ಪುತ್ತೂರು: ಕುರಿಯ ಗ್ರಾಮದ ಪಾಲಿಂಜೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ನ.4ರಂದು ನಡೆಯಲಿರುವ 8ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆಯ ಅಂಗವಾಗಿ ನೂತನ ಸಮಿತಿಯನ್ನು ರಚಿಸಲಾಯಿತು.
ಗೌರವಾಧ್ಯಕ್ಷ ರೇಖನಾಥ್ ರೈ ಸಂಪ್ಯದಮೂಲೆ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಸಮಿತಿ ಪದಾಧಿಕಾರಿಗಳು:
ಅಧ್ಯಕ್ಷರು: ಯಶವಂತ ನಾಯಕ್ ಪಾದಲಾಡಿ
ಉಪಾಧ್ಯಕ್ಷರು: ಜ್ಯೋತಿ ರಮೇಶ್ ಅಂಗಿಂತಾಯ, ಶ್ವೇತಾ ರೈ, ವಿಶ್ವನಾಥ್ ನಾಯಕ್ ಅಮ್ಮುಂಜ
ಕಾರ್ಯದರ್ಶಿ: ಬ್ರಿಜೇಶ್ ಶೆಟ್ಟಿ
ಜೊತೆ ಕಾರ್ಯದರ್ಶಿ: ಈಶ್ವರ ಗೌಡ ನೆಕ್ಕರೆ
ಕೋಶಾಧಿಕಾರಿ: ರಾಘವೇಂದ್ರ ಅಂಗಿಂತಾಯ
ಸಂಘಟನಾ ಕಾರ್ಯದರ್ಶಿ: ದಿನೇಶ್ ಗೌಡ ಡೆಮ್ಮಲೆ
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಮಣ್ಣ ನಾಯಕ್ ಅಮ್ಮುಂಜ, ಸದಸ್ಯರಾದ ಸಂತೋಷ್ ರೈ, ರೇಖನಾಥ್ ರೈ ಸಂಪ್ಯದಮೂಲೆ, ಮಾಲಿನಿ ಹೆಗ್ಡೆ ಹಾಗೂ ಭಗವದ್ಭಕ್ತರು ಉಪಸ್ಥಿತರಿದ್ದರು.
ನ.4ರಂದು ನಡೆಯಲಿರುವ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆಯನ್ನು ಯಶಸ್ವಿಗೊಳಿಸಲು ನೂತನ ಸಮಿತಿ ಸಿದ್ಧತೆಗಳನ್ನು ಕೈಗೊಳ್ಳಲಿದೆ.





















