tamanvi
ಪ್ರಚಲಿತ

ನಿಂತ್ರೆ ನಿಂತ ಹಾಗೇ – ಬೆಲ್ ಬಾಟಂ ಸಿನಿಮಾ ಮಾದರಿಯ ಡ್ರಗ್!! ಇಬ್ಬರು ಯುವಕರ ವಿಚಿತ್ರ ವರ್ತನೆಗೆ ಸಾರ್ವಜನಿಕರ ಆತಂಕ!

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ರಾಜಸ್ಥಾನ: ಶ್ರೀ ಗಂಗಾನಗರದಲ್ಲಿ ಇಬ್ಬರು ಯುವಕರು ರಸ್ತೆಬದಿಯಲ್ಲಿ ಯಾವುದೇ ಚಲನೆಯಿಲ್ಲದೆ ನಿಂತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಭಾರೀ ಆತಂಕ ಮೂಡಿಸಿದೆ.

maithri

ಟರ್ಬನ್ ಧರಿಸಿದ್ದ ಈ ಇಬ್ಬರು ಯುವಕರು ತಲೆ ಮತ್ತು ಕೈಗಳನ್ನು ಕೆಳಗೆ ಹಾಕಿ, ದೀರ್ಘಕಾಲ ಒಂದೇ ಸ್ಥಳದಲ್ಲಿ ನಿಂತುಕೊಂಡಿದ್ದರು. ಅವರು ನಿಯಂತ್ರಣ ತಪ್ಪಿ ಕೆಳಗೆ ಬೀಳುವಂತೆ ಕಂಡರೂ ಮತ್ತೆ ಸಮತೋಲನ ಕಾಯ್ದುಕೊಳ್ಳುತ್ತಿದ್ದರು. ಈ ನಡವಳಿಕೆಯನ್ನು ನೋಡಿದ ನೆಟ್ಟಿಗರು, ಇವರು ‘ಜಾಂಬಿ ಡ್ರಗ್’ ಸೇವಿಸಿರಬಹುದು ಎಂದು ಶಂಕಿಸಿದ್ದಾರೆ.ಈ ಹಿಂದೆ ಪಂಜಾಬ್, ಚಂಡೀಗಢ, ಬೆಂಗಳೂರು ಹಾಗೂ ಬಿಹಾರದಲ್ಲೂ ಇದೇ ರೀತಿಯ ವಿಚಿತ್ರ ಘಟನೆಗಳು ವರದಿಯಾಗಿದ್ದು, ಇದೀಗ ರಾಜಸ್ಥಾನದಲ್ಲೂ ಇಂತಹ ಪ್ರಕರಣ ಬೆಳಕಿಗೆ ಬಂದಿರುವುದು ಭೀತಿ ಹೆಚ್ಚಿಸಿದೆ. ಆದರೆ, ವಿಡಿಯೋದಲ್ಲಿರುವ ಯುವಕರು ನಿಜವಾಗಿಯೂ ಡ್ರಗ್ಸ್ ಸೇವಿಸಿದ್ದಾರೆಯೇ ಎಂಬುದರ ಕುರಿತು ಯಾವುದೇ ಅಧಿಕೃತ ಮಾಹಿತಿಯಿಲ್ಲ.

‘ಕೈಲಾಜಿನ್’ (Xylazine) ಎಂಬ ಪ್ರಾಣಿಗಳಿಗೆ ಬಳಸುವ ಸೆಡೇಟಿವ್‌ ಔಷಧವನ್ನು ಸಾಮಾನ್ಯವಾಗಿ ‘ಜಾಂಬಿ ಡ್ರಗ್’ ಎಂದು ಕರೆಯಲಾಗುತ್ತದೆ. ಇದನ್ನು ಅಮೆರಿಕ ಮುಂತಾದ ಕಡೆಗಳಲ್ಲಿ ಫೆಂಟ್ರಿಲ್‌ನಂತಹ ಪ್ರಬಲ ಒಪಿಯಾಡ್‌ಗಳೊಂದಿಗೆ ಬೆರೆಸಿ ಬಳಸಲಾಗುತ್ತದೆ. ಇದರಿಂದಾಗಿ ಜನರು ಪ್ರಜ್ಞೆ ತಪ್ಪಿ, ನಿಂತಲ್ಲೇ ಅಲುಗಾಡದೆ ನಿಲ್ಲುವ ಸ್ಥಿತಿಗೆ ತಲುಪುತ್ತಾರೆ. ಈ ವಿಡಿಯೋ ಶೇರ್ ಆಗುತ್ತಿದ್ದಂತೆ, “ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ, ಸರ್ಕಾರ ತಕ್ಷಣವೇ ಇದರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಸಾಮಾಜಿಕ ಜಾಲತಾಣ ಬಳಕೆದಾರರು ಕಳವಳ ವ್ಯಕ್ತಪಡಿಸಿದ್ದಾರೆ. Siri Digital shakthi website news script


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts