tamanvi
ಸ್ಥಳೀಯ

ಪುತ್ತೂರಿನ ಕರಿಮಣಿ ಸರಗಳಿಗೆ ಹೊಸ ವಿನ್ಯಾಸದ ಸ್ಪರ್ಶ; IIJS Bharat Premiere 2026ರಲ್ಲಿ ಈಶ್ವರ ಮುರಳಿ ಭಾಗಿ

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಪುತ್ತೂರು ಸೇರಿದಂತೆ ಕರಾವಳಿ ಭಾಗದ ಮಹಿಳೆಯರ ಆಭರಣ ಸಂಪ್ರದಾಯದಲ್ಲಿ ವಿಶೇಷ ಸ್ಥಾನ ಪಡೆದಿರುವ ಕರಿಮಣಿ ಸರಗಳಲ್ಲಿ ಹೊಸತನ, ವೈವಿಧ್ಯತೆ ಹಾಗೂ ಆಧುನಿಕ ವಿನ್ಯಾಸಗಳನ್ನು ಪರಿಚಯಿಸುವ ಉದ್ದೇಶದಿಂದ ಡಿ. ಶಿವ ಭಟ್ ಜ್ಯುವೆಲ್ಲರ್ಸ್ ಮಾಲಕ ಈಶ್ವರ ಮುರಳಿ ಅವರು ಮುಂಬೈನಲ್ಲಿ ನಡೆದ ಪ್ರತಿಷ್ಠಿತ IIJS Bharat Premiere 2026 ಅಂತರರಾಷ್ಟ್ರೀಯ ಜ್ಯುವೆಲ್ಲರಿ ಪ್ರದರ್ಶನದಲ್ಲಿ ಭಾಗವಹಿಸಿದರು.

maithri

ಪ್ರದರ್ಶನದಲ್ಲಿ ದೇಶದ ಪ್ರಮುಖ ಆಭರಣ ತಯಾರಕರು ಹಾಗೂ ವಿನ್ಯಾಸಕಾರರು ಪರಿಚಯಿಸಿದ ನೂತನ ಮಾದರಿಯ ಕರಿಮಣಿ ಸರಗಳು, ಸಾಂಪ್ರದಾಯಿಕ ಹಾಗೂ ಆಧುನಿಕ ಮಂಗಳಸೂತ್ರ ವಿನ್ಯಾಸಗಳು, ವಿಭಿನ್ನ ಪೆಂಡೆಂಟ್ ಮಾದರಿಗಳು, ವಧುವಿನ ಆಭರಣಗಳು ಸೇರಿದಂತೆ ಚಿನ್ನಾಭರಣ ಕ್ಷೇತ್ರದ ಇತ್ತೀಚಿನ ವಿನ್ಯಾಸಗಳು ಮತ್ತು ಟ್ರೆಂಡ್‌ಗಳನ್ನು ಈಶ್ವರ ಮುರಳಿ ಅವರು ವಿಶೇಷವಾಗಿ ಅವಲೋಕಿಸಿದರು.

ಕರಾವಳಿ ಕರ್ನಾಟಕದ ಸಾಂಪ್ರದಾಯಿಕ ಕರಿಮಣಿ ಸರಗಳ ಶೈಲಿ ಹಾಗೂ ವೈಶಿಷ್ಟ್ಯವನ್ನು ಉಳಿಸಿಕೊಂಡು, ಅದಕ್ಕೆ ಆಧುನಿಕ ವಿನ್ಯಾಸದ ಸ್ಪರ್ಶ ನೀಡುವುದು ಈ ಭೇಟಿಯ ಪ್ರಮುಖ ಉದ್ದೇಶವಾಗಿತ್ತು. ವಿಭಿನ್ನ ವಯೋಮಾನದ ಮಹಿಳೆಯರ ಅಭಿರುಚಿಗೆ ತಕ್ಕಂತೆ ಇನ್ನಷ್ಟು ವಿನ್ಯಾಸಗಳು ಹಾಗೂ ವೈವಿಧ್ಯಮಯ ಆಯ್ಕೆಗಳನ್ನು ಪುತ್ತೂರಿನಲ್ಲಿಯೇ ಗ್ರಾಹಕರಿಗೆ ಒದಗಿಸುವ ನಿಟ್ಟಿನಲ್ಲಿ ಹೊಸ ವಿನ್ಯಾಸಗಳನ್ನು ಪರಿಶೀಲಿಸಲಾಯಿತು.

ಇದರೊಂದಿಗೆ ನೆಕ್ಲೆಸ್, ಚೈನ್, ಬಳೆ, ಉಂಗುರ, ಬ್ರೈಡಲ್ ಜ್ಯುವೆಲ್ಲರಿ ಸೇರಿದಂತೆ ವಿವಿಧ ಚಿನ್ನಾಭರಣಗಳ ಹೊಸ ಮಾದರಿಗಳನ್ನೂ ಅವಲೋಕಿಸಲಾಗಿದೆ. ಮುಂಬೈನ ಪ್ರಮುಖ ಜ್ಯುವೆಲ್ಲರಿ ಟ್ರೆಂಡ್‌ಗಳು ಹಾಗೂ ಆಯ್ದ ವಿಶೇಷ ವಿನ್ಯಾಸಗಳನ್ನು ಪುತ್ತೂರಿನ ಗ್ರಾಹಕರಿಗೆ ಪರಿಚಯಿಸುವ ಉದ್ದೇಶದಿಂದ ಹೊಸ ಸಂಗ್ರಹಗಳನ್ನು ತರಲು ಡಿ. ಶಿವ ಭಟ್ ಜ್ಯುವೆಲ್ಲರ್ಸ್ ಮುಂದಾಗಿದೆ.

ಪಾರಂಪರಿಕ ಕರಿಮಣಿ ಸರಗಳ ವೈವಿಧ್ಯಮಯ ಸಂಗ್ರಹದೊಂದಿಗೆ ಹೊಸ ತಲೆಮಾರಿನ ವಿನ್ಯಾಸಗಳನ್ನೂ ಪರಿಚಯಿಸುವ ಮೂಲಕ “ಪುತ್ತೂರಿನ ಕರಿಮಣಿ ಸ್ಪೆಷಲಿಸ್ಟ್” ಎಂಬ ವಿಶೇಷತೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಸಂಸ್ಥೆ ಕಾರ್ಯೋನ್ಮುಖವಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

1 of 127