tamanvi
ಧಾರ್ಮಿಕ

ಪೋಳ್ಯ ಮಠದ ಬ್ರಹ್ಮಕಲಶ: ಪುತ್ತೂರು ಶ್ರೀ ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ಏಕಾದಶ ರುದ್ರ ಪಾರಾಯಣ, ಪ್ರಾರ್ಥನೆ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಪೋಳ್ಯ ಶ್ರೀ ಲಕ್ಷ್ಮೀವೆಂಕಟರಮಣ ಮಠದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏಕಾದಶ ರುದ್ರ ಪಾರಾಯಣ ಸೇವೆ ನಡೆದು, ದೇವರಿಗೆ ಪ್ರಾರ್ಥನೆ ಸಲ್ಲಿಸಲಾಯಿತು.

2027ರ ಫೆ. 8ರಿಂದ ಪೋಳ್ಯ ಶ್ರೀ ಲಕ್ಷ್ಮೀವೆಂಕಟರಮಣ ಮಠದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಮಠದ ವ್ಯವಸ್ಥಾಪನಾ ಸಮಿತಿ, ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳಿಂದ ಶ್ರೀ ಮಹಾಲಿಂಗೇಶ್ವರ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಉಮಾಶಂಕರ ಎದುರ್ಕಳ, ಜೀರ್ಣೋಧ್ದಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ. ಕೃಷ್ಣಪ್ರಸನ್ನ, ಪ್ರಧಾನ ಕಾರ್ಯದರ್ಶಿ ಡಾ. ಶಶಿಧರ್ ಕಜೆ, ಕೋಶಾಧಿಕಾರಿ ಮಂಜಳಗಿರಿ ನಾರಾಯಣ ಭಟ್, ಸದಸ್ಯರುಗಳಾದ ಕೊಡಿಪ್ಪಾಡಿ ರಾಮಚಂದ್ರ ಭಟ್ ಪೋಳ್ಯ, ನಂದಕಿಶೋರ್ ಪೋಳ್ಯ, ಜಯಾನಂದ, ರಮೇಶ್ ಪದೆಂಜಾರು, ಈಶ್ಟರ ಗೌಡ ಪುಳಿತ್ತಡಿ, ಕೊಡಿಪ್ಪಾಡಿ ಪ್ರೇಮ ಭಟ್ ಪೋಳ್ಯ, ಸಂಧ್ಯಾ ಕಜೆ, ಜಯಲಕ್ಷ್ಮೀ ಮುರ, ಅನುರಾಧಾ ಮುರ, ತುಳಸಿ ಮುರ ಮುಂತಾದವರು ಉಪಸ್ಥಿತರಿದ್ಧರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts