ರಾಮೇಶ್ವರಂನಲ್ಲಿರುವ ಡಾ. ಎ.ಪಿ.ಜೆ., ಅಬ್ದುಲ್ಕಲಾಂ ಅಂತಾರಾಷ್ಟ್ರೀಯ ಪ್ರತಿಷ್ಠಾನದ ವತಿಯಿಂದ ಧಮ೯ಸ್ಥಳದ ಮಂಜೂಷಾ ವಾಹನಗಳ ಮ್ಯೂಸಿಯಂನಲ್ಲಿ ಪ್ರದಶ೯ನಕ್ಕೆ ಇಡಲು ಅಬ್ದುಲ್ ಕಲಾಂ ಬಳಸಿದ ಟಾಟಾ ನಾನೋ ಕಾರು ಮತ್ತು ಅದರ ದಾಖಲೆ ಪತ್ರಗಳನ್ನು ಹೆಗ್ಗಡೆಯವರಿಗೆ ನೀಡಲಾಯಿತು.
ಡಾ. ಎ.ಪಿ.ಜೆ., ಅಬ್ದುಲ್ ಕಲಾಂ ಧಮ೯ಸ್ಥಳಕ್ಕೆ ಭೇಟಿ ನೀಡಿದ ಸಂದಭ೯ವನ್ನು ಸ್ಮರಿಸಿದ ಹೆಗ್ಗಡೆಯವರು, ಅವರ ಸರಳ ವ್ಯಕ್ತಿತ್ವ, ಸರ್ವಧಮ೯ ಸಮನ್ವಯ ನೀತಿ, ದೇವರ ಮೇಲಿನ ದೃಢಭಕ್ತಿ ಮತ್ತು ವಿಶ್ವಾಸವನ್ನು ನೆನೆಪಿಸಿಕೊಂಡರು. ಮಕ್ಕಳೊಂದಿಗೆ ಮಕ್ಕಳಾಗಿ ಮುಕ್ತವಾಗಿ ಬೆರೆತ ಸಂದಭ೯ ಮತ್ತು ಸರಳ ವ್ಯಕ್ತಿತ್ವವನ್ನು ಮರೆಯಲು ಸಾಧ್ಯವೇ ಇಲ್ಲ ಎಂದು ಹೇಳಿದರು.
ಅವರ ಸ್ಮರಣಾಥ೯ ತನಗೆ ನೀಡಿದ ಎರಡು ಅಮೂಲ್ಯ ವಸ್ತುಗಳಾದ ಟಾಟಾ ನಾನೋ ಕಾರು ಮತ್ತು ಅಪೂವ೯ ಪೆನ್ನು ಬಗ್ಗೆ ಹೆಗ್ಗಡೆಯವರು ಕೃತಜ್ಞತೆ ವ್ಯಕ್ತಪಡಿಸಿದರು.
ಡಾ. ಎ.ಪಿ.ಜೆ., ಅಬ್ದುಲ್ಕಲಾಂ ಅಂತಾರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಡಾ. ಎ.ಪಿ.ಜೆ.ಎಂ.. ನಝೀಮಾ ಮರೈಕಾಯಲ್, ಕಾಯ೯ದಶಿ೯ ಎ.ಪಿ.ಜೆ.ಎಂ.. ಜೈನೀಲಾಭಿ ಡೀಮ್ ಮತ್ತು ಸಹಸಂಸ್ಥಾಪಕ ಎ.ಪಿ.ಜೆ.ಎಂ.. ಶೇಖ್ಸಲೀಂ ಉಪಸ್ಥಿತರಿದ್ದರು.
ಹೆಗ್ಗಡೆಯವರು ಪ್ರತಿಷ್ಠಾನಕ್ಕೆ ಕೃತಜ್ಞತೆ ವ್ಯಕ್ತಪಪಡಿಸಿ ದಾನಿಗಳನ್ನು ಗೌರವಿಸಿದರು. ಶ್ರೀ ಕ್ಷೇತ್ರ ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿ.ಇ.ಒ. ಅನಿಲ್ ಕುಮಾರ್ ಸ್ವಾಗತಿಸಿ ಕಾಯ೯ಕ್ರಮ ನಿವ೯ಹಿಸಿದರು.






















