tamanvi
ಕರಾವಳಿ

ರೋಟರಾಕ್ಟ್ ಕ್ಲಬ್ ಪುತ್ತೂರು ವತಿಯಿಂದ ಮಕ್ಕಳ ದಿನಾಚರಣೆ ಕಿಟ್ ಹಾಗೂ ಪಾದರಕ್ಷೆ ವಿತರಣೆ 

ರೋಟರಾಕ್ಟ್ ಕ್ಲಬ್ ಪುತ್ತೂರು ವತಿಯಿಂದ ಮಕ್ಕಳ ದಿನಾಚರಣೆಯ ಪ್ರಯುಕ್ತ ವಿವಿಧ ಆಟೋಟ ಸ್ಪರ್ಧೆ ಆಯೋಜಿಸಿ ಬಹುಮಾನ ಹಾಗೂ ಎಲ್ಲಾ ಪುಟಾಣಿಗಳಿಗೆ  ಡ್ರಾಯಿಂಗ್ ಕಿಟ್ ಮತ್ತು ಪಾದರಕ್ಷೆಗಳನ್ನು ವಿತರಿಸಲಾಯಿತು. 

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು:  ನ.27ರಂದು ರೆಂಜಲಾಡಿ ಅಂಗನವಾಡಿ ಕೇಂದ್ರದಲ್ಲಿ ರೋಟರಾಕ್ಟ್ ಕ್ಲಬ್ ಪುತ್ತೂರು ವತಿಯಿಂದ ಮಕ್ಕಳ ದಿನಾಚರಣೆಯ ಪ್ರಯುಕ್ತ ವಿವಿಧ ಆಟೋಟ ಸ್ಪರ್ಧೆ ಆಯೋಜಿಸಿ ಬಹುಮಾನ ಹಾಗೂ ಎಲ್ಲಾ ಪುಟಾಣಿಗಳಿಗೆ  ಡ್ರಾಯಿಂಗ್ ಕಿಟ್ ಮತ್ತು ಪಾದರಕ್ಷೆಗಳನ್ನು ವಿತರಿಸಲಾಯಿತು. 

ಕಿಟ್ ನ ಪ್ರಾಯೋಜಕತ್ವವನ್ನು ರೋ. ಹಿಮಾಂಶು, ರೋ. ನವೀನ್ ಚಂದ್ರ, ರೋ. ಸುಶಾಂತ್,ರೋ. ಪುರುಷೋತ್ತಮ್, ರೋ. ನವ್ಯ ಮತ್ತು ರೋ. ಮಹೇಶ್ ಚಂದ್ರ ವಹಿಸಿಕೊಂಡರು.

ಪಾದುಕೆಗಳ ಪ್ರಾಯೋಜಕತ್ವವನ್ನು ರೋಟರಿ ಕ್ಲಬ್ ಪುತ್ತೂರು ಇದರ ಖಜಾಂಜಿ ರೊ. ಎಂ ಜಿ ರಫೀಕ್ ವಹಿಸಿದ್ದು, ಪಾದರಕ್ಷೆ ವಿತರಣೆ ರೋಟರಾಕ್ಟ್ ಕ್ಲಬ್ ನ 2024-25 ನೇ ಸಾಲಿನ ವಾರ್ಷಿಕ ಯೋಜನೆಗಳಲ್ಲೊಂದಾಗಿದೆ. 

ಕಾರ್ಯಕ್ರಮದಲ್ಲಿ ಕ್ಲಬ್ ನ ಅಧ್ಯಕ್ಷ ರೋ. ಪಿ ವಿ ಸುಬ್ರಮಣಿ, ಎಸ್ ಡಿ ಎಂ ಸಿ ಅಧ್ಯಕ್ಷ ಹಮೀದ್, ಅಂಗನವಾಡಿ ಕಾರ್ಯಕರ್ತೆ ಪುಷ್ಪ, ಆಶಾ ಕಾರ್ಯಕರ್ತೆ ರಾಜೀವಿ ಹಾಗೂ ಕ್ಲಬ್ ನ ಕಾರ್ಯದರ್ಶಿ ರೋ. ವಿಶಾಲ್ ಎ, ಮಾಜಿ ವಲಯ ಪ್ರತಿನಿಧಿ ರೋ. ನವೀನ್ ಚಂದ್ರ, ಜಿಲ್ಲಾ ಕ್ರೀಡಾ ಕಾರ್ಯದರ್ಶಿ ರೋ. ಎಡ್ವರ್ಡ್, ಪದಾಧಿಕಾರಿಗಳಾದ ರೋ. ನವನೀತ್, ರೋ. ಹರ್ಷಿತ್, ರೋ.ಸುಶಾಂತ್, ರೋ. ಶಶಿಧರ್ ಹಾಗೂ ಮಕ್ಕಳ ಹೆತ್ತವರು ಪೋಷಕರು ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಮಂಗಳೂರು: ತಂಗಿಯ ಸಾವಿನಿಂದ ನೊಂದಿದ್ದ ಅಣ್ಣನೂ ಮೃತ್ಯು| ಎರಡು ತಿಂಗಳ ಅಂತರದಲ್ಲಿ ಕುಟುಂಬಕ್ಕೆ ಆಘಾತ

ಮಂಗಳೂರು: ತಂಗಿಯ ಸಾವಿನಿಂದ ತೀವ್ರವಾಗಿ ನೊಂದಿದ್ದ ಯುವಕನೊಬ್ಬ ಸಾವನ್ನಪ್ಪಿರುವ ಹೃದಯವಿದ್ರಾವಕ…

ಪುತ್ತೂರು ಚಲೋಗೆ ಅನುಮತಿ ನೀಡದಿರಿ: ಎಸ್.ಡಿ.ಪಿ.ಐ. | ಪಿ.ಜಿ. ಜಗನ್ನಿವಾಸ್ ರಾವ್ ಮನೆಗೆ ಚಲೊ ಮಾಡಿ: ಅನ್ವರ್ ಸಾದಾತ್

ಪುತ್ತೂರು: ಆ. 22ರಂದು ದರ್ಬೆಯಲ್ಲಿ ನಡೆದ ಸಣ್ಣ ಘಟನೆಯನ್ನು ಮುಂದಿಟ್ಟುಕೊಂಡು ಕಾನೂನು…