿಂ ಅಡ್ವಕೇಟ್ಸ್ ಫೋರಂನ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಹೈಕೋರ್ಟ್ ವಕೀಲ ಅಡ್ವೋಕೇಟ್ ಮುಜಫರ್ ಅಹ್ಮದ್ ಹಾಗೂ ನೂತನ ಪದಾಧಿಕಾರಿಗಳಿಗೆ ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ ಮಂಗಳೂರಿನಲ್ಲಿ ಅಭಿನಂದನಾ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು.
ಫಳ್ನೀರ್‌ನ ಅಲ್-ಎಹ್ಸಾನ್ ಮಸೀದಿಯ HIF ಆಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ವಕೀಲ ಹಾಗೂ ನೋಟರಿ ಅಡ್ವೋಕೇಟ್ ಅಬ್ದುಲ್ ಅಝೀಜ್ ವಹಿಸಿದ್ದರು. ಹಾಫೀಜ್ ಅಬ್ದುಲ್ ಮುಹೈಮೀನ್ ನದ್ವಿ ಕೆಂಪಿ ಅವರ ಖುರಾನ್ ಪಠಣದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.
ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ವಕೀಲ ಅಡ್ವೋಕೇಟ್ ಇಸ್ಮಾಯಿಲ್ ನೆಲ್ಯಾಡಿ ಸ್ವಾಗತಿಸಿದರು. ಹಿರಿಯ ವಕೀಲ ನೂರುದ್ದೀನ್ ಸಾಲ್ಮರ ಪುತ್ತೂರು ಪ್ರಾಸ್ತಾವಿಕವಾಗಿ ಮಾತನಾಡಿ, ಫೋರಂನ ಚುನಾವಣಾ ಪ್ರಕ್ರಿಯೆ ಹಾಗೂ ಜಿಲ್ಲೆಯ ಮುಸ್ಲಿಂ ವಕೀಲರು ಸಮುದಾಯದ ಸಂಕಷ್ಟದ ಸಂದರ್ಭದಲ್ಲಿ ಸಲ್ಲಿಸಿದ ಸೇವೆಗಳ ಕುರಿತು ವಿವರಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ಮುಜಫರ್ ಅಹ್ಮದ್, ಸಮುದಾಯದಲ್ಲಿ ಕಾನೂನು ಜಾಗೃತಿ ಮೂಡಿಸುವುದು ಹಾಗೂ ವಕೀಲರ ಹಕ್ಕುಗಳ ರಕ್ಷಣೆಗೆ ಫೋರಂ ಬದ್ಧವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಫೋರಂನ ನೂತನ ಉಪಾಧ್ಯಕ್ಷೆ ತರನ್ನುಮ್, ಪ್ರಧಾನ ಕಾರ್ಯದರ್ಶಿ ಮೊಯೀನುಲ್ಲಾ ಅಬ್ಬಾಸಿ, ಕೋಶಾಧಿಕಾರಿ ವಾಸೀಮ್ ಅಹ್ಮದ್ ಹಾಗೂ ಜೊತೆ ಕಾರ್ಯದರ್ಶಿ ಸಿರಾಜುದ್ದೀನ್ ಅಹ್ಮದ್ ಅವರನ್ನು ಸನ್ಮಾನಿಸಲಾಯಿತು. ಪ್ರಧಾನ ಕಾರ್ಯದರ್ಶಿ ಮೊಯೀನುಲ್ಲಾ ಅಬ್ಬಾಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್, ಮಾಜಿ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಬಿ.ಎ. ಅಬ್ದುಲ್ ನಾಸಿರ್, ಮಾಜಿ ಮೇಯರ್ ಅಶ್ರಫ್, ರಫೀಕ್ ಮಾಸ್ಟರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು, ನೂತನ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.
ಸುಳ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಸ್ತಫಾ ಸುಳ್ಯ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಹನೀಫ್ ಹಾಜಿ, ಹಿದಾಯ ಫೌಂಡೇಶನ್ ಅಧ್ಯಕ್ಷ ಹನೀಫ್ ಹಾಜಿ ಗೋಳ್ತಮಜಲ್, ರಾಜಕೀಯ ಮುಖಂಡ ಶಾನವಾಝ್ ಕುಳೂರು, ಬಿ-ಹ್ಯೂಮನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಇಮ್ರಾನ್ ಬಂದರ್, ಉಳ್ಳಾಲ ನಗರ ಪಾಲಿಕೆಯ ಮಾಜಿ ಸದಸ್ಯ ಯು.ಎಚ್. ಫಾರೂಕ್ ಉಳ್ಳಾಲ ಸೇರಿದಂತೆ ಹಲವು ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಜಿಲ್ಲೆಯ ಹಲವು ಹಿರಿಯ ಹಾಗೂ ಕಿರಿಯ ವಕೀಲರು, ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಅಡ್ವೋಕೇಟ್ ಅಬ್ದುಲ್ ಅಝೀಜ್ ಅಧ್ಯಕ್ಷೀಯ ಭಾಷಣ ಮಾಡಿದರು. ಅಡ್ವೋಕೇಟ್ ಸರ್ಫ್ರಾಜ್ ವಂದಿಸಿದರು. ಅಡ್ವೋಕೇಟ್ ಜೀಷನ್ ಅಲಿ ಕಾರ್ಯಕ್ರಮ ನಿರೂಪಿಸಿದರು.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿ, ಹಿದಾಯ ಫೌಂಡೇಶನ್ ಹಾಗೂ ಬಿ-ಹ್ಯೂಮನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದಲೂ ನೂತನ ಅಧ್ಯಕ್ಷ ಮುಜಫರ್ ಅಹ್ಮದ್ ಹಾಗೂ ಪದಾಧಿಕಾರಿಗಳನ್ನು ಗೌರವಿಸಲಾಯಿತು.






















