tamanvi
ಶಿಕ್ಷಣ

ವಿದ್ಯಾಮಾತಾ ಅಕಾಡೆಮಿಯಲ್ಲಿ ಶಿಕ್ಷಕರ ನೇಮಕಾತಿ ಪರೀಕ್ಷೆಗಳಿಗೆ ಆನ್‌ಲೈನ್ ಕ್ರ್ಯಾಶ್ ಕೋರ್ಸ್ ಪ್ರಾರಂಭ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಸರ್ಕಾರಿ ಹಾಗೂ ಸರ್ಕಾರಿ ಸ್ವಾಮ್ಯದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುತ್ತಾ ಬಂದಿರುವ ವಿದ್ಯಾಮಾತಾ ಅಕಾಡೆಮಿ, ಸರ್ಕಾರಿ ಶಿಕ್ಷಕರ ನೇಮಕಾತಿ ಪರೀಕ್ಷೆಗಳಾದ PSTR, GPSTR ಹಾಗೂ HSTR ಪರೀಕ್ಷೆಗಳಿಗೆ ಪೂರಕವಾಗಿ ಆನ್‌ಲೈನ್ ಕ್ರ್ಯಾಶ್ ಕೋರ್ಸ್ ಆರಂಭಿಸಿದೆ.

ಸರ್ಕಾರ ಅಕ್ಟೋಬರ್‌ನಲ್ಲಿ ನಡೆಸಲು ಉದ್ದೇಶಿಸಿರುವ ಶಿಕ್ಷಕರ ನೇಮಕಾತಿ ಪರೀಕ್ಷೆಗಳನ್ನು ಎದುರಿಸಲಿರುವ ಅಭ್ಯರ್ಥಿಗಳಿಗೆ ಅಂತಿಮ ಹಂತದ ಸಿದ್ಧತೆಗಾಗಿ ಈ ವಿಶೇಷ ತರಬೇತಿ ಆಯೋಜಿಸಲಾಗಿದೆ. ತರಗತಿಗಳು ಆನ್‌ಲೈನ್ ಲೈವ್ ಮೂಲಕ ರಾತ್ರಿ 7ರಿಂದ 10ರವರೆಗೆ ನಡೆಯಲಿವೆ. ಪ್ರತೀ ಭಾನುವಾರ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ವಿಶೇಷ ನೇರ ತರಗತಿಗಳನ್ನು ಸಹ ಆಯೋಜಿಸಲಾಗಿದೆ.

ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪಡೆದು 800ಕ್ಕೂ ಅಧಿಕ ಅಭ್ಯರ್ಥಿಗಳು ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದು ಹಾಗೂ ಕಳೆದ ಸಾಲಿನ ಶಿಕ್ಷಕರ ನೇಮಕಾತಿ ಪರೀಕ್ಷೆಯ ತರಬೇತಿ ಪಡೆದ ಐವರು ವಿದ್ಯಾರ್ಥಿಗಳು GPSTR ನೇಮಕಾತಿಯಲ್ಲಿ ಉತ್ತೀರ್ಣರಾಗಿರುವುದು ಸಂಸ್ಥೆಯ ಸಾಧನೆಯಾಗಿದೆ ಎಂದು ತಿಳಿಸಲಾಗಿದೆ.

ಅರ್ಜಿ ಸಲ್ಲಿಕೆಗೂ ಅವಕಾಶ

PSTR/GPSTR/HSTR ನೇಮಕಾತಿಗೆ ಅರ್ಜಿ ಸಲ್ಲಿಸದ ಅಭ್ಯರ್ಥಿಗಳಿಗೆ ಸೆ.25, 2025ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸರ್ಕಾರಿ ಶಿಕ್ಷಕರಾಗುವ ಕನಸು ಹೊಂದಿರುವ ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಅಕಾಡೆಮಿ ತಿಳಿಸಿದೆ.

ಆಸಕ್ತ ಅಭ್ಯರ್ಥಿಗಳು ಪುತ್ತೂರಿನ ಎಪಿಎಂಸಿ ರಸ್ತೆಯಲ್ಲಿರುವ ವಿದ್ಯಾಮಾತಾ ಅಕಾಡೆಮಿ ಕಚೇರಿಗೆ ಸಂಪರ್ಕಿಸಿ ಕ್ರ್ಯಾಶ್ ಕೋರ್ಸ್‌ಗೆ ದಾಖಲಾತಿ ಪಡೆಯಬಹುದು.

ಸಂಪರ್ಕ: 99451 82516 / 96204 68869


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಪುತ್ತೂರಿನಲ್ಲಿ ಸಂಭ್ರಮದ 28ನೇ ವರ್ಷದ ‘ಶ್ರೀಕೃಷ್ಣಲೋಕ’ ;1,250ಕ್ಕೂ ಅಧಿಕ ಪುಟಾಣಿ ಕೃಷ್ಣ-ರಾಧೆಯರಿಂದ ವೈಭವದ ಶೋಭಾಯಾತ್ರೆ

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನದಲ್ಲಿರುವ ಪರ್ಲಡ್ಕ ಶಿವಪೇಟೆಯ ವಿವೇಕಾನಂದ…