tamanvi
ಕರಾವಳಿ

ಶ್ರೀ ಮಹಾಭಾರತ ಸರಣಿಯಲ್ಲಿ ಸುಷೇಣ ವಧೆ ತಾಳಮದ್ದಳೆ, ಸುವರ್ಣ ಮಹೋತ್ಸವ ಸಮಿತಿಯ ಸಭೆ

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷ ಕಲಾ ಟ್ರಸ್ಟ್ ಇದರ ಸುವರ್ಣ ಮಹೋತ್ಸವ ಅಂಗವಾಗಿ ನಡೆಸಲಾಗುತ್ತಿರುವ  ಶ್ರೀ ಮಹಾಭಾರತ ಸರಣಿಯಲ್ಲಿ 120ನೇ ಕಾರ್ಯಕ್ರಮವಾಗಿ ಡಾ. ಸದಾಶಿವ ಭಟ್ ವಿರಚಿತ ಸುಷೇಣ ವಧೆ ತಾಳಮದ್ದಳೆ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಜರಗಿತು.

maithri

ಭಾಗವತರಾಗಿ ಪದ್ಮನಾಭ ಕುಲಾಲ್, ಸುರೇಶ್ ರಾವ್. ಬಿ, ಸುಧಾoಶು ಆಚಾರ್ಯ ಕಲ್ಲಡ್ಕ, ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ , ದಿವಾಕರ ಆಚಾರ್ಯ  ನೇರೆಂಕಿ, ಗುರುಮೂರ್ತಿ ಅಮ್ಮಣ್ಣಾಯ  ಭಾಗವಹಿಸಿದ್ದರು.

ಅರ್ಥಧಾರಿಗಳಾಗಿ ಸುಶಾಂತ್ ರಾವ್. ಬಿ (ಕೌರವ) ಪೂರ್ಣಿಮಾ ಪುತ್ತೂರಾಯ ( ಸಹದೇವ), ಹರಿಕಿರಣ್ ಕೊಯ್ಲ( ಕರ್ಣ), ವಿಜಯ ಕುಮಾರ್ ಕೊಯ್ಯುರು (ನಕುಲ), ದಿವಾಕರ ಆಚಾರ್ಯ ನೇರೆಂಕಿ (ಸುಷೇಣ), ಶ್ರೀಧರ ಎಸ್. ಪಿ ಕೃಷ್ಣಾಪುರ (ಭೀಮ ಸೇನ), ಶಲ್ಯ ಹಾಗೂ ಸೋಮಪ್ರಭೆ (ಶ್ರುತಿ) ಭಾಗವಹಿಸಿದ್ದರು.

ಬಳಿಕ ಸುವರ್ಣ ಮಹೋತ್ಸವ ಸಮಿತಿಯ ಸಭೆಯು ಟ್ರಸ್ಟ್ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಅಧ್ಯಕ್ಷತೆಯಲ್ಲಿ ಜರಗಿತು.

ಮೈಸೂರಿನ ಗಂಗೂಬಾಯಿ ಹಾನಗಲ್ ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಿಂದ ನಡೆಸಲಾದ ಯಕ್ಷಗಾನ ಡಿಪ್ಲೋಮೋ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಸಂಘದ ಕೋಶಾಧಿಕಾರಿ ಶೃತಿ ಅವರನ್ನು ಅಭಿನಂದಿಸಲಾಯಿತು.

ಸಮಿತಿಯ ಸಂಚಾಲಕ ರವೀಂದ್ರ ದರ್ಬೆ, ಸಹ ಸಂಚಾಲಕ ಹರೀಶ್ ನಾಯಕ್ ನಟಿಬೈಲು, ಗೋಪಾಲ ಶೆಟ್ಟಿ ಕಳೆoಜ ಸುಬ್ರಹ್ಮಣ್ಯ ರಾವ್ ಬಿ, ಕೆ ಮಹಾಲಿಂಗೇಶ್ವರ ಭಟ್, ಅಂಬಾ ಪ್ರಸಾದ್ ಪಾತಳ, ಸುರೇಶ್ ಪುತ್ತೂರಾಯ, ರಘುಪತಿ ಭಟ್ ಅನಾಬೆ, ಪುಂಡಿಕಾಯಿ ಶಂಕರನಾರಾಯಣ ಭಟ್, ಸೂರ್ಯನಾರಾಯಣ ಪುತ್ತೂರಾಯ ಮತ್ತು ಸಮಿತಿಯ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.

ಶೃತಿ ಸ್ವಾಗತಿಸಿ, ಗೀತಾ ಕುದ್ದಣ್ಣಾಯ ವಂದಿಸಿದರು. ಪುಷ್ಪಾ ತಿಲಕ್ ಕಾರ್ಯಕ್ರಮ ನಿರೂಪಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಪುತ್ತೂರಿಗೆ ತಡವಾಗಿ ಆಗಮಿಸುತ್ತಿರುವ ಸುಬ್ರಹ್ಮಣ್ಯ – ಮಂಗಳೂರು ಪ್ಯಾಸೆಂಜರ್ ರೈಲು: ಕ್ರಮ ಕೈಗೊಳ್ಳಲು ಸಂಸದರಿಗೆ ಆಗ್ರಹ!!

ಪುತ್ತೂರು: ಮಂಗಳೂರು – ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲು ಬೆಳಗ್ಗಿನ ಹೊತ್ತು ಕಬಕ- ಪುತ್ತೂರು…

ಅಶೋಕ್ ರೈಯ ಶಾಸಕ ಸ್ಥಾನ ಪುತ್ತಿಲ ಪರಿವಾರದ ಭಿಕ್ಷೆ: ರಾಜೇಶ್ ಬನ್ನೂರು | ಮುಂದಿನ ಚುನಾವಣೆಯಲ್ಲಿ ಅಶೋಕ್ ರೈ ಸೋಲು ಖಚಿತ!!

ಪುತ್ತೂರು: ಪ್ರತಿಪಕ್ಷದ ಕಾರ್ಯಕರ್ತರು ಅಭಿವೃದ್ಧಿ ಕಾರ್ಯ ಪರಿಶೀಲನೆ ಮಾಡುವುದನ್ನು ಸಹಿಸದ…