tamanvi
ಸ್ಥಳೀಯ

ಅಪಾಯಕಾರಿ ಸ್ಥಿತಿಯಲ್ಲಿದ್ದ ರಸ್ತೆ ಬದಿಯ ಮರ: ತಹಸೀಲ್ದಾರ್ ಭೇಟಿ ಬಳಿಕ ತೆರವು

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಸಂಪ್ಯದಿಂದ ದೇವಸ್ಯ ಸಂಪರ್ಕಿಸುವ ಮೇರ್ಲ ರಸ್ತೆ ಬದಿಯ ಮರವೊಂದು ಅಪಾಯಕಾರಿ ಸ್ಥಿತಿಯಲ್ಲಿದ್ದು, ತಹಸೀಲ್ದಾರ್ ಎಸ್.ಬಿ. ಕೂಡಲಗಿ ಭೇಟಿ ಬಳಿಕ ಮರ ತೆರವುಗೊಳಿಸಲಾಯಿತು.

maithri

ರಸ್ತೆ ಬದಿಯಲ್ಲೇ ಇರುವ ಈ ಮರದ ಬುಡ ಕುಸಿಯುತ್ತಾ ಇದೆ. ಯಾವುದೇ ಕ್ಷಣದಲ್ಲೂ ಮರ ರಸ್ತೆಗಡ್ಡವಾಗಿ ಬಿದ್ದು ಬಿಡುವ ಅಪಾಯವಿದೆ. ಒಳರಸ್ತೆಯಾದರೂ ದಿನಂಪ್ರತಿ ಶಾಲಾ ವಾಹನ ಸೇರಿದಂತೆ ಹಲವಾರು ಸಾರ್ವಜನಿಕರು ಓಡಾಡುವ ರಸ್ತೆಯಿದು. ಹಾಗಾಗಿ ತಕ್ಷಣದಲ್ಲೇ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಮಾಜಿ ಸದಸ್ಯ ಪವಿತ್ರ ರೈ ಸ್ಥಳದಲ್ಲಿ ಉಪಸ್ಥಿತರಿದ್ದು, ತಹಸೀಲ್ದಾರಿಗೆ ಮಾಹಿತಿ ನೀಡಿದರು.

ಭಾನುವಾರ ತಹಸೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ, ಸಂಬಂಧಪಟ್ಟವರಿಗೆ ಮರ ತೆರವು ಮಾಡಲು ಸೂಚನೆ ನೀಡಿದರು. ಅದರಂತೆ ಭಾನುವಾರವೇ ಮರ ತೆರವು ಮಾಡಲಾಯಿತು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

1 of 127