tamanvi
ಸ್ಥಳೀಯ

ವಿಟ್ಲ: ‘ಸ್ವರ ಸಿಂಚನ ಸಂಗೀತೋತ್ಸವ–2026’ : ಡಾ. ಈಶ್ವರ ಭಟ್ ದಂಪತಿಗೆ ಸ್ವರ ಸಿಂಚನ ಪುರಸ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

ಪೆರ್ನಾಜೆ: ವಿಟ್ಲ ಸ್ವರ ಸಿಂಚನ ಸಂಗೀತ ಶಾಲೆ ಹಾಗೂ ಪಡಿಬಾಗಿಲು ಶಾಖೆಯ ವಿದ್ಯಾರ್ಥಿಗಳಿಂದ ‘ಸ್ವರ ಸಿಂಚನ ಸಂಗೀತೋತ್ಸವ–2026’ ಕಾರ್ಯಕ್ರಮವು ಸೆ. 6ರಂದು ವಿಟ್ಲ ಶ್ರೀ ಭಗವತಿ ದೇವಸ್ಥಾನದ ಸಿಂಹಾಸನದ ವಿಶೇಷ ಪೂಜಾ ಮಂಟಪದಲ್ಲಿ ನಡೆಯಿತು.

ಪಶುವೈದ್ಯರಾದ ಡಾ. ಈಶ್ವರ ಭಟ್ ಕಾಶಿಮಠ ಅವರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ‘ಸ್ವರ ಸಿಂಚನ ಪುರಸ್ಕಾರ–2026’ ಅನ್ನು ಡಾ. ಈಶ್ವರ ಭಟ್ ದಂಪತಿಗೆ ನೀಡಿ ಗೌರವಿಸಲಾಯಿತು. ಪುರಸ್ಕಾರ ಸ್ವೀಕರಿಸಿದ ಡಾ. ಈಶ್ವರ ಭಟ್ ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ವಿಟ್ಲ ಶ್ರೀ ಭಗವತಿ ದೇವಸ್ಥಾನದ ವ್ಯವಸ್ಥಾಪಕ ಕೇಶವ ಆರ್.ವಿ., ವಯಲಿನ್ ವಾದಕ ಪ್ರಭಾಕರ ಕುಂಜಾರು, ಮೃದಂಗ ವಾದಕ ಡಾ. ಬಿ.ಆರ್. ನಾರಾಯಣ ಪ್ರಕಾಶ್, ರವಿಶಂಕರ್ ಸಿ. ಮೂಡಂಬೈಲು, ಪಡಿಬಾಗಿಲಿನ ಗೋಪಾಲಕೃಷ್ಣ ನಾಯಕ್ ಹಾಗೂ ಸಂಗೀತ ಶಿಕ್ಷಕಿ ಸವಿತಾ ಕೋಡಂದೂರು ಉಪಸ್ಥಿತರಿದ್ದರು.

ಕೇಶವ ಆರ್.ವಿ. ಅವರು ಸಂದರ್ಭೋಚಿತವಾಗಿ ಮಾತನಾಡಿದರು. ವಿದ್ಯಾರ್ಥಿನಿ ಸಿಂಚನ ಲಕ್ಷ್ಮಿ ಕೋಡಂದೂರು ಪ್ರಾರ್ಥಿಸಿದರು. ಅಮೂಲ್ಯ ಅರವಿಂದ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಸ್ವರ ಸಿಂಚನ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ನಡೆಯಿತು. ವಯಲಿನ್‌ನಲ್ಲಿ ಪ್ರಭಾಕರ ಕುಂಜಾರು ಹಾಗೂ ಶ್ರೀಪ್ರಿಯಾ ಕೆ. ಪರಕ್ಕಜೆ ಮತ್ತು ಮೃದಂಗದಲ್ಲಿ ಬಿ. ನಾರಾಯಣ ಪ್ರಕಾಶ್ ಸಹಕರಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಪುತ್ತೂರು: ಪ್ರೆಸ್ ಕ್ಲಬ್ ಅವರಣದಲ್ಲಿ ಶಾಸಕರ ಬೆಂಬಲಿಗರಿಂದ ಹಕೀಂ ಕೂರ್ನಡ್ಕ ಪ್ರೆಸ್‌ಮೀಟ್‌ ತಡೆ ಯತ್ನ ..!!

ಪುತ್ತೂರು: ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ಪ್ರೆಸ್‌ಮೀಟ್ ನಡೆಸಲು ಆಗಮಿಸಿದ್ದ…

1 of 134