tamanvi
ಪ್ರಚಲಿತಸ್ಥಳೀಯ

ವಿದ್ಯಾಮಾತಾ ಅಕಾಡೆಮಿಯಲ್ಲಿ ಅಗ್ನಿಪಥ್, ಪೊಲೀಸ್ ಹಾಗೂ ವಾಚರ್ ನೇಮಕಾತಿಗೆ ಉಚಿತ ಫಿಸಿಕಲ್ ಫಿಟ್ನೆಸ್ ತರಬೇತಿ

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಸೇನಾ ನೇಮಕಾತಿ ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಹೆಸರುವಾಸಿಯಾದ ವಿದ್ಯಾಮಾತಾ ಅಕಾಡೆಮಿಯ ವತಿಯಿಂದ ಅಗ್ನಿಪಥ್, ಪೊಲೀಸ್ ಕಾನ್ಸ್ಟೇಬಲ್ (PC) ಹಾಗೂ ಅರಣ್ಯ ಇಲಾಖೆಯ ವಾಚರ್ ಹುದ್ದೆಗಳ ನೇಮಕಾತಿಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳಿಗಾಗಿ ಉಚಿತ ದೈಹಿಕ ಸಾಮರ್ಥ್ಯ ತರಬೇತಿ ಆರಂಭಿಸಲಾಗಿದೆ.

ನೇಮಕಾತಿ ಪ್ರಕ್ರಿಯೆಯ ದೈಹಿಕ ಪರೀಕ್ಷೆಗೆ ಪೂರ್ವ ತಯಾರಿ ನಡೆಸುತ್ತಿರುವವರು ಹಾಗೂ ಭವಿಷ್ಯದ ಸಶಸ್ತ್ರ ಪಡೆಗಳ ನೇಮಕಾತಿಗೆ ಸಿದ್ಧರಾಗುತ್ತಿರುವ ಅಭ್ಯರ್ಥಿಗಳು ಈ ತರಬೇತಿಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

maithri

ತರಬೇತಿಯ ವಿಶೇಷತೆಗಳು

ತರಬೇತಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಉಚಿತ ವಸತಿ ಸೌಲಭ್ಯ ಕಲ್ಪಿಸಲಾಗುತ್ತದೆ. ಕಾಲೇಜು ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳ ಅನುಕೂಲಕ್ಕಾಗಿ ಪ್ರತಿದಿನ ಬೆಳಗ್ಗೆ, ಸಂಜೆ ಅಥವಾ ಪ್ರತಿ ಭಾನುವಾರ ಬೆಳಗ್ಗೆ ನುರಿತ ತರಬೇತುದಾರರ ತಂಡದಿಂದ ವಿಶೇಷ ಫಿಸಿಕಲ್ ಫಿಟ್ನೆಸ್ ತರಬೇತಿ ನೀಡಲಾಗುತ್ತದೆ.

ಬೆಳಗ್ಗೆ ತರಬೇತಿ ಪಡೆದು ಕಾಲೇಜು ಅಥವಾ ಉದ್ಯೋಗಕ್ಕೆ ತೆರಳಿ, ಸಂಜೆ ಮರಳಿ ತರಬೇತಿಯಲ್ಲಿ ಪಾಲ್ಗೊಳ್ಳುವ ಅವಕಾಶದ ಜೊತೆಗೆ ವಸತಿ ಸೌಲಭ್ಯವನ್ನು ಬಳಸಿಕೊಳ್ಳಬಹುದಾಗಿದೆ.

64ಕ್ಕೂ ಅಧಿಕ ಅಭ್ಯರ್ಥಿಗಳ ಆಯ್ಕೆ

ವಿದ್ಯಾಮಾತಾ ಅಕಾಡೆಮಿಯ ಮೂಲಕ ಕಳೆದ ನಾಲ್ಕು ವರ್ಷಗಳಲ್ಲಿ 64ಕ್ಕೂ ಅಧಿಕ ಅಭ್ಯರ್ಥಿಗಳು ಸೇನಾ ಪಡೆ, ಅರೆಸೇನಾ ಪಡೆ, ಪೊಲೀಸ್ ಹಾಗೂ ಅರಣ್ಯ ಇಲಾಖೆಯ ನೇಮಕಾತಿಗಳಿಗೆ ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.

ನೋಂದಣಿಗೆ ಅವಕಾಶ

ನೇಮಕಾತಿಗೆ ಅರ್ಜಿ ಸಲ್ಲಿಸಿರುವವರು, ಈಗಾಗಲೇ ಪರೀಕ್ಷೆ ಬರೆದಿರುವವರು ಅಥವಾ ತರಬೇತಿ ಪಡೆಯಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಪುತ್ತೂರಿನ ಎಪಿಎಂಸಿ ರಸ್ತೆಯಲ್ಲಿರುವ ವಿದ್ಯಾಮಾತಾ ಅಕಾಡೆಮಿಯ ಕಚೇರಿಗೆ ಖುದ್ದಾಗಿ ಭೇಟಿ ನೀಡಿ ಹೆಸರು ನೋಂದಾಯಿಸಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ 9620468869 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ನಿಂತ್ರೆ ನಿಂತ ಹಾಗೇ – ಬೆಲ್ ಬಾಟಂ ಸಿನಿಮಾ ಮಾದರಿಯ ಡ್ರಗ್!! ಇಬ್ಬರು ಯುವಕರ ವಿಚಿತ್ರ ವರ್ತನೆಗೆ ಸಾರ್ವಜನಿಕರ ಆತಂಕ!

ರಾಜಸ್ಥಾನ: ಶ್ರೀ ಗಂಗಾನಗರದಲ್ಲಿ ಇಬ್ಬರು ಯುವಕರು ರಸ್ತೆಬದಿಯಲ್ಲಿ ಯಾವುದೇ ಚಲನೆಯಿಲ್ಲದೆ…

1 of 159