tamanvi
ಪ್ರಚಲಿತ

ಪುತ್ತೂರು ರೋಟರ್ಯಾಕ್ಟ್ ಕ್ಲಬ್ಬಿನ 49ನೇ ವರ್ಷದ ಅಧ್ಯಕ್ಷರಾಗಿ ಶ್ರೀಕಾಂತ್, ಕಾರ್ಯದರ್ಶಿಯಾಗಿ ಸುಕನ್ಯಾ ಕಡ್ಯ ಪದಸ್ವೀಕಾರ

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿರುವ ರೋಟರಾಕ್ಟ್ ಕ್ಲಬ್ ಪುತ್ತೂರು (2026–27)ರ 49ನೇ ವರ್ಷದ ಅಧ್ಯಕ್ಷರಾಗಿ ಶ್ರೀಕಾಂತ್ ಹಾಗೂ ಕಾರ್ಯದರ್ಶಿಯಾಗಿ ಸುಕನ್ಯಾ ಮತ್ತು ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭವು ಪುತ್ತೂರಿನ ರೋಟರಿ ಜಿ.ಎಲ್. ಸಭಾಭವನದಲ್ಲಿ ವಿಜೃಂಭಣೆಯಿಂದ ನಡೆಯಿತು.

maithri

rotaract

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪದಪ್ರದಾನ ಅಧಿಕಾರಿಯಾಗಿ ರೋಟರಿ ಕ್ಲಬ್ ಪುತ್ತೂರಿನ ಅಧ್ಯಕ್ಷ ದತ್ತಾತ್ರೇಯ ಅವರು ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್ ಪುತ್ತೂರಿನ ಯುವಜನ ಸೇವಾ ನಿರ್ದೇಶಕ ಸುಬ್ಬಪ್ಪ ಕೈಕಂಬ, ರೋಟರಾಕ್ಟ್ ಜಿಲ್ಲೆ 3181ರ ಸಹಾಯಕ ಜಿಲ್ಲಾಪ್ರತಿನಿಧಿ ನವೀನ್ ರೈ ಬನ್ನೂರು ಹಾಗೂ ಕೆನರಾ ವಲಯ ಪ್ರತಿನಿಧಿ ಎಡ್ವರ್ಡ್ ಭಾಗವಹಿಸಿ ಶುಭ ಹಾರೈಕೆಗಳನ್ನು ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ರೋಟರಾಕ್ಟ್ ಕ್ಲಬ್ ಪುತ್ತೂರಿನ ಸಭಾಪತಿ ಶ್ರೀಧರ್ ಆಚಾರ್ಯ ಹಾಗೂ ನಿಕಟ ಪೂರ್ವ ಸಭಾಪತಿ ಕಿಶನ್ ಬಿ.ವಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿವಿಧ ಸೇವಾ ಯೋಜನೆಗಳನ್ನು ಹಮ್ಮಿಕೊಳ್ಳಲಾಯಿತು. ಸಂಘಸೇವಾ ವಿಭಾಗದಲ್ಲಿ ನಾಲ್ವರು ಹೊಸ ಸದಸ್ಯರನ್ನು ಕ್ಲಬ್‌ಗೆ ಸೇರ್ಪಡೆಗೊಳಿಸಲಾಯಿತು. ವೃತ್ತಿ ಸೇವಾ ವಿಭಾಗದಡಿ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಅಬ್ರಹಾಂ ಎಸ್. ಎ. ಅವರನ್ನು ಗೌರವಿಸಲಾಯಿತು. ಸಮಾಜ ಸೇವಾ ವಿಭಾಗದಲ್ಲಿ ಅಂಗವಿಕಲ ಫಲಾನುಭವಿಗೆ ಉಚಿತ ವೀಲ್‌ಚೇರ್ ವಿತರಿಸಲಾಯಿತು ಹಾಗೂ ಡಯಾಲಿಸಿಸ್ ಚಿಕಿತ್ಸೆಗೆ ಒಳಗಾಗಿರುವ ವ್ಯಕ್ತಿಗೆ ಆರ್ಥಿಕ ನೆರವು ನೀಡಲಾಯಿತು. ಅಂತರಾಷ್ಟ್ರೀಯ ಸೇವಾ ವಿಭಾಗದಲ್ಲಿ ರೋಟರಿ ಫೌಂಡೇಶನ್‌ನಿಂದ ಪಾಲ್ ಹ್ಯಾರಿಸ್ ಫೆಲೋ (PHF) ಗೌರವ ಪಡೆದ ಶ್ರೀಧರ್ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.

ನಿಕಟ ಪೂರ್ವ ಅಧ್ಯಕ್ಷ ವಿನೀತ್ ಅವರು ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯದರ್ಶಿ ಸುಕನ್ಯಾ ಕಡ್ಯ ವಂದಿಸಿದರು. ಶಶಿಧರ್ ಮಾವಿನಕಟ್ಟೆ ಹಾಗೂ ಗಣೇಶ್ ಕಲ್ಲರ್ಪೆ ಕಾರ್ಯಕ್ರಮ ನಿರೂಪಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಪುರುಷರಕಟ್ಟೆ ಪ್ರಕರಣ: ಯುವತಿ ಮನೆಯವರಿಗೆ ಧೈರ್ಯ ತುಂಬಿದ ಪುತ್ತೂರು ಒಕ್ಕಲಿಗ ಗೌಡ ಸಮುದಾಯದ ಪ್ರಮುಖರು

ಪುತ್ತೂರು: ಪುರುಷರಕಟ್ಟೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಯುವತಿಯ ಮನೆಗೆ ಗೌಡ ಸಮುದಾಯದ…